ಮೈಸೂರು: ಜಿಲ್ಲಾಡಳಿತ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ. ಸಾವಿನ ಸಂಖ್ಯೆ ನೋಡಿ ನನಗೆ ಆಘಾತವಾಯಿತು. ಮೈಸೂರು ನಗರ ವ್ಯಾಪ್ತಿಯಲ್ಲೇ 969 ಸೋಂಕಿತರು ಸಾವನ್ನಪ್ಪಿದ್ದಾರೆ. ಮೇ 1 ರಿಂದ 29ರ ವರೆಗೆ 969 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕವನ್ನು ಕೊಟ್ಟಿದೆ. 731 ಜನರ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಆರೋಪಿಸಿದ್ದಾರೆ.
ಈ ರೀತಿ ಲೆಕ್ಕ ಕೊಡುವುದಕ್ಕೆ ಐಎಎಸ್ ಏಕೆ ಬೇಕು? ಎಸ್ಎಸ್ಎಲ್ಸಿ ಓದಿದವರು ಕೊಡಬಹುದು. ಡಿಸಿ ರೋಹಿಣಿ ಸಿಂಧೂರಿ ತಮ್ಮ ಸಾರ್ವಜನಿಕ ಸೇವೆಯ ಎಲ್ಲವೂ ಇದೇ ರೀತಿ ಮೋಸದ್ದು. ಇಲ್ಲಿಗೆ ಕಳಂಕ ರಹಿತ ಒಳ್ಳೆಯ ಅಧಿಕಾರಿ ಬೇಕು. ಇದನ್ನು ನಾನು ಅವತ್ತೇ ಇದನ್ನು ಹೇಳಿದ್ದೆ. ಇದಕ್ಕಿಂತ ದಾಖಲಾತಿ ಬೇಕು ಅಂದರೆ ಸತ್ತವರ ಮನೆಗೆ ಹೋಗೋಣ. ಸಾವಿನ ಲೆಕ್ಕದ ಸಮಗ್ರ ತನಿಖೆಯಾಗಬೇಕು. ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳುವುದು ನಿಮಗೆ ಬಿಟ್ಟಿದ್ದು ಎಂದು ಸಾ.ರಾ.ಮಹೇಶ್ ಅಭಿಪ್ರಾಯಪಟ್ಟರು.
ಅಧಿಕಾರಿಗಳು ಏನೇ ಮಾಡಿದರು ನಂಬುತ್ತಾರೆ. ರಾಜಕಾರಣಿಗಳು ಸತ್ಯ ಹೇಳಿದರು ನಂಬುವುದಿಲ್ಲ. ಮೈಸೂರು ಜಿಲ್ಲಾಡಳಿತ ಸರ್ಕಾರಕ್ಕೂ ವಂಚನೆ ಮಾಡಿದೆ. ರೋಹಿಣಿ ಸಿಂಧೂರಿ ಬೇರೆಯವರ ಮೇಲೆ ಹಾಕುತ್ತಾರೆ. ಬೇರೆಯವರ ಮೇಲೆ ಹಾಕೋದರಲ್ಲಿ ಅವರು ಎಕ್ಸ್ಪರ್ಟ್. ಮೈಸೂರು ಜಿಲ್ಲೆಯಲ್ಲಿ 3 ಸಾವಿರ ಜನ ಮೃತಪಟ್ಟಿದ್ದಾರೆ. ನೊಂದಂತಹ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿ. ನಿಮ್ಮ ಲೆಕ್ಕದ ಪ್ರಕಾರ ಉಳಿದವರಿಗೆ ಪರಿಹಾರ ಹೇಗೆ? ಎಂದು ಪ್ರಶ್ನಿಸಿದ ಅವರು ಮಾನವೀಯತೆ, ಮನುಷ್ಯತ್ವ, ತಾಯಿ ಹೃದಯವೇ ಇಲ್ವಾ? ಸರ್ಕಾರವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ. ಇದೇ ವಿಷಯವನ್ನು ನಾನು ಸಿಎಂ ವಿಸಿಯಲ್ಲಿ ಹೇಳಿದ್ದೇನೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತೆ. ಮಾನವ ಹಕ್ಕುಗಳ ಆಯೋಗ, ರಾಜ್ಯಪಾಲರಿಗೆ ದೂರು ನೀಡುತ್ತೇನೆ. ಸಿಎಂ ಯಡಿಯೂರಪ್ಪ ಅವರಿಗೆ ಕಳುಹಿಸಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
ಉಸಿರಾಟದ ಸಮಸ್ಯೆ, ಕೊರೊನಾದಿಂದ ಬಿಹಾರದಲ್ಲಿ ನಾಲ್ವರು ಮಕ್ಕಳ ಸಾವು
Central Vista ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್
(Sa Ra Mahesh alleges that Mysore District Administration hide the corona death cases number)
Published On - 11:41 am, Mon, 31 May 21