Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೂರಿನಲ್ಲಿ ಉದ್ಯಮಿ ಬಾಬು ಅಪಹರಣ ಪ್ರಕರಣ ಸುಖಾಂತ್ಯ; ಉದ್ಯಮಿಯನ್ನ ಬಿಟ್ಟು ಕಳುಹಿಸಿದ ಕಿಡ್ನಾಪರ್ಸ್, ಕಾರಣ ಇಲ್ಲಿದೆ

ಆ ಕುಟುಂಬ ಆರ್ಥಿಕವಾಗಿ ಒಂದಷ್ಟು ಅನುಕೂಲಸ್ಥರಾಗಿರಬಹುದೇನೋ ಆದರೆ, ಮನೆಯಲ್ಲಿರುವವರಿಗೆ ಬಹಳ ಅನಾರೋಗ್ಯವೇ ಕಾಡುತ್ತಿದೆ. ಮನೆಯ ಯಜಮಾನಿ ನಡೆಯಲಾಗದ ಸ್ಥಿತಿ, ಮನೆ ಮಗನಿಗೆ ಪೆರಾಲಿಸಿಸ್​ ಆಗಿ ಆನಾರೋಗ್ಯ ಕಾಡುತ್ತಿದೆ. ಹೀಗಿರುವಾಗ ಮನೆಯ ಯಜಮಾನನ್ನೇ ಕಿಡ್ನಾಪ್​ ಮಾಡಿದ್ದ ದುಷ್ಕರ್ಮಿಗಳು, ಇದೀಗ ಬಿಟ್ಟು ಕಳುಹಿಸಿದ್ದಾರೆ.

ಮಾಲೂರಿನಲ್ಲಿ ಉದ್ಯಮಿ ಬಾಬು ಅಪಹರಣ ಪ್ರಕರಣ ಸುಖಾಂತ್ಯ; ಉದ್ಯಮಿಯನ್ನ ಬಿಟ್ಟು ಕಳುಹಿಸಿದ ಕಿಡ್ನಾಪರ್ಸ್, ಕಾರಣ ಇಲ್ಲಿದೆ
ಅಪಹರಣಕ್ಕೋಳಗಾದ ಉದ್ಯಮಿ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 07, 2023 | 2:05 PM

ಕೋಲಾರ: ಜಿಲ್ಲೆಯ ಮಾಲೂರಿ(Malur)ನ ಮಾರುತಿ ಬಡಾವಣೆ ನಿವಾಸಿ ಉದ್ಯಮಿ ಬಾಬು ಎಂಬುವವರನ್ನ ನಿನ್ನೆ(ಜು.5) ಮಾಡಲಾಗಿತ್ತು. ಬಳಿಕ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಿಡ್ನಾಪರ್ಸ್(Kidnapers) ಉದ್ಯಮಿಯನ್ನ ಆಂಧ್ರದ ಪಲಮನೇರು ಅರಣ್ಯಕ್ಕೆ ಕರೆದೊಯ್ದಿದ್ದರು. ಇದೀಗ ಬಾಬುರನ್ನ ಬಿಟ್ಟು ಕಳುಹಿಸಿದ್ದಾರೆ. ಆ ಮೂಲಕ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಈ ಕುರಿತು ಉದ್ಯಮಿ ‘ಮುಖಕ್ಕೆ ಮಾಸ್ಕ್​ ಹಾಕಿದ್ದು, ಅವರೂ ಕೂಡ ಮಂಕಿ ಟೋಪಿಯನ್ನ ಹಾಕಿಕೊಂಡಿದ್ದರು. ಆದರೆ, ಮೂರು ಜನ ಇದ್ದರೆಂದು ಅಪಹರಣಕ್ಕೊಳಗಾದ ಉದ್ಯಮಿ ಹೇಳಿದ್ದಾರೆ.

ಉದ್ಯಮಿಯನ್ನ ಬಿಡಲು ಕಾರಣವೇನು?

ಇನ್ನು ಉದ್ಯಮಿಯನ್ನ ಕಿಡ್ನ್ಯಾಪ್ ಮಾಡಿ, ಬರೊಬ್ಬರಿ 5 ಕೋಟಿಗೆ ಭೇಡಿಕೆಯಿಟ್ಟಿದ್ದ ಕಿಡ್ನಾಪರ್ಸ್, ಅಪಹರಣ ವಿಚಾರ ಪೊಲೀಸರಿಗೆ ಗೊತ್ತಾದ ಹಿನ್ನೆಲೆ ಬಿಟ್ಟು ಕಳುಹಿಸಿದ್ದಾರೆ. ನಿನ್ನೆ(ಜು.6) ರಾತ್ರಿ ಸುರಕ್ಷಿತವಾಗಿ ಬಾಬು ಮನೆಗೆ ವಾಪಸ್ ಆಗಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂರು ತಂಡ ರಚನೆ ಮಾಡಿ, ಹುಡುಕಾಟ ನಡೆಸಿದ್ದಾರೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Yadagir News: ಹಾಡಹಾಗಲೇ ಇಬ್ಬರು ಗ್ರಾ.ಪಂ. ಮಹಿಳಾ ಸದಸ್ಯೆಯರ ಅಪಹರಣ: ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡ್ನಾಪ್ ಆರೋಪ

ಘಟನೆ ವಿವರ

ಇಟ್ಟಿಗೆ ಕಾರ್ಖಾನೆ, ರಿಯಲ್​ ಎಸ್ಟೇಟ್​, ಟಿಂಬರ್​ ಕೆಲಸ ಹೀಗೆ ಹಲವು ಕೆಲಸಗಳನ್ನು ಮಾಡಿಕೊಂಡು ಒಂದಷ್ಟು ಆರ್ಥಿಕವಾಗಿ ಅನುಕೂಲಸ್ಥರಾಗಿ ಇರುವ ಬಾಬು ಅವರನ್ನು ನಿನ್ನೆ ಮಧ್ಯಾಹ್ನ ಇಟ್ಟಿಗೆ ಖರೀದಿ ಮಾಡುವ ನೆಪದಲ್ಲಿ ಬಂದ ಯಾರೋ ದುಷ್ಕರ್ಮಿಗಳು ಅವರನ್ನು ಮಾಲೂರು ತಾಲ್ಲೂಕಿನ ಹೆಡಗಿನಬೆಲೆ ಗ್ರಾಮದ ಇಟ್ಟಿಗೆ ಕಾರ್ಖಾನೆ ಬಳಿ ಕರೆದುಕೊಂಡು ಹೋಗಿ, ನಂತರ ಅಲ್ಲಿಂದ ಅವರನ್ನು ಕಿಡ್ನಾಪ್​ ಮಾಡಲಾಗಿತ್ತು. ಸಂಜೆಯಾದರೂ ಮನೆಗೆ ಊಟಕ್ಕೆ ಬರಲಿಲ್ಲವೆಂದು ಅವರ ಪತ್ನಿ ವರಲಕ್ಷ್ಮಿ ಹಾಗೂ ಮಗ ಮಂಜುನಾಥ್​ ಪೋನ್​ ಮಾಡಿದ್ರೆ, ಪೋನ್​ ಸ್ವಿಚ್​ ಆಫ್​ ಬಂದಿತ್ತು.

ನಂತರ ಸಂಜೆ ವೇಳೆ ಬಾಬು ಅವರ ಪೋನ್​ ನಂಬರ್​ನಿಂದಲೇ ಯಾರೋ ದುಷ್ಕರ್ಮಿಗಳು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಾಬು ಅವರನ್ನು ಕಿಡ್ನಾಪ್​ ಮಾಡಿದ್ದೇವೆ. ನಿಮಗೆ ಅವರು ಬೇಕೆಂದರೆ 5 ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಗಾಬರಿಗೊಂಡ ಮನೆಯವರು ಬಾಬು ಅವರು ಎಲ್ಲಿದ್ದಾರೆ ಎಂದು ಕೇಳಿದಾಗ ಅವರಿಂದಲೇ ಪೋನ್​ ನಲ್ಲಿ ಮಾತನಾಡಿಸಿದ್ದರು. ಇದರಿಂದ ದಿಕ್ಕು ಕಾಣದಾದ ಕುಟುಂಬಸ್ಥರು ಮಾಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಉದ್ಯಮಿ ವಾಪಾಸ್ಸಾಗಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು