ಬೆಂಗಳೂರು: ಶಶಿಕಲಾ ನಟರಾಜನ್ಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಶಶಿಕಲಾ ಶ್ವಾಸಕೋಶದಲ್ಲಿ ಇನ್ಫೆಕ್ಷನ್ ಉಂಟಾಗಿದೆ ಎಂದು ತಿಳಿದುಬಂದಿದೆ.
ಸದ್ಯ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಶಿಕಲಾಗೆ ಚಿಕಿತ್ಸೆ ಕೊಡಲಾಗುತ್ತಿದೆ. ಅಂದ ಹಾಗೆ, ಬೌರಿಂಗ್ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿದ್ದಾಗ ಅವರಿಗೆ ಕೊವಿಡ್ ನೆಗೆಟಿವ್ ವರದಿ ಬಂದಿತ್ತು. ಜೊತೆಗೆ, RTPCR ಮತ್ತು ಌಂಟಿಜೆನ್ ಟೆಸ್ಟ್ನಲ್ಲಿ ನೆಗೆಟಿವ್ ಬಂದಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಶಶಿಕಲಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ, ಸಿ.ಟಿ ಸ್ಕ್ಯಾನ್ನಲ್ಲಿ ಶಶಿಕಲಾ ನಟರಾಜನ್ಗೆ ಕೊರೊನಾ ದೃಢವಾಗಿದೆ. ಹಾಗಾಗಿ, ಐಸೋಲೇಷನ್ ವಾರ್ಡ್ನಲ್ಲಿ ಶಶಿಕಲಾ ನಟರಾಜನ್ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಟಿವಿ9ಗೆ ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅಕ್ರಮ ಆಸ್ತಿ ಗಳಿಕೆ ಕೇಸ್ನಲ್ಲಿ ಶಿಕ್ಷೆ ಅನುಭವಿಸ್ತಿರುವ ಮಾಜಿ ಸಿಎಂ ದಿ.ಜೆ.ಜಯಲಲಿತಾ ಆಪ್ತೆ ಶಶಿಕಲಾರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Published On - 10:30 pm, Thu, 21 January 21