ಶಿವಮೊಗ್ಗ, ಫೆ.24: ವರದಕ್ಷಿಣೆಗಾಗಿ (Dowry) ಗಂಡನ ಮನೆಯವರು ಮಹಿಳೆ ಹಾಗೂ ಆಕೆಯ 5 ತಿಂಗಳ ಮಗುವಿಗೆ ವಿಷ (Poison) ಕುಡಿಸಿದ್ದಾರೆ ಎನ್ನಲಾಗಿರುವ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಸ್ತೂರಿ(25) ಎಂಬ ಮಹಿಳೆ ಮೃತಪಟ್ಟಿದ್ದು ಐದು ತಿಂಗಳ ಮಗು ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಮಂಜುನಾಥ್ನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದ್ದು ಪತ್ನಿ ಹಾಗು ಮಗುವಿಗೆ ಗಂಡನ ಮನೆಯವರೇ ವಿಷ ಕುಡಿಸಿದ್ದಾರೆ ಎಂದು ಮೃತ ಕಸ್ತೂರಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಹಿಳೆ ಮೃತಪಟ್ಟಿದ್ದು 5 ತಿಂಗಳ ಮಗುವಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮೃತ ಕಸ್ತೂರಿ ಕುಟುಂಬಸ್ಥರು ಪತಿ -ಮಂಜುನಾಥ್, ಅತ್ತೆ -ಉಮಾ, ಮೈದುನ -ಮುತ್ತು ವಿರುದ್ದ ವಿಷ ಕುಡಿಸಿರುವ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಮಂಜುನಾಥ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸ್ ಇಳಿದ ಕೂಡಲೇ, ಬಸ್ ಮುಂದೆಯೇ ರಸ್ತೆ ದಾಟೋದು ಎಷ್ಟು ಡೇಂಜರ್ ಅನ್ನೋದಕ್ಕೆ ಈ ಸಿಸಿಕ್ಯಾಮರಾದ ದೃಶ್ಯವೇ ಸಾಕ್ಷಿ. ಮಂಗಳೂರಿನ ಕುಳಾಯಿ ಎಂಬಲ್ಲಿ ಶಾಲಾ ಬಸ್ ಇಳಿದ ವಿದ್ಯಾರ್ಥಿ ಮನೆಗೆ ಹೋಗಲು ರಸ್ತೆ ದಾಟಿದ್ದಾನೆ. ಇದನ್ನ ಗಮನಿಸದ ಚಾಲಕ ವಿದ್ಯಾರ್ಥಿ ಮೇಲೆಯೇ ಬಸ್ ಹತ್ತಿಸಿದ್ದಾನೆ. ಅದೃಷ್ಟವಶಾತ್ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: Shri Yerrithatha Swamy: ದೇವರ ಮೂರ್ತಿ ಕೂರಿಸುವ ವಿಚಾರದಲ್ಲಿ ಗಲಾಟೆ, ಕೊಳಗಲ್ ಗ್ರಾಮದಲ್ಲಿ ಸೆಕ್ಷನ್ 144 ಜಾರಿ
ಮೈಸೂರಿನ ವಿಜಯನಗರದಲ್ಲಿ ಸ್ಕೂಟರ್ ಪಾರ್ಕ್ ಮಾಡ್ತಿದ್ದಾಗಲೇ ಹೃದಯಾಘಾತವಾಗಿ ನಿವೃತ್ತ ASI ಮೃತಪಟ್ಟಿದ್ದಾರೆ. ಸ್ಕೂಟರ್ ನಿಲ್ಲಿಸಿ ಕೆಳಗಿಳಿಯುತ್ತಿದ್ದ 71 ವರ್ಷದ ಜಿ.ವಿ ರಾಜು ಅನ್ನೋರಿಗೆ ಹೃದಯಾಘಾತವಾಗಿದೆ.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬೆಳ್ಳಕ್ಕಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮನೆ ಮುಂದಿದ್ದ ನಾಯಿಯನ್ನ ಚಿರತೆ ಹೊತ್ತೊಯ್ದಿದೆ. ಮೊದಲ ಬಾರಿ ನಾಯಿ ಬಚಾವ್ ಆಗಿದ್ದು, ಎರಡನೇ ಬಾರಿಗೆ ನಾಯಿ ಮಲಗಿದ್ದಾಗ ಚಿರತೆ ದಾಳಿ ನಡೆಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ