ಶಿವಮೊಗ್ಗ: ಸಚಿವ ಈಶ್ವರಪ್ಪ ಮುಂದೆ ಗಾಯನ ಕಾರ್ಯಕ್ರಮದಲ್ಲಿ ಯಡವಟ್ಟು; ಸರಿಪಡಿಸಿಕೊಂಡು ಹೊಸದಾಗಿ ಹಾಡಿದ ಕಲಾವಿದರು

ಶಿವಮೊಗ್ಗ: ಸಚಿವ ಈಶ್ವರಪ್ಪ ಮುಂದೆ ಗಾಯನ ಕಾರ್ಯಕ್ರಮದಲ್ಲಿ ಯಡವಟ್ಟು; ಸರಿಪಡಿಸಿಕೊಂಡು ಹೊಸದಾಗಿ ಹಾಡಿದ ಕಲಾವಿದರು

TV9 Web
| Updated By: shivaprasad.hs

Updated on: Oct 28, 2021 | 4:45 PM

KS Eshwarappa: ಸಚಿವ ಈಶ್ವರಪ್ಪ ಮುಂದೆ ಅಧಿಕಾರಿಗಳು ಹಾಗೂ ಕಲಾವಿದರು ನಾಡಗೀತೆ ಗಾಯನ ಕಾರ್ಯಕ್ರಮದಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ತಪ್ಪಾಗಿ ಹಾಡಿದ ಪ್ರಸಂಗ ನಡೆದಿದೆ. ನಂತರ ಸರಿಪಡಿಸಿಕೊಂಡು ಹೊಸದಾಗಿ ಗಾಯನ ನಡೆಸಲಾಗಿದೆ.

ಇಂದು ರಾಜ್ಯದಲ್ಲಿ ನಾಡಗೀತೆಯ ಗಾಯನ ಅಭಿಯಾನ ನಡೆದಿದೆ. ಶಿವಮೊಗ್ಗದಲ್ಲೂ ಅಭಿಯಾನ ನಡೆದಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭಾಗವಹಿಸಿದ್ದರು. ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಕಲಾವಿದರು ಆರಂಭದಲ್ಲಿ ತಪ್ಪಾಗಿ ಹಾಡಿದರು. ಡಾ.ರಾಜಕುಮಾರ್ ಅಭಿನಯದ ‘ಆಕಸ್ಮಿಕ’ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಹಾಡುವ ವೇಳೆ ಯಡವಟ್ಟಾಗಿ, ಕಲಾವಿದರು ಮತ್ತು ಅಧಿಕಾರಿಗಳು ಆರಂಭದಲ್ಲಿ ತಪ್ಪಾಗಿ ಹಾಡಿದರು. ತಪ್ಪು ಗೊತ್ತಾಗುತ್ತಿದ್ಧಂತೆ ಹಾಡು ಸ್ಥಗಿತಗೊಳಿಸಿ, ಹೊಸದಾಗಿ ಹಾಡಲಾಯಿತು. ಎರಡನೇ ಬಾರಿಗೆ ಹಾಡುವಾಗ ಈಶ್ವರಪ್ಪ ಕೂಡ ದನಿಗೂಡಿಸಿ, ಕೈ ತಟ್ಟುತ್ತಾ, ಅಸ್ವಾದಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ:

ಟ್ಯೂಷನ್​ಗೆ ಹೋದ 5ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಶಿಕ್ಷಕಿಯ ಮಗನೇ ಆರೋಪಿ

Hampi: ಹಾಯ್, ಹಲೋ ಎನ್ನುವ ಬದಲು ಸ್ವಚ್ಛ ಭಾರತ ಎಂದು ಮಾತು ಶುರು ಮಾಡಿ: ಸಚಿವ ನಾರಾಯಣ ಗೌಡ ಕರೆ