ಹುಣಸೋಡು ಸ್ಫೋಟ: ಕ್ರಷರ್ಗೆ ನೀಡಿದ್ದ ಲೈಸೆನ್ಸ್ ರದ್ದು ಪಡಿಸಿದ ಜಿಲ್ಲಾಧಿಕಾರಿ
ಜನವರಿ 21ರಂದು ನಡೆದ ದುರಂತದ ಬಳಿಕ ಸುಧಾಕರ್ ಸೇರಿ ನಾಲ್ವರ ಬಂಧನವಾಗಿದೆ. ಇದರ ಬೆನ್ನಲ್ಲೇ ಕಲ್ಲುಪುಡಿ ಮಾಡಲು ಕ್ರಷರ್ಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲಾಗಿದೆ.
ಪ್ರಾತಿನಿಧಿಕ ಚಿತ್ರ
Follow us on
ಶಿವಮೊಗ್ಗ: ಜನವರಿ 21ರಂದು ಹುಣಸೋಡಿನಲ್ಲಿ ಸ್ಫೋಟ ನಡೆದ ಕ್ರಷರ್ನ ಲೈಸೆನ್ಸ್ ರದ್ದುಗೊಳಿಸಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ನೀಡಿದ್ದಾರೆ.
ಹುಣಸೋಡು ಗ್ರಾಮದ ಕಲ್ಲಗಂಗೂರ ಬಳಿ 5 ಎಕರೆ ಜಾಗವನ್ನು ಲೀಸ್ಗೆ ಪಡೆದು, ಕ್ರಷರ್ ನಡೆಸಲಾಗುತ್ತಿತ್ತು. ಎಸ್.ಎಸ್.ಸ್ಟೋನ್ ಹೆಸರಿನ ಈ ಕ್ರಷರ್ನ ಮಾಲೀಕ ಬಿ.ವಿ.ಸುಧಾಕರ್. ಜನವರಿ 21ರಂದು ನಡೆದ ದುರಂತದ ಬಳಿಕ ಸುಧಾಕರ್ ಸೇರಿ ನಾಲ್ವರ ಬಂಧನವಾಗಿದೆ. ಇದರ ಬೆನ್ನಲ್ಲೇ ಕಲ್ಲುಪುಡಿ ಮಾಡಲು ಕ್ರಷರ್ಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲಾಗಿದೆ.