ಪ್ರವಾಸಿ ತಾಣವಾದ ಹರಿಹರದ ತುಂಗಭದ್ರಾ ಸೇತುವೆ; ನದಿ ನೋಡಲು ನೂರಾರು ಜನ ಆಗಮನ
ಭಾರೀ ಮಳೆಯಿಂದ ತುಂಗಭದ್ರಾ ನದಿಗೆ ಹೆಚ್ಚು ಪ್ರಮಾಣದ ನೀರು ಹರಿದುಬರುತ್ತಿದೆ. ಹರಿಹರದ ಗಂಗಾನಗರದಲ್ಲಿ ಹತ್ತಾರು ಮನೆಗಳು ಜಲಾವೃತವಾಗಿವೆ. ತಾತ್ಕಾಲಿಕವಾಗಿ 20 ಮನೆಗಳ ನಿವಾಸಿಗಳನ್ನ ಹರಿಹರದ ಎಪಿಎಂಸಿಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ದಾವಣಗೆರೆ: ದಿನದಿಂದ ದಿನಕ್ಕೆ ತುಂಗಭದ್ರಾ ನದಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಹರಿಹರ ನಗರದ ತುಂಗಭದ್ರಾ ಸೇತುವೆ ಪ್ರವಾಸಿ ತಾಣವಾಗಿದೆ. ಮೈ ತುಂಬಿ ಹರಿಯುತ್ತಿರುವ ನದಿಯನ್ನು ನೋಡಲು ನೂರಾರು ಜನ ಆಗಮಿಸುತ್ತಿದ್ದಾರೆ. ನದಿ ದಡದ ಮೇಲಿರುವ ಪುಣ್ಯಕ್ಷೇತ್ರ ಹರಿಹರೇಶ್ವ ಹಾಗೂ ರಾಘವೇಂದ್ರ ಮಠದಲ್ಲಿ ದರ್ಶನ ಪಡೆದು ನದಿ ನೋಡಲು ಜನ ಬರುತ್ತಿದ್ದಾರೆ. ಸೆಲ್ಫಿಗೆ ನಾ ಮುಂದು ತಾ ಮುಂದು ಅಂತ ಜನ ಮುಗಿ ಬೀಳುತ್ತಿದ್ದಾರೆ. ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹರಿಹರ ಸೇತುವೆ ಬಳಿ ಪೊಲೀಸ್ ಬಂದೋಬಸ್ತ್ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಜಲಾವೃತವಾದ ಹತ್ತಾರು ಮನೆಗಳು ಭಾರೀ ಮಳೆಯಿಂದ ತುಂಗಭದ್ರಾ ನದಿಗೆ ಹೆಚ್ಚು ಪ್ರಮಾಣದ ನೀರು ಹರಿದುಬರುತ್ತಿದೆ. ಹರಿಹರದ ಗಂಗಾನಗರದಲ್ಲಿ ಹತ್ತಾರು ಮನೆಗಳು ಜಲಾವೃತವಾಗಿವೆ. ತಾತ್ಕಾಲಿಕವಾಗಿ 20 ಮನೆಗಳ ನಿವಾಸಿಗಳನ್ನ ಹರಿಹರದ ಎಪಿಎಂಸಿಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಗಂಗಾನಗರದ ನಿವಾಸಿಗಳು ಹತ್ತಾರು ವರ್ಷಗಳಿಂದ ನಿರಂತರವಾಗಿ ಈ ಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಹಾಗೂ ಪ್ರವಾಹ ಬಂದಾಗ ಮಾತ್ರ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಭೇಟಿ ನೀಡುತ್ತಾರೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ.
ನಿರಂತರ ಮಳೆಗೆ ಭೂಕುಸಿತ ನಿರಂತರ ಮಳೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗೌಳೇರಹಟ್ಟಿ ಗ್ರಾಮದಲ್ಲಿ ಭೂಕುಸಿತವಾಗಿದೆ. ಉಮಾ ಎಂಬುವವರ ಮನೆ ಮುಂದೆಯೇ ಭೂಕುಸಿತವಾಗಿದ್ದು, ಮನೆ ಎದುರು ಬೃಹತ್ ಕಂದಕ ಸೃಷ್ಟಿಯಾಗಿತ್ತು. ಗ್ರಾಮ ಪಂಚಾಯತಿ ಸಿಬ್ಬಂದಿ ಜೆಸಿಬಿ ಮೂಲಕ ಕಂದಕವನ್ನು ಮುಚ್ಚಿದ್ದಾರೆ.
ಇದನ್ನೂ ಓದಿ
(Tungabhadra River is receiving heavy water and Hundreds of people are coming to see the river at davanagere)
Published On - 10:27 am, Sun, 25 July 21