ಗ್ರೀನ್ ಸಿಗ್ನಲ್ ಕೊಟ್ಟ ಕೋರ್ಟ್: ಬಳ್ಳಾರಿಯಲ್ಲಿ ದೀಪಾವಳಿ ಪಟಾಕಿ ಹೊಡೆಯಲಿರುವ ಜನಾರ್ದನ ರೆಡ್ಡಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2022 | 7:08 PM

ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಬಳ್ಳಾರಿಯಲ್ಲಿ ದೀಪಾವಳಿ ಪಟಾಕಿ ಹೊಡೆಯಲಿದ್ದಾರೆ.

ಗ್ರೀನ್ ಸಿಗ್ನಲ್ ಕೊಟ್ಟ ಕೋರ್ಟ್: ಬಳ್ಳಾರಿಯಲ್ಲಿ ದೀಪಾವಳಿ ಪಟಾಕಿ ಹೊಡೆಯಲಿರುವ ಜನಾರ್ದನ ರೆಡ್ಡಿ
Janardhana Reddy
Follow us on

ನವದೆಹಲಿ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ (G Janardhana Reddy) ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ (Supreme Court )​ ಅನುಮತಿ ನೀಡಿದೆ.

ಮಗಳ ಹೆರಿಗೆ ಹಿನ್ನೆಲೆ ಬಳ್ಳಾರಿಗೆ ತೆರಳಲು ಅನುಮತಿ ಕೋರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಒಂದು ತಿಂಗಳ ಕಾಲಾವಕಾಶ ನೀಡಿದೆ. ನ್ಯಾ.ಎಂ.ಆರ್.ಶಾ ಅವರ ಪೀಠ, ನವೆಂಬರ್ 6ರ ವರೆಗೆ ಬಳ್ಳಾರಿ(Bellary) ಭೇಟಿ ಹಾಗೂ ಅಲ್ಲಿ ವಾಸ್ತವ್ಯಕ್ಕೆ ಅನುಮತಿ ನೀಡಿ ಇಂದು(ಅಕ್ಟೋಬರ್ 10) ಆದೇಶ ಹೊರಡಿಸಿದೆ.

ಇದನ್ನೂ ಓದಿ: ಹಿಂದೆ ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಈಗ ಶಾಸಕನಾದರೂ ಸಾಕು ಅನ್ನುತ್ತಾರೆ!

ಮಗಳ 2ನೇ ಹೆರಿಗೆ ಹಿನ್ನೆಲೆ 2 ತಿಂಗಳ ಕಾಲ ಮಗಳ ಜೊತೆಗೆ ಇರಬೇಕಿದೆ. ಇದಕ್ಕಾಗಿ ಬಳ್ಳಾರಿಗೆ ತೆರಳಲು ಅನುಮತಿ ನೀಡಬೇಕು ಎಂದು ಜನಾರ್ದನ ರೆಡ್ಡಿ, ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಅನುಮತಿ ನೀಡಲು ಸಿಬಿಐ ವಿರೋಧ ವ್ಯಕ್ತಪಡಿಸಿತ್ತು. 2 ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿದ್ದರೆ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

ಸಿಬಿಐ ಆಕ್ಷೇಪದ ಬಳಿಕ ಕನಿಷ್ಠ 1 ತಿಂಗಳ ಕಾಲವಾದರೂ ಅನುಮತಿ ನೀಡಬೇಕು ಮತ್ತು ನನ್ನ ಮೇಲೆ ಪೊಲೀಸ್ ನಿಗಾ ಇಡಬಹುದು ಎಂದು ಜನಾರ್ದನ ರೆಡ್ಡಿ ಕೇಳಿಕೊಂಡಿದ್ದರು. ಈ ವಾದ ಪ್ರತಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್, ರೆಡ್ಡಿ ಬಳ್ಳಾರಿಗೆ ತೆರಳಲು ಅನುಮತಿ ನೀಡಿದೆ.

ಷರತ್ತು ವಿಧಿಸಿದ್ದ ಕೋರ್ಟ್

 ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈಗಾಗಲೇ ಜನಾರ್ದನ ರೆಡ್ಡಿ ಜೈಲು ಪಾಲಾಗಿ ಜಾಮೀನಿನ ಮೇಲೆ ಆಚೆ ಬಂದಿದ್ದಾರೆ. ಆದ್ರೆ, ರೆಡ್ಡಿ ಪ್ರಬಾವಿಯಾಗಿರುವುದರಿಂದ ಸಾಕ್ಷ್ಯ ನಾಶ ಮಾಡುತ್ತಾರೆಂದು ಕೋರ್ಟ್, ಅವರಿಗೆ ಬಳ್ಳಾರಿ ಜಿಲ್ಲೆಗೆ ತೆರಳಲು ನಿರ್ಬಂಧಿಸಿದೆ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಬಳ್ಳಾರಿ ಜಿಲ್ಲೆಗೆ ಹೋಗಬೇಕೆಂದರೆ ಕೋರ್ಟ್ ಅನುಮತಿ ಪಡೆಯಬೇಕಾಗಿದೆ. ಈ ಹಿಂದೆಯೂ ಸಹ ರೆಡ್ಡಿ, ಸುಪ್ರೀಂ ಕೋರ್ಟ್​ನ ಅನುಮತಿ ಪಡೆದುಕೊಂಡು ಬಳ್ಳಾರಿಗೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Mon, 10 October 22