ರಮೇಶ್ ಜಾರಕಿಹೊಳಿಯವರಿಂದಲೇ ಸಿಡಿ ರಿಲೀಸ್ ಆಗಿದೆ; ಇದರಿಂದ ನನ್ನ ಪೋಷಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ -ಸಂತ್ರಸ್ತೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ
ರಮೇಶ್ ಜಾರಕಿಹೊಳಿಯವರಿಂದಲೇ ಸಿಡಿ ರಿಲೀಸ್ ಆಗಿದೆ. ಈ ವಿಡಿಯೋದಿಂದಾಗಿ ನನ್ನ ಮಾನ ಹರಾಜಾಗಿದೆ. ಇದರಿಂದ ನನ್ನ ತಂದೆ, ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನೂ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಸಿಡಿಯಲ್ಲಿ ಕಾಣಿಸಿಕೊಂಡಿರುವ ಸಂತ್ರಸ್ತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲ. ರಮೇಶ್ ಜಾರಕಿಹೊಳಿಯವರಿಂದಲೇ ಸಿಡಿ ರಿಲೀಸ್ ಆಗಿದೆ. ಈ ವಿಡಿಯೋದಿಂದಾಗಿ ನನ್ನ ಮಾನ ಹರಾಜಾಗಿದೆ. ಇದರಿಂದ ನನ್ನ ತಂದೆ, ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನೂ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಸಿಡಿಯಲ್ಲಿ ಕಾಣಿಸಿಕೊಂಡಿರುವ ಸಂತ್ರಸ್ತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಂತ್ರಸ್ತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಯಾರು ಈ ವಿಡಿಯೋ ಬಿಡುಗಡೆ ಮಾಡಿದ್ದಾರೋ ಗೊತ್ತಿಲ್ಲ. ನಾನು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡುತ್ತೇನೆ. ನನಗೆ, ನನ್ನ ಕುಟುಂಬಸ್ಥರಿಗೆ ರಕ್ಷಣೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಯುವತಿ ಹೇಳಿದ್ದಾರೆ.
‘ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ ರಮೇಶ್ ವಂಚಿಸಿದ್ದಾರೆ’ ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ ರಮೇಶ್ ವಂಚನೆ ಮಾಡಿದ್ದಾರೆ ಎಂದು ಸಿಡಿ ದೃಶ್ಯದಲ್ಲಿದ್ದ ಸಂತ್ರಸ್ತೆ ವಿಡಿಯೋದಲ್ಲಿ ಹೇಳಿದ್ದಾರೆ. ನನ್ನ ಮನೆ ಬಳಿ ಬಂದು ಜನರು ಕೇಳಿಕೊಂಡು ಹೋಗುತ್ತಿದ್ದಾರೆ. ನನಗೆ ಕೆಲಸ ಕೊಡಿಸುವುದಾಗಿ ರಮೇಶ್ ಹೇಳಿದ್ದರು. ಈಗ ನೋಡಿದರೆ ವಿಡಿಯೋಗಳನ್ನ ಹರಿ ಬಿಡುತ್ತಿದ್ದಾರೆ. ವಿಡಿಯೋ ಹೇಗೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.
FIR ದಾಖಲಾಗುತ್ತಿದ್ದಂತೇ ಸಿಡಿಯಲ್ಲಿದ್ದ ಸಂತ್ರಸ್ತೆ ಪ್ರತ್ಯಕ್ಷಳಾಗಿದ್ದಾಳೆ. ರಮೇಶ್ ಸಿಡಿಯಲ್ಲಿದ್ದ ಯುವತಿ ಪ್ರಕರಣದ ಕುರಿತು ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 34 ಸೆಕೆಂಡ್‌ಗಳ ಹೇಳಿಕೆಯನ್ನು ಯುವತಿ ಬಿಡುಗಡೆ ಮಾಡಿದ್ದಾರೆ.
‘ಯುವತಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಯುವತಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ದೂರು ನೀಡಿದ ಅರ್ಧ ಗಂಟೆಯಲ್ಲೇ ಯುವತಿ ಹೇಳಿಕೆ ಕೊಟ್ಟಿದ್ದಾರೆ ಎಂದು ಯುವತಿ ವಿಡಿಯೋ ಹೇಳಿಕೆ ಬಗ್ಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಎಸ್‌ಐಟಿಯವರು ಸೂಕ್ತ ತನಿಖೆ ನಡೆಸಲಿ. ಕಾನೂನು ಪ್ರಕಾರ ಯುವತಿಗೆ ರಕ್ಷಣೆ ಕೊಡಲಿ ಎಂದು ರಮೇಶ್ ಹೇಳಿದರು.
ಹೆಣ್ಣು ಮಗಳಾಗಿಯೂ ಇಷ್ಟೊಂದು ಷಡ್ಯಂತ್ರ ಮಾಡ್ತಿದ್ದಾರೆ. ನಾನು ನಿರಪರಾಧಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಎಷ್ಟು ಸಿಡಿ ಬೇಕಾದ್ರೂ ಅವರು ಬಿಡುಗಡೆ ಮಾಡಲಿ. ಕೆಲವರಿಗೆ ನನಗಿಂತ ಹೆಚ್ಚಿನ ವಿಷಯ ಗೊತ್ತಿದೆ ಎಂದು ಹೇಳಿದರು.
‘ರಾಜಕೀಯವಾಗಿ ಏನೇನು ಮಾಡ್ತಾರೋ ಮಾಡಲಿ’ ರಾಜಕೀಯವಾಗಿ ಏನೇನು ಮಾಡ್ತಾರೋ ಮಾಡಲಿ ಎಂದು ಯುವತಿ ವಿಡಿಯೋ ಹೇಳಿಕೆ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ನಾನು ಇನ್ನೂ ಯುವತಿ ವಿಡಿಯೋ ಹೇಳಿಕೆ ನೋಡಿಲ್ಲ. ರಮೇಶ್ ದೂರು ನೀಡಿದ ಬಗ್ಗೆಯೂ ನನಗೆ ಗೊತ್ತಿಲ್ಲ. ಎಲ್ಲವನ್ನೂ ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ನಾನೊಬ್ಬನೇ ಬಲಿಪಶು ಅಲ್ಲ, ಎಲ್ಲರಿಗೂ ಬ್ಲ್ಯಾಕ್‌ಮೇಲ್ ಮಾಡಲಾಗಿದೆ -ದೂರು ಸಲ್ಲಿಕೆ ಬಳಿಕ ರಮೇಶ್ ಪ್ರತಿಕ್ರಿಯೆ
Published On - 8:20 pm, Sat, 13 March 21