ಬದಲಾದ ಸರ್ಕಾರ: ರಾಜ್ಯ ಪ್ರಧಾನ ಅಭಿಯೋಜಕರ ಹುದ್ದೆಗೆ ಕಿರಣ್​ ಜವಳಿ ರಾಜೀನಾಮೆ

ಕರ್ನಾಟಕದಲ್ಲಿ ಸರ್ಕಾರ ಬದಲಾಗಿದ್ದರಿಂದ ಸರ್ಕಾರಿ ಅಭಿಯೋಜಕರ ಹುದ್ದೆಗೆ ಹಿರಿಯ ವಕೀಲ ಕಿರಣ್ ಜವಳಿ ರಾಜೀನಾಮೆ ನೀಡಿದ್ದಾರೆ.

ಬದಲಾದ ಸರ್ಕಾರ: ರಾಜ್ಯ ಪ್ರಧಾನ ಅಭಿಯೋಜಕರ ಹುದ್ದೆಗೆ ಕಿರಣ್​ ಜವಳಿ ರಾಜೀನಾಮೆ
ಕಿರಣ್ ಜವಳಿ
Updated By: ರಮೇಶ್ ಬಿ. ಜವಳಗೇರಾ

Updated on: Jul 07, 2023 | 11:18 AM

ಬೆಂಗಳೂರು: ಕರ್ನಾಟಕ ಪ್ರಧಾನ ಅಭಿಯೋಜಕರ ಹುದ್ದೆಗೆ ಕಿರಣ್​ ಜವಳಿ (kiran javali) ಅವರು ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಬಿಜೆಪಿ(BJP) ಸರ್ಕಾರ 2022ರ ಜುಲೈ 22ರಂದು ಎಸ್​​​ಪಿಪಿಯಾಗಿ ಕಿರಣ್​ ಜವಳಿ ಅವರನ್ನು ನೇಮಿಸಿತ್ತು. ಆದ್ರೆ, ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಕಿರಣ್ ಜವಳಿ, ಪ್ರಧಾನ ಅಭಿಯೋಜಕರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Karnataka Budget 2023 Live: ವಿಧಾನಸೌಧಕ್ಕೆ ಬಂದ ಬಜೆಟ್ ಪ್ರತಿಗಳನ್ನು ಹೊತ್ತ ವಾಹನ

ಈ ಮೊದಲು ವಿಜಯ ಕುಮಾರ್‌ ಎಂ ಶೀಲವಂತ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹಿರಿಯ ವಕೀಲ ಕಿರಣ್‌ ಎಸ್‌ ಜವಳಿ ಅವರನ್ನು ಅಡ್ವೊಕೇಟ್‌ ಜನರಲ್‌ ಅವರ ಕಚೇರಿಯಲ್ಲಿ ಸರ್ಕಾರಿ ಅಭಿಯೋಜಕರ ಹುದ್ದೆಗೆ ನೇಮಕ ಮಾಡಿ ಕಾನೂನು ಇಲಾಖೆ ಆದೇಶ ಹೊರಡಿಸಿತ್ತು. ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 23ರ ಅನ್ವಯ ಜವಳಿ ಅವರನ್ನು ನೇಮಕ ಮಾಡಲಾಗಿತ್ತು. ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವ ಪೀಠದ ಮುಂದೆ ಕಿರಣ್ ಜವಳಿ ಅವರು ಒಂದು ವರ್ಷ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.

ಇತ್ತೀಚೆಗೆಷ್ಟೇ ರಾಜ್ಯ ಸರ್ಕಾರದ ನೂತನ ಅಡ್ವೊಕೇಟ್‌ ಜನರಲ್ ಆಗಿ ಹಿರಿಯ ವಕೀಲ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಪುತ್ರ ಶಶಿಕಿರಣ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ