ಹಿಂದೆ ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಈಗ ಶಾಸಕನಾದರೂ ಸಾಕು ಅನ್ನುತ್ತಾರೆ!
ಜನಾರ್ಧನ ರೆಡ್ಡಿಯವರು ಬುಧವಾರ ಬಳ್ಳಾರಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತಾಡುವಾಗ ಅವರು ಮನಸ್ಸು ಮಾಡಿದರೆ ನಾನು ಮುಖ್ಯಮಂತ್ರಿ ಕೂಡ ಆಗಬಲ್ಲೆ. ಆದರೆ ಅದೆಲ್ಲ ನನಗೆ ಬೇಕಿಲ್ಲ, ಶಾಸಕನಾದರೆ ಸಾಕು ಎಂದು ಹೇಳುತ್ತಾರೆ.
Ballari: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಅವರಿಗೆ ರಾಜಕೀಯಕ್ಕೆ ವಾಪಸ್ಸಾಗುವ ಉಮೇದಿ ಹೆಚ್ಚುತ್ತಿದೆ. ಆಕ್ರಮ ಗಣಿಗಾರಿಕೆ (illegal mining) ಪ್ರಕರಣದಲ್ಲಿ ಸೆರೆವಾಸ ಅನುಭವಿಸಿ ಹೊರ ಬಂದು ಬಹಳ ದಿನಗಳಾದರೂ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿಲ್ಲ. ಬಿಜೆಪಿ ಶಾಸಕನಾಗಿರುವ ಅವರ ಸಹೋದರ ಸೋಮಶೇಖರ್ ರೆಡ್ಡಿಯುವರಿಗೆ (Somashekhar Reddy) ಮಂತ್ರಿಯಾಗುವ ಆಸೆಯಿದೆ. ಜನಾರ್ಧನ ರೆಡ್ಡಿಯವರು ಬುಧವಾರ ಬಳ್ಳಾರಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತಾಡುವಾಗ ಅವರು ಮನಸ್ಸು ಮಾಡಿದರೆ ನಾನು ಮುಖ್ಯಮಂತ್ರಿ ಕೂಡ ಆಗಬಲ್ಲೆ. ಆದರೆ ಅದೆಲ್ಲ ನನಗೆ ಬೇಕಿಲ್ಲ, ಶಾಸಕನಾದರೆ ಸಾಕು ಎಂದು ಹೇಳುತ್ತಾರೆ. ಅವರು ತೆಲುಗು ಭಾಷೆಯಲ್ಲಿ ಮಾತಾಡುತ್ತಿದ್ದಾರೆ ಮತ್ತು ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos