ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಸುರಿಸುತ್ತಿದೆ. ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ತುಳುಕುತ್ತಿವೆ. ಮಳೆ ನೀರಿನಿಂದ ತುಂಗಾ ಚಾನಲ್ ಕೂಡಾ ತುಂಬಿ ಹರಿಯುತ್ತಿದೆ. ಈ ನಡುವೆ ನಿನ್ನೆ (ಜುಲೈ 24) ಸಂಜೆ ಶಿವಮೊಗ್ಗ ಹೊರವಲಯದ ಸೋಮಿನಕೊಪ್ಪ ಗ್ರಾಮದ ಜೆ ಎಚ್ ಪಟೇಲ್ ಬಡಾವಣೆಯ 60 ಅಡಿ ತುಂಗಾ ಚಾನಲ್ಗೆ ಕಾಲು ಜಾರಿ 7 ವರ್ಷದ ಹಸು ಬಿದ್ದಿತ್ತು. ಚಾನಲ್ನಲ್ಲಿ ಬಿದ್ದು ಒದ್ದಾಡುತ್ತಿದ್ದ ಹಸುವನ್ನು ನೋಡಿದ ಸ್ಥಳೀಯರು ಮಾಲೀಕನಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ಮತ್ತು ಹಸು ಮಾಲೀಕ ಶೇಕ್ ದಾವೂದ್ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಮಳೆ ಸುರಿಯುತ್ತಿರುವುದರಿಂದ ಅವರಿಗೆ ಅಷ್ಟು ಆಳದಿಂದ ಹಸು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ನಂತರ ಹಸುವಿನ ರಕ್ಷಣೆಗಾಗಿ ಶಿವಮೊಗ್ಗ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಸ್ಥಳಕ್ಕೆ ಧಾವಿಸಿ 60 ಅಡಿಯ ತುಂಗಾ ಚಾನಲ್ಗೆ ಇಳಿದು ಹಸುವನ್ನು ರಕ್ಷಿಸಿದ್ದಾರೆ.
ಕಾರ್ಯಚರಣೆ ಹೀಗಿತ್ತು
ನೀರಿನಲ್ಲಿ ಒದ್ದಾಡುತ್ತಿದ್ದ ಹಸುವಿನ ಕಣ್ಣಿಗೆ ಮೊದಲು ಬಟ್ಟೆ ಕಟ್ಟುತ್ತಾರೆ. ಬಳಿಕ ಹಸುವಿಗೆ ಹಗ್ಗ ಕಟ್ಟಿ ಅದನ್ನು ಮೇಲೆ ಎಳೆಯುವ ಆಪರೇಶನ್ಗೆ ಮುಂದಾಗುತ್ತಾರೆ. ಸುಮಾರು ಒಂದೂವರೆ ಘಂಟೆಯ ಮಳೆಯಲ್ಲೇ ಹರಸಾಹಸ ಪಟ್ಟು ಹಸುವನ್ನು ರಕ್ಷಣೆ ಮಾಡುತ್ತಾರೆ. ಹಸುವನ್ನು ಜೀವಂತವಾಗಿ ಚಾನಲ್ನಿಂದ ಮೇಲೆ ಎತ್ತಲಾಗಿದೆ. ಹಸು ತುಂಬಾ ಗಾಬರಿ ಆಗಿತ್ತು. ಗೋ ಮಾತೆ ರಕ್ಷಣೆ ಮಾಡಿದ ಸಿಬ್ಬಂದಿ ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ. ಗಾಯಗೊಂಡಿರುವ ಹಸುವಿಗೆ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ
ಪ್ರವಾಸಿ ತಾಣವಾದ ಹರಿಹರದ ತುಂಗಭದ್ರಾ ಸೇತುವೆ; ನದಿ ನೋಡಲು ನೂರಾರು ಜನ ಆಗಮನ
Viral Video: ನೀರಿನೊಳಗೆ ದೈತ್ಯಾಕಾರದ ಅನಕೊಂಡಾ ನೋಡಿ ಬೆರಗಾದ ನೆಟ್ಟಿಗರು! ವಿಡಿಯೋ 1 ಮಿಲಿಯನ್ ವ್ಯೂವ್ಸ್
(cow had fallen into the 60 foot Tunga Canal in Shivamogga)