ಶಿವಮೊಗ್ಗ: ಸೀರೆಯುಟ್ಟು ಹೆಜ್ಜೆ ಹಾಕ್ತಿರೋ ಚೆಂದುಳ್ಳಿಯರು. ಟ್ರೆಂಡಿ ಡ್ರೆಸ್ನಲ್ಲಿ ವೈಯ್ಯಾರ ತೋರ್ತಿರೋ ಚಕೋರಿಯರು. ಸ್ಟೈಲ್ನಲ್ಲೇ ಬ್ಯೂಟಿಗಳು ಚಮಕ್. ಪಂಚೆ ತೊಟ್ಟು, ಶಲ್ಯ ಧರಿಸಿ ಹುಡುಗ್ರು ಎಂಟ್ರಿ ಕೊಟ್ರೆ ಕೇಳ್ಬೇಕಾ.
ಟ್ರೆಡಿಶನಲ್ ಡೇ ಅಂದ್ರೆ ಕಾಲೇಜ್ ಕುವರಿಯರು ಕನ್ನಡಿ ಬಿಟ್ಟು ಹೊರಗೆ ಬರೋದೆ ಇಲ್ಲ. ಅದ್ರಲ್ಲೂ ಗಂಡೈಕ್ಳಂತೂ ಪಂಚೆ ಉಟ್ಕೊಂಡು ಬ್ಲ್ಯಾಕ್ ಕಲರ್ ಶರ್ಟ್ ತೊಟ್ಟು ಗಾಗಲ್ ಹಾಕ್ಕೊಂಡು ರೌಂಡ್ಸ್ ಹಾಕಿದ್ರೆ ಮುಗಿದೋಯ್ತು ಕಥೆ. ಅಂದ್ಹಾಗೆ ಶಿವಮೊಗ್ಗ ನಗರದಲ್ಲಿರೋ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ಯಾಂಪಸ್ ಸಿಕ್ಕಾಪಟ್ಟೆ ಕಲರ್ಫುಲ್ ಆಗಿತ್ತು. ಇಷ್ಟು ದಿನ ಪಾಠ ಅಂತಿದ್ದ ಸ್ಟೂಡೆಂಟ್ಸ್ ಕ್ಲಾಸ್ಗೆ ಮಾರೋ ಗೋಲಿ, ಮಾಡ್ರೋ ಹಾವಳಿ ಅಂದ್ರು.
ಕಲರ್ಫುಲ್ ಡ್ರೆಸ್ನಲ್ಲಿ ಮಿಂಚಿದ ವಿದ್ಯಾರ್ಥಿಗಳು:
ಇಷ್ಟು ದಿನ ಯೂನಿಫಾರ್ಮ್ ಹಾಕ್ಕೊಂಡು ಕಾಲೇಜ್ಗೆ ಎಂಟ್ರಿ ಕೊಡ್ತಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ಕಲರ್ಫುಲ್ ಡ್ರೆಸ್ನಲ್ಲಿ ಮಿಂಚಿದ್ದೇ ಮಿಂಚಿದ್ದು. ಕಾಲೇಜ್ನಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಟ್ರೆಡಿಶನಲ್ ಡೇಯಲ್ಲಿ ಸ್ಟೂಡೆಂಟ್ಸ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ರು. ಹುಡುಗಿಯರು ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ್ರೆ, ಹುಡುಗರು ಹಳ್ಳಿ ಸ್ಟೈಲ್ ಡ್ರೆಸ್ನಲ್ಲಿ ಲುಕ್ ಕೊಟ್ರು.
ಬರೀ ಕ್ಲಾಸ್.. ಎಕ್ಸಾಂ ಅಂತಿದ್ದ ವಿದ್ಯಾರ್ಥಿಗಳು ಫುಲ್ ಖುಷಿ ಮೂಡ್ನಲ್ಲಿದ್ರು. ಕೆಲವರು ಫ್ರೆಂಡ್ಸ್ ಜೊತೆ ಸೆಲ್ಫಿಗೆ ಪೋಸ್ ಕೊಟ್ರು. ಇತ್ತ ಉಪನ್ಯಾಸಕರು ಕೂಡ ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕಿದ್ರು. ಒಟ್ನಲ್ಲಿ ಇಷ್ಟು ದಿನ ಮೊಬೈಲ್ ಫೋನ್, ಕ್ಲಾಸ್ ರೂಂಗಳಲ್ಲಿ ಪಾಠದ ಟೆನ್ಷನ್ನಲ್ಲಿ ಬ್ಯುಸಿಯಾಗಿದ್ದ ವಿದ್ಯಾರ್ಥಿಗಳು ಟ್ರೆಡಿಶನ್ ಡೇ ಸ್ಪೆಷಲ್ನಲ್ಲಿ ಮಿಂದೆದ್ರು. ಹುಡುಗಿಯರು ಡಿಫರೆಂಟ್ ಡ್ರೆಸ್ನಲ್ಲಿ ಮಿಂಚಿದ್ರೆ, ಗಂಡೈಕ್ಳು ನಾವ್ಯಾರಿಗೂ ಕಡಿಮೆ ಇಲ್ಲ ಅಂತ ಲುಕ್ ಕೊಟ್ರು.
Published On - 12:22 pm, Tue, 18 February 20