ಬಿ.ವೈ ರಾಘವೇಂದ್ರ ಖಾತೆಯಲ್ಲಿದ್ದ 16 ಲಕ್ಷ ರೂ ದೋಚಿದ್ದ ಹ್ಯಾಕರ್ಸ್: ಕಾರ್ಯಗಾರದಲ್ಲಿ ಹೇಳಿಕೊಂಡ ಸಂಸದ

| Updated By: ವಿವೇಕ ಬಿರಾದಾರ

Updated on: Oct 12, 2022 | 6:40 PM

ಹ್ಯಾಕರ್ಸ್ ನನ್ನ ಬ್ಯಾಂಕ್​​ ಖಾತೆಯನ್ನು ಹ್ಯಾಕ್​ ಮಾಡಿ,  ಖಾತೆಯಲ್ಲಿದ್ದ 16 ಲಕ್ಷ ರೂ ದೋಚಿದ್ದರು ಎಂದು ಸಂಸದ ಬಿ ವೈ ರಾಘವೇಂದ್ರ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿಂದು ಬ್ಯಾಂಕ್‌ ಡಿಜಿಟಲ್‌ ಪಾವತಿ ಕಾರ್ಯಾಗಾರದಲ್ಲಿ ಹೇಳಿದ್ದಾರೆ.

ಬಿ.ವೈ  ರಾಘವೇಂದ್ರ ಖಾತೆಯಲ್ಲಿದ್ದ 16 ಲಕ್ಷ ರೂ ದೋಚಿದ್ದ ಹ್ಯಾಕರ್ಸ್: ಕಾರ್ಯಗಾರದಲ್ಲಿ ಹೇಳಿಕೊಂಡ ಸಂಸದ
ಸಂಸದ ಬಿ ವೈ ರಾಘವೇಂದ್ರ
Follow us on

ಶಿವಮೊಗ್ಗ: ಹ್ಯಾಕರ್ಸ್ (Hackers) ನನ್ನ ಬ್ಯಾಂಕ್​​ ಖಾತೆಯನ್ನು ಹ್ಯಾಕ್​ ಮಾಡಿ,  ಖಾತೆಯಲ್ಲಿದ್ದ 16 ಲಕ್ಷ ರೂ ದೋಚಿದ್ದರು ಎಂದು ಸಂಸದ ಬಿ ವೈ ರಾಘವೇಂದ್ರ (B.Y. Raghavendra) ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿಂದು ಬ್ಯಾಂಕ್‌ ಡಿಜಿಟಲ್‌ ಪಾವತಿ ಕಾರ್ಯಾಗಾರದಲ್ಲಿ ಹೇಳಿದ್ದಾರೆ. ಮುಂಬೈನಿಂದ ಓರ್ವ ವ್ಯಕ್ತಿ ನನ್ನ ಅಕೌಂಟ್​ನ್ನು ಹ್ಯಾಕ್ ಮಾಡಿ ಸುಮಾರು 16 ಲಕ್ಷ ರೂಪಾಯಿ ದೋಚಿದ್ದನು. ಈ ಸಂಬಂಧ ನಾನು ಯಾವುದೇ ವ್ಯವಹಾರ ಮಾಡದೇ ಡ್ರಾ ಆಗಿದೆ ಎಂದು ದೂರು ನೀಡಿದ್ದೆ. ಶಿವಮೊಗ್ಗ ಪೊಲೀಸರು ಮುಂಬೈಗೆ ಹೋಗಿ ಆತನನ್ನ ಬಂಧಿಸಿ ಕರೆತಂದಿದ್ದರು.

ಆತ ಅಂತಾರಾಷ್ಟ್ರೀಯ ಮಟ್ಟದ ಸೈಬರ್‌ ಹ್ಯಾಕರ್‌. ಈ ತರಹದ ಸಾಕಷ್ಟು ಜನರನ್ನ ಮೋಸಗೊಳಿಸಿ ಕೋಟಿಗಟ್ಟಲೇ ಹಣ ಮಾಡಿಕೊಂಡಿದ್ದನು. ಆತನ ಇತಿಹಾಸ ತೆಗೆದು ನೋಡಿದರೆ ನೂರಾರು ಜನರಿಗೆ ಮೋಸ ಮಾಡಿ ಹಣ ಲಪಟಾಯಿಸಿದ್ದನು. ನನ್ನ ಹಣ ವಾಪಸ್‌ ಬಂತು ಅದರ ಜೊತೆ ಹಲವರ ಹಣವೂ ಸಹ ಬಂತು. ನಾವು ಎಚ್ಚರಿಕೆಯಿಂದ ವ್ಯವಹರಿಸಬೇಕೆಂದು ಆನ್‌ಲೈನ್‌ನಲ್ಲಿ ಬಲೆ ಬೀಸುವ ಹ್ಯಾಕರ್‌ಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ