ಬೆಂಗಳೂರು: 2023-24ನೇ ಸಾಲಿನ ಬಜೆಟ್ ಮಂಡನೆ (Karnataka Budegt 2023) ವೇಳೆ ಭದ್ರತಾ ಲೋಪವಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಸದನದ ಒಳಗೆ ಆಗಮಿಸಿ ಶಾಸಕರ ಸ್ಥಾನದಲ್ಲಿ ಕುಳಿತಿರುವ ಪ್ರಸಂಗ ನಡೆಯಿತು. ಈ ಸಂಬಂಧ ಆರೋಪಿ ವಿರುದ್ಧ ವಿಧಾನಸೌಧ (Vidhana Soudha) ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಾನು ತೀಪ್ಪೆರುದ್ರ (76) ಚಿತ್ರದುರ್ಗ ನಗರ ನಿವಾಸಿಯಾಗಿದ್ದು ವೃತ್ತಿಯಲ್ಲಿ ವಕೀಲ ಎಂದು ಹೇಳಿದ್ದಾನೆ. ಅಲ್ಲದೇ ಸದನದ ಒಳಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಹೆಸರು ಹೇಳಿಕೊಂಡು ಮಾರ್ಷಲ್ಗಳಿಗೆ ಧಮ್ಕಿಹಾಕಿ ಒಳಗಡೆ ಹೋದೆ ಎಂದು ಹೇಳಿದ್ದಾನೆ.
ಪ್ರಾಥಮಿಕವಾದ ಮಾಹಿತಿ ಪಡೆದಿದ್ದೇವೆ. ಬಜೆಟ್ ಸೆಷನ್ ಹಿನ್ನಲೆ ಬಂದಿದ್ದಾಗಿ ಹೇಳಿದ್ದಾರೆ. ಸದನ ವೀಕ್ಷಣೆ ಪಾಸ್ ಪಡೆದಿದ್ದರು. ಮಾರ್ಷಲ್ಗಳು ಯಾರಿಗೂ ಪ್ರವೇಶ ಕೊಡಲ್ಲ. ಆದರೆ ಎಮ್ಎಲ್ಎ ಪದ ಬಳಸಿ ಹೋಗಿದ್ದಾನೆ. ಸದನದಲ್ಲಿ ದೇವದುರ್ಗ ಶಾಸಕಿ ಕರಿಯಮ್ಮ ಆಸನದಲ್ಲಿ 15-20 ನಿಮಿಷ ಕೂತಿದ್ದಾಗಿ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ; 5 ಗ್ಯಾರಂಟಿಗಳ ಜಾರಿಗೆ 52,000 ಕೋಟಿ ರೂ
ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ವೈಫಲ್ಯವಾಗಿದೆ. ಕೂಡಲೇ ಸಂಪೂರ್ಣ ರಿಪೋರ್ಟ್ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದು ಘಟನೆ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ.
ಬಜೆಟ್ ಮಂಡನೆ ವೇಳೆ ಅಪರಿಚಿತ ವ್ಯಕ್ತಿ ಸದನಕ್ಕೆ ಬಂದಿದ್ದನು. ಖಾಸಗಿ ವ್ಯಕ್ತಿ ಬಂದು ಸದನಕ್ಕೆ ಬಂದು ಆಸನದಲ್ಲಿ ಕುಳಿತಿದ್ದರು. ನನ್ನ ಪಕ್ಕದಲ್ಲಿದ್ದ ಶಾಸಕ ಜಿ.ಟಿ.ದೇವೇಗೌಡ ಬಳಿ ಕೇಳಿದೆ. ಆ ವ್ಯಕ್ತಿ ಯಾರೋ ಗೊತ್ತಿಲ್ಲ ಅಂತಾ ಜಿ.ಟಿ.ದೇವೇಗೌಡ ಅಂದರು. ಅಪರಿಚಿತ ವ್ಯಕ್ತಿ ಮೊಳಕಾಲ್ಮೂರು ಎಂಎಲ್‌ಎ ಅಂತ ಹೇಳಿದರು. ಸುಮಾರು ಹದಿನೈದು ನಿಮಿಷ ಕಾಲ ಸದನದಲ್ಲಿ ಕುಳಿತಿದ್ದನು. ತಕ್ಷಣ ಸ್ಪೀಕರ್ ಗಮನಕ್ಕೆ ತಂದಿದ್ದೇನೆ ಎಂದು ವಿಧಾನಸೌಧದಲ್ಲಿ ಶಾಸಕ ಶರಣಗೌಡ ಕಂದಕೂರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ