ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್ ಅಂಕ ನೀಡಿ, ವಿಡಿಯೋ ಮೂಲಕ ಶಿಕ್ಷಣ ಸಚಿವ ಸುರೇಶ್​ ಕುಮಾರ್​ಗೆ ವಿದ್ಯಾರ್ಥಿನಿ ಒತ್ತಾಯ

ಜುಲೈ 22ರಂದು ನಡೆದ ಭಾಷಾ ವಿಷಯಗಳ ಪರೀಕ್ಷೆ ವೇಳೆ ಕನ್ನಡ ಪರೀಕ್ಷೆಯಲ್ಲಿ 19ನೇ ಪ್ರಶ್ನೆಗೆ ತಪ್ಪಾದ ನಾಲ್ಕು ಆಯ್ಕೆ ನೀಡಲಾಗಿತ್ತು. ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆ ಕೊಂದವರು ಯಾರು ಎಂಬ ಪ್ರಶ್ನೆಗೆ ರಾಮ, ಭೀಮ, ಹನುಮ ಹಾಗೂ ಚಡಗ ಎಂದು ನಾಲ್ಕು ತಪ್ಪು ಆಯ್ಕೆ ನೀಡಲಾಗಿದೆ.

ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್ ಅಂಕ ನೀಡಿ, ವಿಡಿಯೋ ಮೂಲಕ ಶಿಕ್ಷಣ ಸಚಿವ ಸುರೇಶ್​ ಕುಮಾರ್​ಗೆ ವಿದ್ಯಾರ್ಥಿನಿ ಒತ್ತಾಯ
ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಬನಶ್ರಿ ಭಟ್
Follow us
TV9 Web
| Updated By: ಆಯೇಷಾ ಬಾನು

Updated on:Jul 26, 2021 | 3:17 PM

ದಾವಣಗೆರೆ: ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು (SSLC Exam) ಜುಲೈ 19 ಹಾಗೂ ಜುಲೈ 22ರಂದು ಕರ್ನಾಟಕದಲ್ಲಿ ಏರ್ಪಡಿಸಲಾಗಿತ್ತು. ಸದ್ಯ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ. ಆದರೆ ಈಗ ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್ ಅಂಕ ನೀಡಿ ಎಂದು ವಿದ್ಯಾರ್ಥಿನಿಯೊಬ್ಬರು ವಿಡಿಯೋ ಮಾಡಿ ಶಿಕ್ಷಣ ಸಚಿವ ಸುರೇಶ ಕುಮಾರ್ರಿಗೆ ಆಗ್ರಹಿಸಿದ್ದಾರೆ.

ಜುಲೈ 22ರಂದು ನಡೆದ ಭಾಷಾ ವಿಷಯಗಳ ಪರೀಕ್ಷೆ ವೇಳೆ ಪ್ರಥಮ ಭಾಷೆ ಕನ್ನಡ ಪರೀಕ್ಷೆಯಲ್ಲಿ(First Language Kannada) 19ನೇ ಪ್ರಶ್ನೆಗೆ ತಪ್ಪಾದ ನಾಲ್ಕು ಆಯ್ಕೆ ನೀಡಲಾಗಿತ್ತು. ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆ ಕೊಂದವರು ಯಾರು ಎಂಬ ಪ್ರಶ್ನೆಗೆ ರಾಮ, ಭೀಮ, ಹನುಮ ಹಾಗೂ ಚಡಗ ಎಂದು ನಾಲ್ಕು ತಪ್ಪು ಆಯ್ಕೆ ನೀಡಲಾಗಿದೆ. ನಿಜವಾದ ಉತ್ತರ ಬಾಲ. ಹೀಗಾಗಿ ಇದಕ್ಕೆ ಗ್ರೇಸ್ ಅಂಕ ನೀಡಿ ಎಂದು ವಿಡಿಯೋ ಮಾಡಿ ಶಿಕ್ಷಣ ಸಚಿವ ಸುರೇ ಶ್ ಕುಮಾರ್ರಿಗರ ದಾವಣಗೆರೆ ಮೂಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಬನಶ್ರಿ ಭಟ್ ಆಗ್ರಹಿಸಿದ್ದಾರೆ. ಆದ್ರೆ ತಜ್ಞರ ಪ್ರಕಾರ ಭೀಮ ಸರಿಯಾದ ಉತ್ತರ ಎಂದು ಹೇಳಲಾಗುತ್ತಿದೆ.

SSLC

ಕನ್ನಡ ಪರೀಕ್ಷೆಯ 19ನೇ ಪ್ರಶ್ನೆ

ಬಾಲನು ಮಾಡಿದ ಕಸರತ್ತ.. ಕುದುರೆಯ ಕಡಿದ ಹತ್ತಿಪ್ಪತ್ತ.. ಎಂದು ಪಠ್ಯ ಪುಸ್ತಕದಲ್ಲಿ ಇದೆ. ಚಂದನದಲ್ಲಿ ಪ್ರಸಾರ ಮಾಡಿದ ಪಾಠದಲ್ಲಿಯೂ ಅದನ್ನೇ ಹೇಳಲಾಗಿದೆ. ಆದರೆ ಪರೀಕ್ಷೆಯಲ್ಲಿ ಮಾತ್ರ ಬಾಲನ ಹೆಸರು ನೀಡದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಬನಶ್ರೀ ಅಭಿಪ್ರಾಯ ಪಟ್ಟಿದ್ದಾರೆ.

ಬನಶ್ರಿ ಭಟ್ ದಾವಣಗೆರೆ ಸೇಂಟ್ ಪಾಲ್ಸ್ ಕಾನ್ವೇಂಟ್ ವಿದ್ಯಾರ್ಥಿನಿ. ಇತ್ತೀಚಿಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯ ದಲ್ಲಿ ವೇಳೆ 19ನೇ ಪ್ರಶ್ನೆಗೆ ನೀಡಿದ ನಾಲ್ಕು ಉತ್ತರಗಳು ತಪ್ಪಾಗಿವೆ. ಪ್ರಶ್ನೆ ಇರುವುದು ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆ ಕೊಂದವರು ಯಾರು ಅಂತಾ. ಇದಕ್ಕೆ ರಾಮ,ಭೀಮ, ಹನುಮ ಹಾಗೂ ಚಡಗ ಎಂಬ ನಾಲ್ಕು ಉತ್ತರ ಕೊಡಲಾಗಿದೆ. ಆದ್ರೆ ಈ ನಾಲ್ಕು ಉತ್ತರಗಳು ತಪ್ಪು‌. ಹೀಗೆ ನಾಲ್ಕು ತಪ್ಪು ಆಯ್ಕೆ ನೀಡಲಾಗಿದೆ. ನಿಜವಾದ ಉತ್ತರ ಬಾಲ ಅಂತಾ. ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡುವಂತೆ ಆಗ್ರಹಿಸಿ ಸಚಿವರಿಗೆ ಹಾಗೂ ಸಚಿವ ಪತ್ನಿಗೆ ಕಳುಹಿಸಿದ್ದಾಳೆ ಬನಶ್ರೀ ಭಟ್. ಇದನ್ನ ಪರಿಶೀಲನೆ ಮಾಡಿ ಸೂಕ್ತ ಒಂದು ಅಂಕ ಬೀಡಬೇಕು ಎಂಬುದು ಬನಶ್ರೀ ಭಟ್ ಆಗ್ರಹ.

ಜುಲೈ 19 ಹಾಗೂ ಜುಲೈ 22ರಂದು ಪರೀಕ್ಷೆಗಳು ನಡೆದಿದ್ದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ತನಕ ಪರೀಕ್ಷೆ ನಡೆದಿತ್ತು. ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಜುಲೈ 19 ಪರೀಕ್ಷೆ ಆಯೋಜಿಸಲಾಗಿತ್ತು. ಹಾಗೂ ಜುಲೈ 22ರಂದು ಭಾಷಾ ವಿಷಯಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಸೇರಿದಂತೆ ಪರೀಕ್ಷೆ ನಡೆದಿತ್ತು. ಮೂರು ವಿಷಯಗಳಿಂದ ಒಟ್ಟು 120 ಅಂಕಗಳಿಗೆ ಪರೀಕ್ಷೆ ಇರಲಿದ್ದು, ಆಬ್ಜೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಪ್ರಶ್ನೆಗಳಿಗೆ ಓಎಮ್ಆರ್ ಹಾಳೆಯಲ್ಲಿ ವಿದ್ಯಾರ್ಥಿಗಳು ಉತ್ತರ (Answer) ಬರೆಯಬೇಕಿದ್ದು, ಒಂದೊಂದು ವಿಷಯಕ್ಕೂ ಒಂದೊಂದು ಬಣ್ಣದ OMR ಶೀಟ್ ಇತ್ತು.

ಇದನ್ನೂ ಓದಿ: ದುಡ್ಡು ಕೊಟ್ಟರೆ ಎಸ್​ಎಸ್​ಎಲ್​ಸಿ ಪಾಸ್ ಮಾಡಲಾಗುತ್ತೆ ಎಂಬ ಸುಳ್ಳು ಸುದ್ದಿಯನ್ನು ನಂಬಬೇಡಿ; ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ

Published On - 10:15 am, Mon, 26 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ