Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೊಬ್ಬನೇ ಬಲಿಪಶು ಅಲ್ಲ, ಎಲ್ಲರಿಗೂ ಬ್ಲ್ಯಾಕ್‌ಮೇಲ್ ಮಾಡಲಾಗಿದೆ -ದೂರು ಸಲ್ಲಿಕೆ ಬಳಿಕ ರಮೇಶ್​ ಪ್ರತಿಕ್ರಿಯೆ

ಅಧಿಕೃತವಾಗಿ ನಾನು ದೂರು ನೀಡಿದ್ದೇನೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಪ್ರತಿಕ್ರಿಯಿಸಿದರು. ನಮ್ಮ ವಕೀಲರು ಮಾಧ್ಯಮದ ಜೊತೆ ಮಾತನಾಡಬೇಡಿ ಅಂದಿದ್ದಾರೆ. ಆದ್ರೆ ನೀವೂ ಮುಂಜಾನೆಯಿಂದ ಕಾಯ್ತಿದ್ದೀರಿ ಅದಕ್ಕೆ ಮಾತನಾಡ್ತಿದ್ದೇನೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ನಾನೊಬ್ಬನೇ ಬಲಿಪಶು ಅಲ್ಲ, ಎಲ್ಲರಿಗೂ ಬ್ಲ್ಯಾಕ್‌ಮೇಲ್ ಮಾಡಲಾಗಿದೆ -ದೂರು ಸಲ್ಲಿಕೆ ಬಳಿಕ ರಮೇಶ್​ ಪ್ರತಿಕ್ರಿಯೆ
ರಮೇಶ್​ ಜಾರಕಿಹೊಳಿ
Follow us
KUSHAL V
|

Updated on:Mar 13, 2021 | 8:33 PM

ಬೆಂಗಳೂರು: ಅಧಿಕೃತವಾಗಿ ನಾನು ದೂರು ನೀಡಿದ್ದೇನೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಪ್ರತಿಕ್ರಿಯಿಸಿದರು. ನಮ್ಮ ವಕೀಲರು ಮಾಧ್ಯಮದ ಜೊತೆ ಮಾತನಾಡಬೇಡಿ ಅಂದಿದ್ದಾರೆ. ಆದ್ರೆ ನೀವೂ ಮುಂಜಾನೆಯಿಂದ ಕಾಯ್ತಿದ್ದೀರಿ ಅದಕ್ಕೆ ಮಾತನಾಡ್ತಿದ್ದೇನೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ವಕೀಲರ ಸಲಹೆಯಂತೆ ನಾನು ಹೆಸರು ಉಲ್ಲೇಖಿಸಿಲ್ಲ. ನಾನೊಬ್ಬನೇ ಬಲಿಪಶು ಅಲ್ಲ, ಎಲ್ಲರಿಗೂ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಕೊನೆಯವರೆಗೂ ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಪ್ರಕಾರ ಮುಂದುವರಿಯುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಆರೋಪಿಗಳನ್ನು ವಶಕ್ಕೆ ಪಡೆದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನೂರಾರು ಕೋಟಿ ಖರ್ಚು ಮಾಡಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಯಶವಂತಪುರದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ದೂರು ನೀಡಿದ ಬಳಿಕ ರಮೇಶ್ ಮೊದಲ ಪ್ರತಿಕ್ರಿಯಿಸಿದರು.

2+3+4 ಪ್ರಮುಖ ಆರೋಪಿಗಳು. ಎಲ್ಲರಿಗೂ ಎಲ್ಲಾ ಗೊತ್ತಿದೆಯೆಂದು ರಮೇಶ್ ಜಾರಕಿಹೊಳಿ ಹೇಳಿದರು. ಇದು ಎಲ್ಲಾ ರಾಜಕೀಯವರು ಮಾಡಿರುವ ಷಡ್ಯಂತ್ರ. ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಅದಕ್ಕಾಗಿ ದೂರು ದಾರಿ ತಪ್ಪಿಸುವ ರೀತಿ ಮಾಡಬೇಡಿ ಎಂದು ರಮೇಶ್​ ಹೇಳಿದರು.

ಇವತ್ತು ಎಫ್ ಐಆರ್ ದಾಖಲಾಗಿದೆ. ನಾನು ಬೇಕಾದರೂ ವಿಚಾರಣೆಗೆ ಹೋಗ್ತಿನಿ. ನಾವೂ ನೇರವಾಗಿ ಆರೋಪಿಗಳ ಹೆಸರು ಹೇಳಿದರೇ ಕೇಸ್ ವೀಕ್ ಆಗ್ತದೆ. ನಾನು ನೇರವಾಗಿ ಹೆಸರು ಹೇಳುವುದು ತಪ್ಪಾಗ್ತದೆ. ಪೊಲೀಸರು ತುಂಬಾ ಸ್ಪೀಡ್ ಆಗಿ ತನಿಖೆ ಮಾಡ್ತಿದ್ದಾರೆ. ಇನ್ನು ಎರಡು ಮೂರು ದಿನಗಳ ಒಳಗೆ ಗೊತ್ತಾಗಬಹುದು. ಪ್ರಕರಣದ ಹಿಂದೆ ಇನ್ನೂ ತುಂಬಾ ಜನರು ಇದ್ದಾರೆ. ಅತಿ ಶೀಘ್ರದಲ್ಲೇ ಅವರ ಹೆಸರು ಬಯಲಿಗೆ ಬರುತ್ತವೆ ಎಂದು ರಮೇಶ್​ ಜಾರಕಿಹೊಳಿ ದೂರು ಸಲ್ಲಿಕೆ ಬಳಿಕ ಮಾತನಾಡಿದರು.

ಇನ್ನು, ಈ ಹಿಂದೆ, ಸದಾಶಿವನಗರ ಠಾಣೆಗೆ ರಮೇಶ್ ಜಾರಕಿಹೊಳಿ ಪರ ದೂರು ಸಲ್ಲಿಸಿದ ಮಾಜಿ ಸಚಿವರ ಆಪ್ತ ಎಂ.ವಿ.ನಾಗರಾಜ್ ರಮೇಶ್​ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರಿಗೆ ದೂರು ನೀಡಿದ ಬಳಿಕ ನಾಗರಾಜ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಮಾನ ಹಾನಿಯಾಗಿದೆ, ಸೂಕ್ತ ತನಿಖೆಗೆ ದೂರು ನೀಡಿದ್ದೇವೆ. ವಕೀಲರ ಸಲಹೆ ಮೇರೆಗೆ ದೂರಿನಲ್ಲಿ ಹೆಸರು ಉಲ್ಲೇಖಿಸಿಲ್ಲ. ರಾಜಕೀಯವಾಗಿ ಬೆಳೆಯುತ್ತಿರುವುದರಿಂದ ರಮೇಶ್​ ವಿರುದ್ಧ ಷಡ್ಯಂತ್ರ ನಡೆದಿದೆ. ನನ್ನ ವಿರುದ್ಧ ಷಡ್ಯಂತ್ರವೆಂದು ಎಂದು ದೂರಿನಲ್ಲಿ ರಮೇಶ್ ಉಲ್ಲೇಖಿಸಿದ್ದಾರೆ ಎಂದು ರಮೇಶ್ ಆಪ್ತ, ಮಾಜಿ ಶಾಸಕ ಎಂ.ವಿ.ನಾಗರಾಜ್ ಹೇಳಿದರು.

ಟಿವಿ9ಗೆ ಎಫ್‌ಐಆರ್‌ ಪ್ರತಿ ಲಭ್ಯ ಇದೀಗ, ಟಿವಿ9ಗೆ ಎಫ್‌ಐಆರ್‌ ಪ್ರತಿ ಲಭ್ಯವಾಗಿದೆ. ರಮೇಶ್‌ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ FIRನ ಪ್ರತಿ ಲಭ್ಯವಾಗಿದೆ. ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್ 34, 120ಬಿ, 385, 465, 469 ಸೆಕ್ಷನ್‌ ಅಡಿಯಲ್ಲಿ FIR ದಾಖಲಾಗಿದೆ.

ಐಪಿಸಿ 34- ಒಂದೇ ದುರುದ್ದೇಶದಿಂದ ಹಲವರ ಕೃತ್ಯ ಐಪಿಸಿ 120ಬಿ -ಅಪರಾಧ ಕೃತ್ಯ ನಡೆಸಲು ಒಳಸಂಚು 385-ಭಯ ಹುಟ್ಟಿಸಿ ಸುಲಿಗೆ ಮಾಡುವ ಪ್ರಯತ್ನ 465 – ನಕಲಿ ಕೃತ್ಯಕ್ಕೆ ಶಿಕ್ಷೆ 469-ಖೊಟ್ಟಿ ದಾಖಲೆ ಮೂಲಕ ಮಾನಹಾನಿ ಯತ್ನ

ದೂರಿನ ಪ್ರತಿಯಲ್ಲಿ ಸ್ಫೋಟಕ ಅಂಶ ಉಲ್ಲೇಖಿಸಿರುವ ರಮೇಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ದೂರಿನಲ್ಲಿ ಸ್ಪೋಟಕ ಅಂಶಗಳಿದೆ. ಮೋಸ ಮಾಡಿ 1 ನಕಲಿ ಸಿಡಿ ಸೃಷ್ಟಿಸಿ ಮಾನಸಿಕ ಹಿಂಸೆ ನೀಡಲು ಯತ್ನ ನಡೆದಿದೆ. ರಾಜಕೀಯವಾಗಿ ಮಾನಹಾನಿ ಮಾಡಿ ವಸೂಲಿಗೆ ಸಂಚು ನಡೆದಿದೆ. ಕೆಲವರು ಷಡ್ಯಂತ್ರ ರಚಿಸಿ ನಕಲಿ ಸಿಡಿ ತಯಾರಿಸಿದ್ದಾರೆ. ಅಂತರ್ಜಾಲದಲ್ಲಿ ಅಪ್‌ಲೋಡ್‌ಗೆ ಮತ್ತಿತರರ ಬಳಕೆಗೆ ನೀಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ದೂರಿನಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಜೊತೆಗೆ, ಸದಾಶಿವನಗರದಲ್ಲೇ 3 ತಿಂಗಳಿಂದ ನಿರಂತರ ಮಸಲತ್ತು ನಡೆದಿತ್ತು. 2020ರ ಡಿ.‌ 13ರಿಂದ 2021ರ ಮಾ.13ರವರೆಗೆ ಮಸಲತ್ತು ನಡೆದಿದೆ. ಆರೋಪಿಗಳ ಕಾಲಂನಲ್ಲಿ ನಾಟ್ ನೋನ್‌‌ ಎಂದು ಉಲ್ಲೇಖಿಸಿದ್ದಾರೆ. ಆದರೆ, ನನ್ನಿಂದ ಹಣವನ್ನು ಪಡೆಯಲು ಷಡ್ಯಂತ್ರ ನಡೆಸಿದ್ದಾರೆ ಎಂದು ದೂರಿನ ಪ್ರತಿಯಲ್ಲಿ ರಮೇಶ್ ಜಾರಕಿಹೊಳಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿಯವರಿಂದಲೇ ಸಿಡಿ ರಿಲೀಸ್ ಆಗಿದೆ; ಇದರಿಂದ ನನ್ನ ಪೋಷಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ -ಸಂತ್ರಸ್ತೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ

‘ಅಯ್ಯೋ ಪಾಪ ಅಂತೆ.. ಹೆಣ್ಣುಮಕ್ಕಳ ಹಿಂದೆ‌ ಹೋಗಿ ಎಲ್ಲವನ್ನೂ ಬಿಚ್ಚಾಕೋಕೆ ನಾವು ಹೇಳಿದ್ವಾ?’

Published On - 7:28 pm, Sat, 13 March 21

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ