ಶಿವಮೊಗ್ಗದಲ್ಲಿ ಶಂಕಿತ ಇಬ್ಬರು ಉಗ್ರರ ಬಂಧನ ಪ್ರಕರಣ: ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 24, 2022 | 3:43 PM

ರಾಷ್ಟ್ರದ ಏಕತೆಗೆ ಭಂಗ ತರುವವರ ವಿರುದ್ಧ ಕ್ರಮ ಆಗಲಿದೆ. ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಶಂಕಿತ ಇಬ್ಬರು ಉಗ್ರರ ಬಂಧನ ಪ್ರಕರಣ: ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಶಿವಮೊಗ್ಗ: ಶಂಕಿತ ಇಬ್ಬರು ಉಗ್ರರರು ಮೂಲತಃಹ ತೀರ್ಥಹಳ್ಳಿಯವರಾಗಿದ್ದು, ಮಂಗಳೂರಿನಲ್ಲಿ ವಾಸವಾಗಿದ್ದರು. ಮತಾಂಧಶಕ್ತಿಗಳ ಸಂಪರ್ಕ ಪಡೆದು ಈ ರೀತಿ ಮಾಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಈ ಬಗ್ಗೆ NIA ಅಧಿಕಾರಿಗಳು ಸಹ ತನಿಖೆ ಮಾಡುತ್ತಿದ್ದಾರೆ. ರಾಷ್ಟ್ರದ ಏಕತೆಗೆ ಭಂಗ ತರುವವರ ವಿರುದ್ಧ ಕ್ರಮ ಆಗಲಿದೆ. ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ರಿವಾರ್ಡ್ ಘೋಷಣೆ ಮಾಡ್ತೇನೆ. ಕಾಂಗ್ರೆಸ್​ ಪಕ್ಷದ ಅವಧಿಯಲ್ಲಿ ಈ ರೀತಿ ಕ್ರಮ ಆಗಿರಲಿಲ್ಲ. ಅಲ್ಪಸಂಖ್ಯಾತರು ಕಾಂಗ್ರೆಸ್​ನ ವೋಟ್ ಬ್ಯಾಂಕ್​ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು.

ತುಂಬಾ ಡೀಪ್ ಆಗಿ,‌ ತನಿಖೆ ಮಾಡಿದ್ದರಿಂದ ಪ್ರಕರಣ ಹೊರಬಂದಿದೆ. ತನಿಖೆ ಮುಂದುವರಿದಿದ್ದು, ಎನ್​ಎನ್ಐಎ ಟೀಂ ಕೂಡ ತನಿಖೆ ಮಾಡುತ್ತಿದೆ. ಕರಾವಳಿ, ಕೇರಳ ಸಂಪರ್ಕ ಹೊಂದಿ, ಮತೀಯವಾದಕ್ಕೆ ಒಳಗಾಗುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ಹೇಳಿದರು. ಯಾರು ಯಾರಿಗೆ ಯಾವ ಯಾವ ಆಯುಧ ಬಳಸಬೇಕೋ, ಯಾರು ಯಾರಿಗೆ ಯಾವ ಭಾಷೆ ಬಳಸಬೇಕೋ ಅದನ್ನ ಬಳಸಬೇಕಾಗುತ್ತದೆ. ಈ ಹಿಂದೆ ಯುಎಪಿಎ ಕೇಸ್ ಹಾಕಿದಾಗ ಅನವಶ್ಯಕವಾಗಿ ಹಾಕ್ತಿದ್ದಾರೆ ಅಂದ್ರು. ಈಗ ಏನಾಯ್ತು, ಇಂತಹ ಪ್ರಕರಣ ಬೆಳಕಿಗೆ ಬಂತು. ಇವರ ಮುಖ ನೋಡಿದರೆ, ಹಿನ್ನೆಲೆ ನೋಡಿದರೆ ಏನು ಅಲ್ಲ ಅನ್ಸುತ್ತೆ. ಆದರೆ ಮತಾಂಧತೆಗೆ ಒಳಗಾದಾಗ ಇಂತಹ ಕೃತ್ಯ ನಡೆಯುತ್ತದೆ. ಅಮೂಲಾಗ್ರವಾದ ಪರಿಶೀಲನೆ ನಡೆಯುತ್ತಿದೆ ಪೊಲೀಸರಿಗೆ ಎಲ್ಲಾ ರೀತಿಯ ಜಾಡು ಸಿಗುತ್ತಿದೆ ಎಂದು ಹೇಳಿದರು.

ಇನ್ಸ್​ಪೆಕ್ಟರ್​ ಮೇಲೆ 30 ಜನರು ದಾಳಿ: ಸಾವು ಬದುಕಿನ ನಡುವೆ ಹೋರಾಟ 

ಕಲಬುರಗಿ ಗ್ರಾ. ಠಾಣೆ ಸಿಪಿಐ ಶ್ರೀಮಂತ್ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿದ್ದು, ಒಬ್ಬ ಇನ್ಸ್​ಪೆಕ್ಟರ್​ ಮೇಲೆ 30 ಜನರು ದಾಳಿ ಮಾಡಿದ್ದಾರೆ. ಸಿಪಿಐ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಒಳ್ಳೆಯ ಕಡೆ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಲು ವಿಳಂಬವಾಗುತ್ತದೆ. ಹೀಗಾಗಿ ಹೈದರಾಬಾದ್​​ ಆಸ್ಪತ್ರೆಗೆ ಕರೆದೊಯ್ಯಲು ಸಿದ್ದತೆ ನಡೆಯುತ್ತಿದೆ. ವೈದ್ಯರ ಅನುಮತಿ ಸಿಕ್ಕಿದ ತಕ್ಷಣ ಹೈದರಾಬಾದ್​ಗೆ ಶಿಫ್ಟ್ ಮಾಡಲಾಗುವುದು ಎಂದರು.​​

ನೇರಾನೇರ ರಾಜಕಾರಣ ಮಾಡುವ ಯೋಗ್ಯತೆ ಇಲ್ಲ

ಪೇಸಿಎಂ ಕ್ಯಾಂಪೇನ್ ಕಾಂಗ್ರೆಸ್​ನ ವಿಕೃತ ಮನಸ್ಥಿತಿಗೆ ಸಾಕ್ಷಿ. ನೇರಾನೇರ ರಾಜಕಾರಣ ಮಾಡುವ ಯೋಗ್ಯತೆ ಅವರಿಗಿಲ್ಲ. ಶಾಸಕ ರಮೇಶ್ ಕುಮಾರ್ ಮೂರು ತರೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂದ ಅವರದ್ದು ಯಾವ ಪೇಸಿಎಂ? ಕಾಂಗ್ರೆಸ್​ ನಾಯಕರನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನರಿಲ್ಲ. ಚುನಾವಣೆ ಸಮೀಪ ಹಿನ್ನೆಲೆ ಇಂತಹ ಗಿಮಿಕ್​​​ ಮಾಡುತ್ತಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:28 pm, Sat, 24 September 22