Yadagir News: ಹಾಡಹಾಗಲೇ ಇಬ್ಬರು ಗ್ರಾ.ಪಂ. ಮಹಿಳಾ ಸದಸ್ಯೆಯರ ಅಪಹರಣ: ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡ್ನಾಪ್ ಆರೋಪ
ಹಾಡಹಾಗಲೇ ಇಬ್ಬರು ಗ್ರಾಮ ಪಂಚಾಯತ್ ಮಹಿಳಾ ಸದಸ್ಯೆಯರ ಅಪಹರಣ ಮಾಡಿರುವಂತಹ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದು, ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡ್ನಾಪ್ ಆರೋಪ ಕೇಳಿಬಂದಿದೆ.
ಯಾದಗಿರಿ: ಹಾಡಹಾಗಲೇ ಇಬ್ಬರು ಗ್ರಾಮ ಪಂಚಾಯತ್ ಮಹಿಳಾ ಸದಸ್ಯೆಯರ ಅಪಹರಣ (Abduction) ಮಾಡಿರುವಂತಹ ಘಟನೆ ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಿಂದಲ್ಲಿ ನಡೆದಿದೆ. ಸುರಪುರ ತಾಲೂಕಿನ ನಗನೂರು ಗ್ರಾಮ ಪಂಚಾಯತ್ ಸದಸ್ಯೆಯರಾದ ಖಾನಾಪುರ ಗ್ರಾಮದ ನೀಲಗಂಗಮ್ಮ, ಫಾತಿಮಾ ಅಪಹರಣಕ್ಕೊಳಗಾದವರು. ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಆಯ್ಕೆ ವೇಳೆ ಕೃತ್ಯ ನಡೆದಿದೆ.
ಸಚಿವ ಶರಣಬಸಪ್ಪ ದರ್ಶನಾಪುರ ಸ್ವಕ್ಷೇತ್ರದಲ್ಲೇ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡ್ನಾಪ್ ಆರೋಪ ಮಾಡಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹಾಂತಗೌಡ ಪೊಲೀಸ್ ಪಾಟೀಲ, ಅನಂತರೆಡ್ಡಿ ಕೆಂಚಗೌಡ್ರ, ಕಾಂಗ್ರೆಸ್ ಮುಖಂಡ ಶರಣಗೌಡ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಅಪಹರಣಕ್ಕೊಳಗಾದ ಸದಸ್ಯೆಯರ ಪತಿಯಂದಿರು ದೂರು ನೀಡಿದ್ದಾರೆ.
ಇದನ್ನೂ ಓದಿ: ಆಡಳಿತ ಸುಧಾರಣಾ ಆಯೋಗದ ವರದಿ ಸಲ್ಲಿಸಿದ ವಿಜಯ್ ಭಾಸ್ಕರ್: ಅನುಷ್ಠಾನ ಭರವಸೆ ನೀಡಿದ ಸಚಿವ ಗುಂಡೂರಾವ್
ಶಾಲೆಗೆ ಹೋಗುತ್ತಿದ್ದ ಬಾಲಕ ಅಪಹರಣ: ಇಬ್ಬರ ಬಂಧನ
ಕಲಬುರಗಿ: ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಅಪಹರಿಸಿದ್ದ ಪ್ರಕರಣ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಲಬುರಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರುಣ್ ಭಜಂತ್ರಿ ಮತ್ತು ಲಕ್ಷ್ಮಣ ಭಜಂತ್ರಿ ಬಂಧಿತರು.
ಸರ್ಕಾರಿ ಶಾಲಾ ಶಿಕ್ಷಕನ ಮಗ ಸುರ್ಶನನನ್ನು ಸಿದ್ದೇಶ್ವರ ಕಾಲೋನಿಯಲ್ಲಿ ಜನವರಿ 4ರಂದು ಕಿಡ್ನಾಪ್ ಮಾಡಿ 10 ಲಕ್ಷಕ್ಕೆ ಡಿಮ್ಯಾಂಡ್ ಇಡಲಾಗಿತ್ತು. ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆಗೆ ನಡೆಸಿ ಬಾಲಕನ್ನು ರಕ್ಷಿಸಿದ್ದರು.
ಕಾಂಗ್ರೆಸ್ ಕಾರ್ಯಕರ್ತರ ಕಿಡ್ನಾಪ್: ಎಫ್ಐಆರ್ ದಾಖಲು
ಬೆಂಗಳೂರು: 2023 ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಕಿಡ್ನಾಪ್ ಮಾಡಲಾಗಿತ್ತು. ಸದ್ಯ ಈ ಕುರಿತಾಗಿ ಕಾಂಗ್ರೆಸ್ ಕಾರ್ಯಕರ್ತರಾದ ವಿಜಯ್ ಕುಮಾರ್, ಉದಯ್ ಎಂಬುವರ ದೂರು ಆಧರಿಸಿ ನಗರದ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ವಿವಾದಕ್ಕೆ ಕಾರಣವಾಯ್ತೇ ಶಾಸಕರ ತರಬೇತಿ ಶಿಬಿರ? ಸಂಪನ್ಮೂಲ ವ್ಯಕ್ತಿಗಳ ಮರುಪರಿಶೀಲನೆಗೆ ಆಗ್ರಹ
ಕಾಂಗ್ರೆಸ್ ಪರ ಕೆಲಸ ಮಾಡದಂತೆ ರೌಡಿಶೀಟರ್ಸ್ ಮನೋಜ್, ಕೆಂಚನ ಗ್ಯಾಂಗ್ನಿಂದ ಕಿಡ್ನಾಪ್ ಮಾಡಿ ಲಾಡ್ಜ್ನಲ್ಲಿ ಕೂಡಿ ಹಾಕಿದ್ದ ಆರೋಪ ಮಾಡಿದ್ದಾರೆ. ಮೇ 9 ರಂದು ಯಶವಂತಪುರ ವೃತ್ತದ ಬಳಿ ಕಿಡ್ನಾಪ್ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 pm, Thu, 22 June 23