ಇಂದಿನ ನಕಲಿ-ಕೃತ್ರಿಮ ಯುಗದಲ್ಲಿ ಯಾರನ್ನು ನಂಬುವುದು? ನಿಮ್ಮ ಜಾಗ್ರತೆಗಾಗಿ ತಪ್ಪದೆ ಈ ಸುದ್ದಿ ಓದಿ!

ಈ ಪ್ರಕರಣ ನಡೆದಿರುವುದು 8 ವರ್ಷಗಳ ಹಿಂದೆ. ಯಾದಗಿರಿ ನಗರಸಭೆಯ 3 ಅಧಿಕಾರಿಗಳು ಶಾಮೀಲಾಗಿ ತಮ್ಮನ ಮನೆಯನ್ನು ಅಕ್ರಮವಾಗಿ ಅಣ್ಣನ ಹೆಸರಿಗೆ ಮಾಡಿಕೊಡ್ತಾರೆ. ಇದೀಗ ಆ ಮೂವರಿಗೂ ಅರೆಸ್ಟ್​ ವಾರಂಟ್​ ಹೊರಡಿಸಲಾಗಿದೆ. ಯಾದಗಿರಿ ನಗರಸಭೆ ಆಯುಕ್ತರಾದ ಸಂಗಪ್ಪ ಉಪಾಸೆ ಅವರು ಈ ಸಂಬಂಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.

Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on: Jul 07, 2023 | 6:50 PM

ಆ ವ್ಯಕ್ತಿ ಕಷ್ಟಪಟ್ಟು ಒಂದು ಸೈಟ್ ಖರೀದಿ ಮಾಡಿದ್ದ.. ಖರೀದಿ ಮಾಡಿದ್ದ ಸೈಟ್ ನಲ್ಲಿ ಕನಸಿನ ಮನೆಯನ್ನೂ ಕಟ್ಟಿದ್ದ. ಆದ್ರೆ ಕುಟುಂಬ ನಿರ್ವಹಣೆಗೆ ಕಷ್ಟ ಆಗ್ತಾಯಿದೆ ಅಂತ ಮನೆ ಬಿಟ್ಟು ಕುಟುಂಬ ಸಮೇತನಾಗಿ ಮಹಾ ನಗರಕ್ಕೆ ದುಡಿಯಲು ಹೋಗಿದ್ದ. ಹೇಗೋ ಅಣ್ಣ (Brother) ಇರ್ತಾನೆ ಅಂತ ಅಣ್ಣನ ಕೈಯಲ್ಲಿ ಮನೆ ಬೀಗ ಇಟ್ಟು ಹೋಗಿದ್ದ. ಆದ್ರೆ ಅದೇ ಅಣ್ಣ, ತಮ್ಮನಿಗೆ ಗೊತ್ತಾಗದ ರೀತಿಯಲ್ಲಿ ಮನೆಯನ್ನ (Site, House) ತನ್ನ ಹೆಂಡ್ತಿ ಹೆಸರಿಗೆ ಮಾಡಿಸಿಕೊಂಡಿದ್ದಾನೆ. ಹಣ ತಿಂದು ಅನೈತಿಕ ಕೆಲಸಕ್ಕೆ ಸಾಥ್ ನೀಡಿದ ಅಧಿಕಾರಿಗಳ ಮೇಲೆ ಈಗ ತೂಗುಕತ್ತಿ ನೇತಾಡುತ್ತಿದೆ. ಮೋಸದ ಕೆಲಸಕ್ಕೆ ಸಾಥ್ ನೀಡಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿದೆ.. ಹೊಟ್ಟೆ ಪಾಡಿಗಾಗಿ ದುಡಿಯಲು ಹೋಗಿದ್ದ ತಮ್ಮನಿಗೆ ಇಟ್ಟ ಅಣ್ಣ ಗುನ್ನಾ.. ನಂಬಿ ಮನೆ ಬಿಟ್ಟು ಹೋಗಿದ್ದಕ್ಕೆ ಮನೆಯನ್ನ ನುಂಗಿದ್ದಾನೆ ಅಣ್ಣ.. ತಮ್ಮನ ಹೆಸರಲ್ಲಿದ್ದ ಮನೆಯನ್ನ ದಾಖಲೆ ತಿದ್ದಿ ಅಣ್ಣನ ಹೆಸರಲ್ಲಿ ಮಾಡಿದ ಅಧಿಕಾರಿಗಳು.. ಹಣದ ಆಸೆಗೆ ಬಿದ್ದು ಮಾಡಬಾದನ್ನ ಮಾಡಿ ಅಧಿಕಾರಿಗಳು ಕೇಸ್ ಹಾಕಿಸಿಕೊಂಡಿದ್ದಾರೆ. ಯಸ್ ಈ ಪ್ರಸಂಗಗಳು ಕಂಡು ಬಂದಿದ್ದು ಯಾದಗಿರಿ ನಗರದಲ್ಲಿ.

ಸರ್ಕಾರಿ ಅಧಿಕಾರಿಗಳು ಅಂದ್ರೆ ಸಾರ್ವಜನಿಕರ ಆಸ್ತಿಯನ್ನ ರಕ್ಷಣೆ ಮಾಡಬೇಕು. ಆದ್ರೆ ಹಣದ ಆಸೆಗೆ ಬಿದ್ದು ಒಬ್ಬರ ಆಸ್ತಿಯನ್ನ ಇನ್ನೊಬ್ಬರ ಹೆಸರಿಗೆ ಮಾಡಿದ್ರೆ ಕಾನೂನಿನ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳೋದು ಗ್ಯಾರಂಟಿ.. ಯಾದಗಿರಿ ನಗರದಲ್ಲಿ ಇಂತಹುದೆ ಒಂದು ಪ್ರಸಂಗ ನಡೆದಿದೆ. ಯಾದಗಿರಿ ನಗರದ ನಿವಾಸಿ ಶಾಂತವೀರ ಎಂಬವರ ಮನೆಯನ್ನ ಹಣದ ಆಸೆಗೆ ಬಿದ್ದು ಯಾದಗಿರಿ ನಗರಸಭೆ ಅಧಿಕಾರಿಗಳು ಶಾಂತವೀರರ ಅಣ್ಣ ನಾಯ್ಕೋಡಿ ಹೆಸರಿಗೆ ಮಾಡಿ ಈಗ ಸಿಕ್ಕಿ ಹಾಕಿಕೊಂಡಿದ್ದಾರೆ.

ಅಷ್ಟಕ್ಕೂ ಈ ಪ್ರಕರಣ ನಡೆದಿದ್ದು ನಿನ್ನೆ ಮೊನ್ನೆ ಅಲ್ಲ. ಬದಲಿಗೆ 8 ವರ್ಷಗಳ ಹಿಂದೆ ನಡೆದಿರುವುದು. ಶಾಂತವೀರ 1992 ರಲ್ಲಿ ನಗರದ ಹೈದ್ರಾಬಾದ್ ರಸ್ತೆಯಲ್ಲಿ ಒಂದು ನಿವೇಶನ ಖರೀದಿ ಮಾಡಿದ್ರು. ಖರೀದಿ ಮಾಡಿದ ನಿವೇಶನದಲ್ಲಿ ಎರಡು ಅಂತಸ್ತಿನ ಮನೆಯನ್ನ ಕಟ್ಟಿದ್ರು. 2008 ರ ವರೆಗೆ ಮನೆಯಲ್ಲಿಯೇ ವಾಸವಿದ್ದು ಶಾಂತವೀರ 2008 ರಲ್ಲಿ ಕುಟುಂಬ ಸಮೇತರಾಗಿ ದುಡಿಯಲು ಮುಂಬೈಗೆ ಹೋಗಿದ್ರು.

ಶಾಂತವೀರ ತನ್ನ ಮನೆಯ ಕೀಯನ್ನ ತನ್ನ ಹಿರಿಯ ಸಹೋದರ ನಾಯ್ಕೋಡಿ ಕೈಯಲ್ಲಿ ಕೊಟ್ಟು ಹೋಗಿದ್ರು. ಅಣ್ಣ ಮನೆ ಕಟ್ಟುತ್ತಿದ್ದಾನೆ. ಅಲ್ಲಿಯವರೆಗೆ ನನ್ನ ಮನೆಯಲ್ಲಿಯೇ ಇರಲಿ ಅಂತ ಬಿಟ್ಟು ಹೋಗಿದ್ದ. ಶಾಂತವೀರ ವರ್ಷಕ್ಕೆ ಒಮ್ಮೆ ಬಂದು ಹೋಗುತ್ತಿದ್ದ. ಜೊತೆಗೆ ಪ್ರತಿ ಮನೆಯ ಟ್ಯಾಕ್ಸ್ ಕೂಡ ಸರಿಯಾಗಿ ಕಟ್ಟುತ್ತಿದ್ದ. ಆದ್ರೆ 2014 ರಲ್ಲಿ ಊರಿಗೆ ಬಂದಿದ್ದಾಗ ಮಾತ್ರ ಶಾಂತವೀರಗೆ ಶಾಕ್ ಎದುರಾಗಿತ್ತು. ತನ್ನ ಹೆಸರಿಗೆ ಇದ್ದ ಮನೆಯನ್ನ ತನ್ನ ಸಹೋದರ ನಾಯ್ಕೋಡಿ ಹೆಸರಿಗೆ ಆಗಿತ್ತು. ಇದಕ್ಕೆ ಕಾರಣ ಯಾದಗಿರಿ ನಗರಸಭೆಯ ಅಧಿಕಾರಿಗಳು!

2014 ರಲ್ಲಿ ಶಾಂತವೀರ ಸಹೋದರ ನಾಯ್ಕೋಡಿ ನಗರಸಭೆ ಅಧಿಕಾರಿಗಳ ಹಣವನ್ನ ನೀಡಿ ಶಾಂತವೀರ ಹೆಸರಿಗಿದ್ದ ಮನೆಯನ್ನ ದಾಖಲಾತಿಗಳನ್ನ ತಿದ್ದಿ ತನ್ನ ಹೆಸರಿಗೆ ಮಾಡಿಕೊಳ್ಳುತ್ತಾನೆ. ನಗರಸಭೆಯಲ್ಲಿದ್ದ ದಾಖಲಾತಿಗಳನ್ನ ಕೆಂಪು ಇಂಕಿನಿಂದ ತಿದ್ದಿ ಶಾಂತವೀರ ಹೆಸರಿದ್ದ ಜಾಗದಲ್ಲಿ ತನ್ನ ಹೆಸರು ಮಾಡಿಕೊಳ್ಳುತ್ತಾನೆ. ಇಂತಹ ಅಕ್ರಮ ಕೆಲಸಕ್ಕೆ 2014 ರಲ್ಲಿ ಇದ್ದ ನಗರಸಭೆ ಆಯುಕ್ತ ಖಾಜಾ ಮೈನೋದ್ದಿನ್, ಕಚೇರಿ ಮ್ಯಾನೇಜರ್ ಮಲ್ಲಿಕಾರ್ಜುನ್ ಹಾಗೂ ಕೇಸ್ ವರ್ಕರ್ ಭೀಮಣ್ಣ ಮುಂಡರಗಿ ಎನ್ನುವವರು ಸಾಥ್ ನೀಡಿದ್ದಾರೆ.

ಹಣವನ್ನ ಪಡೆದು ದಾಖಲೆಗಳನ್ನ ತಿದ್ದಿ ಶಾಂತವೀರ ಹೆಸರಿಗಿದ್ದ ಮನೆಯನ್ನ ನಾಯ್ಕೋಡಿ ಹೆಸರಿಗೆ ಮಾಡಿಕೊಡುತ್ತಾರೆ. ನಾಯ್ಕೋಡಿ ನೋಂದಣಿ ಕಚೇರಿಯಲ್ಲಿ ಮನೆಯನ್ನ ತನ್ನ ಪತ್ನಿಗೆ ಕಾಣಿಗೆ ರೂಪದಲ್ಲಿ ಮಾಡಿಕೊಡುತ್ತಾನೆ. ಇತ್ತ ವಿಷಯ ಗೊತ್ತಾಗುತ್ತಿದ್ದ ಹಾಗೆ ಶಾಂತವೀರ ಯಾದಗಿರಿ ಜಿಲ್ಲಾ ನ್ಯಾಯಲಯದ ಮೊರೆ ಹೋಗಿ ಮನೆಯನ್ನ ವಾಪಸ್ ತನ್ನ ಹೆಸರಿಗೆ ಮಾಡಿಕೊಳ್ಳುತ್ತಾನೆ.

ಕೋರ್ಟ್ ಕೂಡ 2020 ರಲ್ಲಿ ಮನೆ ಶಾಂತವೀರದ್ದೆ ಇದೆ ಅಂತ ಆದೇಶ ಕೂಡ ಮಾಡುತ್ತೆ. ಇದರ ಬಳಿಕ ಶಾಂತವೀರ ನಗರಸಭೆಯಲ್ಲಿ ದಾಖಲೆಗಳನ್ನ ಕೊಡಿ ಅಂತ ಕೇಳುತ್ತಾನೆ. ಆದ್ರೆ ನಗರಸಭೆ ಅಧಿಕಾರಿಗಳು ದಾಖಲೆಗಳನ್ನ ತಿದ್ದಿರುವ ಕಾರಣಕ್ಕೆ ದಾಖಲೆಗಳು ಕೊಡುವ ಬದಲಿಗೆ ದಾಖಲೆಗಳು ಕಳೆದಿವೆ ಅಂತ ಉತ್ತರವನ್ನ ನೀಡುತ್ತಾರೆ. ಆಗ ಶಾಂತವೀರ ನೇರವಾಗಿ ಮಾಹಿತಿ ಆಯೋಗದ ಮೊರೆ ಹೋಗಿ ದಾಖಲೆಗಳನ್ನ ಕೇಳಿದ್ರೆ ಕೊಡ್ತಾಯಿಲ್ಲ ಅಂತ ದೂರು ನೀಡಿದ್ರೆ ಮಾಹಿತಿ ಆಯೋಗದವರು 2023 ಮೇ ನಲ್ಲಿ ಯಾದಗಿರಿ ನಗರಸಭೆ ಆಯುಕ್ತರಿಗೆ ಪತ್ರ ಬರೆದು ದಾಖಲೆಗಳನ್ನ ತಿದ್ದುಪಡಿ ಮಾಡಿ ದಾಖಲೆಗಳು ಕಳೆದಿವೆ ಅಂತ ಸುಳ್ಳು ಹೇಳುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಶಾಂತವೀರ ಅವರಿಗೆ ಮನೆಯನ್ನ ಖಾಲಿ ಮಾಡಿಕೊಡುವಂತೆ ಆದೇಶ ಮಾಡುತ್ತಾರೆ. ಸದ್ಯ ಈಗಿನ  ನಗರಸಭೆ ಆಯುಕ್ತ ಸಂಗಪ್ಪ ಉಪಾಸೆ ಅವರು ಯಾದಗಿರಿ ನಗರ ಠಾಣೆಯಲ್ಲಿ ಕಳೆದ ತಿಂಗಳ 28 ರಂದು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಜೊತೆಗೆ ಅಕ್ರಮವಾಗಿ ವಾಸವಿರುವವನ್ನ ಖಾಲಿ ಮಾಡಿಸಿ ಶಾಂತವೀರ ಅವರಿಗೆ ಮನೆ ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಒಟ್ನಲ್ಲಿ ಸಾರ್ವಜನಿಕರ ಆಸ್ತಿಯನ್ನ ರಕ್ಷಣೆ ಮಾಡಬೇಕಿದ್ದ ಅಧಿಕಾರಿಗಳೇ ಬೇಲಿ ಎದ್ದು ಹೊಲ ಮೇಯ್ದಂತೆ ಮಾಡಿದ್ದಾರೆ. ಆದ್ರೆ ಮಾಡಿದ್ದುಣ್ಣೋ ಮಾರಾಯ ಎನ್ನುವ ಹಾಗೆ ಮೈ ಮೇಲೆ ಕೇಸ್ ಹಾಕಿಸಿಕೊಂಡಿದ್ದಾರೆ. ಸದ್ಯ ಯಾದಗಿರಿ ನಗರ ಠಾಣೆಯ ಪೊಲೀಸರು ಮೂವರನ್ನೂ ಅರೆಸ್ಟ್ ಮಾಡಲು ಹುಡುಕಾಟ ನಡೆಸುತ್ತಿದ್ದಾರೆ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ