‘ಅಯ್ಯೋ ಪಾಪ ಅಂತೆ.. ಹೆಣ್ಣುಮಕ್ಕಳ ಹಿಂದೆ ಹೋಗಿ ಎಲ್ಲವನ್ನೂ ಬಿಚ್ಚಾಕೋಕೆ ನಾವು ಹೇಳಿದ್ವಾ?’
ಪಾಪ ಅಂತೆ, ಮಾಡಬಾರದ್ದು ಮಾಡಿ ಅಂತಾ ಹೇಳಿದ್ವಾ? ಹೆಣ್ಣುಮಕ್ಕಳ ಹಿಂದೆ ಹೋಗಿ ಎಲ್ಲವನ್ನೂ ಬಿಚ್ಚಾಕೋಕೆ ನಾವು ಹೇಳಿದ್ವಾ? ಎಂದು ಕೃಷ್ಣಭೈರೇಗೌಡ ಲೇವಡಿ ಮಾಡಿದರು.
ಶಿವಮೊಗ್ಗ: ಕರ್ನಾಟಕದ ಮರ್ಯಾದೆ ಬೀದಿ ಪಾಲು ಮಾಡಿದ್ದಾರೆ. ಮಹಿಳೆಯರಿಗೆ ಗೌರವ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಆದರೆ, ಲಜ್ಜೆಗೆಟ್ಟ ಲಂಪಟದ ನಾಯಕರು ಹೆದರುವ ಸ್ಥಿತಿ ಬಂದಿದೆ. ಭಸ್ಮಾಸುರನ ಸ್ಥಿತಿ ಬಿಜೆಪಿಯ ನಾಯಕರಿಗೆ ಬರಲಿದೆ ಎಂದು ‘ಕೈ’ ಸಮಾವೇಶದಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದರು.
ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಏಪರ್ಡಿಸಲಾಗಿರುವ ಜನಾಕ್ರೋಶ ಸಮಾವೇಶದಲ್ಲಿ ಕೃಷ್ಣಭೈರೇಗೌಡ ಬಿಜೆಪಿ ವಿರುದ್ಧ ಕಿಡಿಕಾರಿದರು. ಸೈನ್ಸ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾಜಿ ಸಚಿವರು ಮಾತನಾಡಿದರು.
ಚುನಾವಣೆಯಲ್ಲಿ ರಾಮನಾಮ ಜಪವನ್ನು ಮಾಡುತ್ತಾರೆ. ಆದರೆ ಮಾಡುವುದು ಮಾತ್ರ ರಾವಣನ ಕೆಲಸ ಎಂದು ಬಿಜೆಪಿಯ ನಾಯಕರ ವಿರುದ್ಧ ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದರು. ಬೀದಿಯಲ್ಲಿ ಹೋಗುವವರ ಕೈ ಎಳೆಯುತ್ತಾರೆ. ಲಜ್ಜೆಗೆಟ್ಟು ಹಾದಿಯಲ್ಲಿ ಹೋಗುವವರು ಇವರು ಎಂದು ಕೃಷ್ಣಭೈರೇಗೌಡ ಕಿಡಿಕಾರಿದರು.
‘ಹೆಣ್ಣುಮಕ್ಕಳ ಹಿಂದೆ ಹೋಗಿ ಎಲ್ಲವನ್ನೂ ಬಿಚ್ಚಾಕೋಕೆ ನಾವು ಹೇಳಿದ್ವಾ?’ ಕಳೆದ ವಾರ ಸಚಿವರಾಗಿದ್ದವರು ಕಣ್ತಪ್ಪಿಸಿ ಓಡಾಡ್ತಿದ್ದಾರೆ. ಇವರು ಇಂದು ಜನರ ಕಣ್ತಪ್ಪಿಸಿ ಓಡಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ರಮೇಶ್ ಜಾರಕಿಹೊಳಿಗೆ ಕಾಲೆಳೆದರು. ಪಾಪ ಅಂತೆ, ಮಾಡಬಾರದ್ದು ಮಾಡಿ ಅಂತಾ ಹೇಳಿದ್ವಾ? ಹೆಣ್ಣುಮಕ್ಕಳ ಹಿಂದೆ ಹೋಗಿ ಎಲ್ಲವನ್ನೂ ಬಿಚ್ಚಾಕೋಕೆ ನಾವು ಹೇಳಿದ್ವಾ? ಎಂದು ಕೃಷ್ಣಭೈರೇಗೌಡ ಲೇವಡಿ ಮಾಡಿದರು.
ಅಯ್ಯೋ ಪಾಪ ಅಂತೆ, ಹೆಣ್ಣು ಮಕ್ಕಳ ಸ್ಥಿತಿ ನೋಡಿ. ನಾಡಿನ ಹೆಣ್ಣು ಮಕ್ಕಳ ಸ್ಥಿತಿ ನೋಡಿ ಪಾಪ ಅನ್ನಬೇಕು. ಇವರಿಗೆ ಅಧಿಕಾರದ ಮದ ಏರಿದೆ. ನಮ್ಮ ಮಹಿಳೆಯರು ನಾಚುವಂತ ಸ್ಥಿತಿ ನಿರ್ಮಿಸಿದ್ದಾರೆ. ನಾವು ಮಹಿಳೆಯರ ಸ್ವಾಭಿಮಾನ ಮರುಸ್ಥಾಪಿಸಬೇಕಿದೆ ಎಂದು ರಮೇಶ್ ಹೆಸರು ಹೇಳದೆ ಕೃಷ್ಣಭೈರೇಗೌಡ ಟಾಂಗ್ ಕೊಟ್ಟರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಜನಾಕ್ರೋಶ ಸಮಾವೇಶ ನಡೆಯುತ್ತಿದೆ. ಸೈನ್ಸ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಪರಮೇಶ್ವರ್, ಮಾಜಿ ಸಚಿವರಾದ ಜಾರ್ಜ್, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಯು.ಟಿ.ಖಾದರ್, ಕೆ.ಆರ್.ರಮೇಶ್ ಕುಮಾರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಿದ್ದಾರೆ.
‘ನಿಮ್ಮ ರಾಮ ಸಿಡಿ ರಾಮ’ ನಿಮ್ಮ ರಾಮ ಸಿಡಿ ರಾಮ. ಆ ಸಿಡಿ ನಕಲಿಯೋ, ಅಸಲಿಯೋ ಗೊತ್ತಿಲ್ಲ. ರಾಮ ಮರ್ಯಾದಾ ಪುರುಷೋತ್ತಮ. ಆದರೆ, ಬಿಜೆಪಿಯವರು ರಾಮನ ಹೆಸರು ಹೇಳಿಕೊಂಡು ಈ ಕೆಲಸ ಮಾಡಿದ್ದಾರೆ. ಬಾಂಬೆಯಲ್ಲಿ ನೀವು ಏನು ಭಗವದ್ಗೀತೆ ಓದಿ.. ಯೋಗಾ ಮಾಡಿದ್ರಾ? ಎಂದು ಬಾಂಬೆಗೆ ಹೋದ ಶಾಸಕರು ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಟಾಂಗ್ ಕೊಟ್ಟರು.
ಪ್ರಕರಣ ದಾಖಲಿಸಲು ಎಸ್ಐಟಿಗೆ ಯಾವುದೇ ಅಧಿಕಾರವಿಲ್ಲ. ಕೋರ್ಟ್ ವಿಶೇಷ ತನಿಖಾ ತಂಡ ರಚಿಸಿದ್ದರೆ ಮಾತ್ರ ಅವಕಾಶವಿದೆ. ಕೇಸ್ ದಾಖಲಿಸಲು ವಿಶೇಷ ತನಿಖಾ ತಂಡಕ್ಕೆ ಅವಕಾಶವಿರುತ್ತೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
‘ದೇಶದಲ್ಲಿ ಪ್ರಸ್ತುತ ಮಾಧ್ಯಮ ಕ್ಷೇತ್ರವೂ ಕೂಡ ಸಂಕಷ್ಟದಲ್ಲಿದೆ’ ದೇಶದಲ್ಲಿ ಪ್ರಸ್ತುತ ಮಾಧ್ಯಮ ಕ್ಷೇತ್ರವೂ ಕೂಡ ಸಂಕಷ್ಟದಲ್ಲಿದೆ. 105 ದಿನಗಳಿಂದ ರೈತರು ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಹೋರಾತ್ರಿ ಪ್ರತಿಭಟನಾ ನಿರತ 200 ರೈತರ ಮೃತಪಟ್ಟಿದ್ದಾರೆ. ರೈತರ ಹೋರಾಟ, ಸಾವಿನ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿಲ್ಲ. ಸ್ವತಂತ್ರ ಭಾರತದಲ್ಲಿ ಇಂತಹ ಹೋರಾಟವೇ ನಡೆದಿರಲಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
‘ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ಕೇಸ್ ಹಾಕಿದ್ದಾರೆ’ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ಕೇಸ್ ಹಾಕಿದ್ದಾರೆ. ಭದ್ರಾವತಿ ಶಾಸಕ ಸಂಗಮೇಶ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯು ಬದುಕುವ ಅನುಮಾನ ಇದ್ದರೆ. ಅಂತಹ ಸಂದರ್ಭದಲ್ಲಿ ಮಾತ್ರಿ 307ರಡಿ ಕೇಸ್ ಹಾಕಬೇಕು. ನೀವು ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳ ಪೊಲೀಸರಲ್ಲ. ರಾಜ್ಯದ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಬರುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ರಮೇಶ್ ಕುಮಾರ್ ಕಿವಿಮಾತು ಹೇಳಿದರು.
ನೀವು ಸರ್ಕಾರದ ಪೊಲೀಸರು, ನೀವು ಹೀಗೆ ಮಾಡಬಹುದಾ? ‘ಕೈ’ ಶಾಸಕರ ವಿರುದ್ಧ ದೂರು ದಾಖಲಿಸಿರುವ ಬಗ್ಗೆ ಪ್ರಸ್ತಾಪ ಮಾಡಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನಿಸಿದರು.
‘ಮೂರು ತಿಂಗಳಲ್ಲಿ ಅವರಿಗೆ ನನ್ನ ಕುಟುಂಬದ ಶಾಪ ತಟ್ಟಲಿದೆ’ ಬಿಎಸ್ವೈ, ಈಶ್ವರಪ್ಪ, ರಾಘವೇಂದ್ರ ಹೇಳಿದಂತೆ ಕೇಳಬೇಕು. ಅವರು ಕತ್ತೆಗೆ 8 ಕಾಲು ಅಂದರೂ ನಾವು ಹೌದು ಅನ್ನಬೇಕು. ಇಲ್ಲ ಅಂದ್ರೆ ಅವರಿಗೆ ಪೆಟ್ಟು ಬೀಳುತ್ತದೆ ಎಂದು ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಶಾಸಕ ಸಂಗಮೇಶ್ವರ್ ಕಿಡಿಕಾರಿದರು.
ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ಮಾಡ್ತಿದೆ. ಮೂರು ತಿಂಗಳಲ್ಲಿ ಅವರಿಗೆ ನನ್ನ ಕುಟುಂಬದ ಶಾಪ ತಟ್ಟಲಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಸಂಗಮೇಶ್ವರ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾನೊಬ್ಬನೇ ಬಲಿಪಶು ಅಲ್ಲ, ಎಲ್ಲರಿಗೂ ಬ್ಲ್ಯಾಕ್‌ಮೇಲ್ ಮಾಡಲಾಗಿದೆ -ದೂರು ಸಲ್ಲಿಕೆ ಬಳಿಕ ರಮೇಶ್ ಪ್ರತಿಕ್ರಿಯೆ
Published On - 7:08 pm, Sat, 13 March 21