ಮನಸ್ಸು ಮಾಡಿದರೆ ಮುಖ್ಯಮಂತ್ರಿ ಕೂಡ ಆಗಬಲ್ಲೆ ಅನ್ನುವ ಮೂಲಕ ಜನಾರ್ಧನ ರೆಡ್ಡಿ ಬಿಜೆಪಿಗೆ ಅಲ್ಟಿಮೇಟಮ್ ನೀಡಿದರೇ?

ಮನಸ್ಸು ಮಾಡಿದರೆ ಮುಖ್ಯಮಂತ್ರಿ ಕೂಡ ಆಗಬಲ್ಲೆ ಅನ್ನುವ ಮೂಲಕ ಜನಾರ್ಧನ ರೆಡ್ಡಿ ಬಿಜೆಪಿಗೆ ಅಲ್ಟಿಮೇಟಮ್ ನೀಡಿದರೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 22, 2022 | 1:41 PM

ನಾನು ಮನಸ್ಸು ಮಾಡಿದರೆ ಮುಖ್ಯಮಂತ್ರಿ ಕೂಡ ಆಗಬಲ್ಲೆ ಅಂತ ಅವರು ಹೇಳುತ್ತಿರುವುದು ನನಗೆ ಬೇರೆ ಪಕ್ಷಗಳಿಂದ ಅಮಂತ್ರಣವಿದೆ ಅನ್ನುವಂತಿದೆ. ಅವರ ಈ ಮಾತುಗಳನ್ನು ಬಿಜೆಪಿ ಹೇಗೆ ತೆಗೆದುಕೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕು.

Ballari:  ಹಿಂದೆ ಬಿಎಸ್ ಯಡಿಯೂರಪ್ಪನವರ (BS Yediyurappa) ಮಂತ್ರಿಮಂಡಲದಲ್ಲಿ ಪ್ರಭಾವಿ (influential) ಸಚಿವರಾಗಿದ್ದ ಗಾಲಿ ಜನಾರ್ಧಾನ ರೆಡ್ಡಿಯವರು (Gali Janardhan Reddy) ಜೈಲಿನಿಂದ ಹೊರಬಂದ ಮೇಲೆ ನಿರಂತರವಾಗಿ ತಮ್ಮನ್ನು ಕಡೆಗಣಿಸುತ್ತಿರುವ ಬಿಜೆಪಿ ವಿರುದ್ಧ ಅಸಮಾಧಾನಗೊಂಡಂತಿದೆ. ಅವರನ್ನು ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳಲು ಬಿಜೆಪಿ ವರಿಷ್ಠರು ಮೀನಮೇಷ ಎಣಿಸುತ್ತಿದ್ದಾರೆ. ರೆಡ್ಡಿಯವರಲ್ಲಿ ಕಾಯುವ ಸಹನೆ ಮೀರದಂತಿದೆ. ಹಾಗಾಗೇ, ಅವರು ಬಳ್ಳಾರಿಯಲ್ಲಿ ಬುಧವಾರ ನಡೆದ ಒಂದು ಸಭೆಯಲ್ಲಿ ಬಿಜೆಪಿ ನಾಯಕರಿಗೆ ಸಾವಾಲೆಸೆಯುತ್ತಿರುವಂತೆ ಭಾಸವಾಗುತ್ತಿದೆ. ನಾನು ಮನಸ್ಸು ಮಾಡಿದರೆ ಮುಖ್ಯಮಂತ್ರಿ ಕೂಡ ಆಗಬಲ್ಲೆ ಅಂತ ಅವರು ಹೇಳುತ್ತಿರುವುದು ನನಗೆ ಬೇರೆ ಪಕ್ಷಗಳಿಂದ ಅಮಂತ್ರಣವಿದೆ ಅನ್ನುವಂತಿದೆ. ಅವರ ಈ ಮಾತುಗಳನ್ನು ಬಿಜೆಪಿ ಹೇಗೆ ತೆಗೆದುಕೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.