ಚನ್ನಗಿರಿ ಶಾಸಕರ ಮನೆ ಅಂಗಳದಲ್ಲಿ ಬೆಳೆಸಿದ್ದ ಗಂಧದ ಮರ ಕಳ್ಳತನ

|

Updated on: Mar 13, 2021 | 6:39 PM

ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ ಹತ್ತು ವರ್ಷದಿಂದ ಪ್ಲಾಂಟ್ ಮಾಡಿದ್ದರು. ಆದರೆ ಬೆಳೆದಿದ್ದ ಸುಮಾರು ಎಂಡು ಗಂಧದ ಮರಗಳನ್ನು ಕಡಿದು ಹಾಕಿದ್ದಾರೆ.

ಚನ್ನಗಿರಿ ಶಾಸಕರ ಮನೆ ಅಂಗಳದಲ್ಲಿ ಬೆಳೆಸಿದ್ದ ಗಂಧದ ಮರ ಕಳ್ಳತನ
ಶಾಸಕ ಮಾಡಾಳ್ ವಿರೂಪಾಕ್ಷಪ್ಪ
Follow us on

ದಾವಣಗೆರೆ: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮನೆ ಅಂಗಳದ ಪ್ಲಾಂಟ್​ನಲ್ಲಿ ಬೆಳೆದಿದ್ದ ಗಂಧದ ಮರಗಳು ಕಳ್ಳತನವಾಗಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಎರಡು ಎಕರೆ ಪ್ರದೇಶದಲ್ಲಿ ಗಂಧ ಮತ್ತು ತೇಗದ ವನ ಬೆಳೆಸಿದ್ದರು. ಬೆಳಿಸಿದ ಮರಗಳಲ್ಲಿ 8 ಗಂಧದ ಮರ ಕತ್ತರಿಸಿ ಕಳ್ಳರು ಪರಾರಿಯಾಗಿದ್ದಾರೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ ಹತ್ತು ವರ್ಷದಿಂದ ಪ್ಲಾಂಟ್ ಮಾಡಿದ್ದರು. ಆದರೆ ಬೆಳೆದಿದ್ದ ಸುಮಾರು ಎಂಡು ಗಂಧದ ಮರಗಳನ್ನು ಕಡಿದು ಹಾಕಿದ್ದಾರೆ.

ಈ ರೀತಿ ಕಳ್ಳತನ ಮೊದಲು ನಡೆದಿರುವುದಲ್ಲ. ಈ ಮೊದಲು ಮೂರು ಬಾರಿ ಕಳ್ಳತನ ನಡೆದಿದ್ದು, ಈಗ ಈ ಕೃತ್ಯ ನಾಲ್ಕನೇ ಬಾರಿ ನಡೆಯುತ್ತಿದೆಯಂತೆ. ಕಳ್ಳತನ ಮಾಡಿದವರು ಯಾರು ಎಂದು ಇನ್ನು ತಿಳಿದುಬಂದಿಲ್ಲ. ಈ ಪ್ರಕರಣ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಶ್ವಾನದಳ ಚನ್ನಗಿರಿ ಪೊಲೀಸ್ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ 

ಒಳ ಉಡುಪಿನಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

ತನ್ನ ಬದಲು ಬೇರೆಯೊಬ್ಬನನ್ನು ಪರೀಕ್ಷೆ ಬರೆಯಲು ಕಳಸಿದ ‘ಮನೋಹರ್ ಭಾಯಿ ಎಮ್​ಬಿಬಿಎಸ್’ ಪೊಲೀಸರಿಗೆ ಸಿಕ್ಕಿಬಿದ್ದ!

Published On - 6:32 pm, Sat, 13 March 21