ಬೆಳಗಾವಿ: ಪರಿಶಿಷ್ಟ ಪಂಗಡ ಸಮುದಾಯದವರು ಪ್ರತ್ಯೇಕ ರುದ್ರಭೂಮಿಗೆ ಆಗ್ರಹಿಸಿ, ವೃದ್ಧನ ಶವವನ್ನಿಟ್ಟು ಧರಣಿ ನಡೆಸಿದ ಘಟನೆ ಕೆ.ಕೆ.ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಚಂದ್ರಪ್ಪ ತಳವಾರ (60) ಎಂಬುವವರ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಆಗಮಿಸಿ ಬೇರೆ ಜಾಗದಲ್ಲಿ ಅಂತ್ಯಕ್ರಿಯೆ ಮಾಡುವಂತೆ ಧರಣಿ ನಿರತರ ಮನವೊಲಿಸಿದರು.
ಗ್ರಾಮ ಪಂಚಾಯತಿ ಚುನಾವಣೆ ವೈಷಮ್ಯ
ಈ ಮೊದಲು ಖಾಸಗಿ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿತ್ತು. ಆದರೆ ಗ್ರಾಮ ಪಂಚಾಯತಿ ಚುನಾವಣೆ ವೈಷಮ್ಯ ಹಿನ್ನೆಲೆ ಈಗ ಖಾಸಗಿಯವರ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಅವಕಾಶ ಸಿಗುತ್ತಿಲ್ಲ ಎಂದು ಪರಿಶಿಷ್ಟ ಪಂಗಡ ಸಮುದಾಯದವರು ಆರೋಪಿಸಿದ್ದಾರೆ. ನಮಗೊಂದು ಶಾಶ್ವತ ರುದ್ರಭೂಮಿ ಬೇಕು ಎಂದು ಭೂಮಿಗಾಗಿ ಆಗ್ರಹಿಸಿದರು.
ಗ್ರಾಂ.ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದ ವಿಜಯಕುಮಾರ್ ಆತ್ಮಹತ್ಯೆಗೆ ಶರಣು