ಸ್ವಾಭಾವಿಕವಾಗಿ ಸಿಎಂ ಕಚೇರಿಯಲ್ಲಿ ವರ್ಗಾವಣೆಗಳು ನಡೆಯುತ್ತವೆ; ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 16, 2023 | 3:29 PM

ನನ್ನ ಇಲಾಖೆಯಲ್ಲಿಯೇ ಒಂದೇ ಹುದ್ದೆಗೆ ಎರಡು ವರ್ಗಾವಣೆ ನಡೆದಿದೆ. ತಾಂತ್ರಿಕ ಸಮಸ್ಯೆಗಳಿಂದ ಅಥವಾ ಕಣ್ತಪ್ಪಿನಿಂದ ಈ ರೀತಿ ಆಗುತ್ತಿರುತ್ತದೆ. ಇಂತಹ ತಪ್ಪುಗಳನ್ನು ದೊಡ್ಡದು ಆಗುವ ರೀತಿ ಬಿಡಬಾರದು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸ್ವಾಭಾವಿಕವಾಗಿ ಸಿಎಂ ಕಚೇರಿಯಲ್ಲಿ ವರ್ಗಾವಣೆಗಳು ನಡೆಯುತ್ತವೆ; ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ
ಸತೀಶ್​ ಜಾರಕಿಹೊಳಿ
Follow us on

ಬೆಂಗಳೂರು, ನ.16: ಮುಖ್ಯಮಂತ್ರಿ ಕಚೇರಿಯಲ್ಲಿ ವರ್ಗಾವಣೆ ದಂಧೆ ಆರೋಪ ವಿಚಾರ ‘ಸ್ವಾಭಾವಿಕವಾಗಿ ಸಿಎಂ ಕಚೇರಿಯಲ್ಲಿ ವರ್ಗಾವಣೆಗಳು ನಡೆಯುತ್ತವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi)ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ನಾವು, ಉಸ್ತುವಾರಿಗಳು ಹಾಗೂ ಶಾಸಕರು ಕೂಡ ಪತ್ರ ಕೊಟ್ಟಿರುತ್ತಾರೆ. ವರ್ಗಾವಣೆ ನಡೆಯುತ್ತಿರುತ್ತದೆ. ಇದು ಹಿಂದಿನ ಸರ್ಕಾರದಲ್ಲೂ ಆಗುತ್ತಿತ್ತು, ಈಗಲೂ ಕೆಲವು ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.

ಒಂದೇ ಹುದ್ದೆಗೆ ಎರಡು ವರ್ಗಾವಣೆ

ಹೌದು, ನನ್ನ ಇಲಾಖೆಯಲ್ಲಿಯೇ ಒಂದೇ ಹುದ್ದೆಗೆ ಎರಡು ವರ್ಗಾವಣೆ ನಡೆದಿದೆ. ತಾಂತ್ರಿಕ ಸಮಸ್ಯೆಗಳಿಂದ ಅಥವಾ ಕಣ್ತಪ್ಪಿನಿಂದ ಈ ರೀತಿ ಆಗುತ್ತಿರುತ್ತದೆ. ಇಂತಹ ತಪ್ಪುಗಳನ್ನು ದೊಡ್ಡದು ಆಗುವ ರೀತಿ ಬಿಡಬಾರದು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದರು.

ಇದನ್ನೂ ಓದಿ:ವರ್ಗಾವಣೆ ದಂಧೆಯಲ್ಲಿ ಶಾಸಕ ಜೆಟಿ ಪಾಟೀಲ್ ಪಿಎ ಭಾಗಿ ಆರೋಪ; ಸಚಿವ ದಿನೇಶ್ ಗುಂಡೂರಾವ್ ಆಪ್ತ ಕಾರ್ಯದರ್ಶಿ ದೂರು

ಇನ್ನು ವರ್ಗಾವಣೆ ದಂಧೆ ಕುರಿತು ಕಾಂಗ್ರೆಸ್​ ವಿರುದ್ದ ಇತರ ಪಕ್ಷಗಳು ಟೀಕೆ ಮಾಡುತ್ತಿರುವ ಬೆನ್ನಲ್ಲೇ ಇದೀಗ ಸಿಎಂ ಹಾಗೂ ಅವರ ಪುತ್ರ, ಮಾಜಿ ಶಾಸಕ ಡಾ. ಯತೀಂದ್ರ ಅವರ ನಡುವಿನ ಆಡಿಯೋ ವೈರಲ್​ ಆಗಿದೆ. ‘ನಾನು ನೀಡಿದ ಲಿಸ್ಟ್​​ನದ್ದು ಮಾತ್ರ ಮಾಡಿ ಎಂದು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಯತೀಂದ್ರ ಅವರು ಸೂಚಿಸಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದಾರೆ.

ಸಿಎ ಸ್ಪಷ್ಟನೆ

ಇನ್ನು ಈ ವಿಷಯ ದೊಡ್ಡದಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ‘ಯತೀಂದ್ರ ಅವರು ವರ್ಗಾವಣೆ ಬಗ್ಗೆ ಮಾತಾಡಿಲ್ಲ. ಸಿಎಸ್​ಆರ್ ಫಂಡ್​ ವಿಚಾರವಾಗಿ ಯತೀಂದ್ರ ಮಾತಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ, ಹಾಗೆನಾದರೂ ವರ್ಗಾವಣೆ ದಂಧೆ ಮಾಡಿದ್ದಾದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:49 pm, Thu, 16 November 23