ವಿಜಯಪುರ: ಚಡಚಣ ತಾಲೂಕಿನ ರೇವತಗಾಂವ ಗ್ರಾಮದ 2 ಅಂಗಡಿ ಹಾಗೂ 4 ಮನೆಗಳಲ್ಲಿ ಕಳ್ಳತನ ನಡೆದಿದೆ. ಬೈಕ್, ನಗದು, ಚಿನ್ನಾಭರಣ ಮತ್ತು ಬಟ್ಟೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಚಡಚಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಭಾಷ ದಾಭೆ, ಸೂರಪ್ಪ ದಾಭೆ, ಅನ್ನಪೂರ್ಣ ಖಾತೆ, ಸಿದ್ದಪ್ಪ ಜಾಬಗೊಂಡೆ, ಸಿದ್ದರಾಯ ಬಿರಾದಾರ ಎಂಬುವವರಿಗೆ ಸೇರಿದ ಮನೆಗಳು ಹಾಗೂ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಮನೆಗೆ ಬೀಗ ಹಾಕಿ ಮನೆಯ ಮೇಲ್ಚಾವಣಿಯ ಮೇಲೆ ಮಲಗಿದ್ದ ವೇಳೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ.
Serial theft: ತುಳಸಿಗೇರಿ ಗ್ರಾಮದ 7 ಮನೆಗಳಲ್ಲಿ ಸರಣಿ ಕಳ್ಳತನ; ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳ ದೋಚಿ ಪರಾರಿ
Published On - 11:09 am, Tue, 16 February 21