ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ 3.5 ಲಕ್ಷ ಕ್ಯುಸೆಕ್ ನೀರು ಬಿಡುಗಡೆ, ಸ್ಥಳಾಂತರ ಮಾಡುವುದಿಲ್ಲ ಎಂದು ಪಟ್ಟು ಹಿಡಿದ ನಿವಾಸಿಗಳು

ನಾವು ಸತ್ತರೂ ನಡುಗಡ್ಡೆ ಬಿಟ್ಟು ಬರಲ್ಲ. ಇಲ್ಲೆ ಕೃಷ್ಣ ನದಿಯಲ್ಲೆ ಕೊಚ್ಚಿಕೊಂಡು ಹೋಗುತ್ತೇವೆ ಎಂದು ರಾಯಚೂರ ಜಿಲ್ಲೆಯ ಲಿಂಗಸಗೂರ ತಾಲೂಕಿನ ಕಡದರಗಡ್ಡೆ ನಡುಗಡ್ಡೆ ನಿವಾಸಿಗಳು ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ 3.5 ಲಕ್ಷ ಕ್ಯುಸೆಕ್ ನೀರು ಬಿಡುಗಡೆ, ಸ್ಥಳಾಂತರ ಮಾಡುವುದಿಲ್ಲ ಎಂದು ಪಟ್ಟು ಹಿಡಿದ ನಿವಾಸಿಗಳು
ರಾಯಚೂರಿನಲ್ಲಿ ಮಳೆಯ ಆರ್ಭಟ

ರಾಯಚೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಮೂಲಕ ಬಸವಸಾಗರ ಜಲಾಶಯಕ್ಕೆ ನೀರು ಹರಿಬಿಡಲಾಗಿದೆ. ಹೀಗಾಗಿ ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ 3.5 ಲಕ್ಷ ಕ್ಯುಸೆಕ್ ನೀರು ರಿಲೀಸ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಉಂಟಾಗಿದ್ದು ನಾವು ಸತ್ತರೂ ನಡುಗಡ್ಡೆ ಬಿಟ್ಟು ಬರಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ನಾವು ಸತ್ತರೂ ನಡುಗಡ್ಡೆ ಬಿಟ್ಟು ಬರಲ್ಲ. ಇಲ್ಲೆ ಕೃಷ್ಣ ನದಿಯಲ್ಲೆ ಕೊಚ್ಚಿಕೊಂಡು ಹೋಗುತ್ತೇವೆ ಎಂದು ರಾಯಚೂರ ಜಿಲ್ಲೆಯ ಲಿಂಗಸಗೂರ ತಾಲೂಕಿನ ಕಡದರಗಡ್ಡೆ ನಡುಗಡ್ಡೆ ನಿವಾಸಿಗಳು ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ನಮ್ಮ ತಂಟೆಗೆ ಬರಬೇಡಿ ನಾವೆಲ್ಲೂ ಬರಲ್ಲ ನಾವಿದ್ರೂ ಇಲ್ಲೆ.. ಸತ್ತರೂ ಇಲ್ಲೆ ಎಂದು ಶಾಶ್ವತ ಸೂರು ಪರಿಹಾರ ನೀಡದ ಜಿಲ್ಲಾಡಳಿದ ವಿರುದ್ದ ನಡುಗಡ್ಡೆ ನಿವಾಸಿಗಳು ಫುಲ್ ಗರಂ ಆಗಿದ್ದಾರೆ.

ಸದ್ಯ ಈಗ ಕಡದೆಗಡ್ಡೆಯಲ್ಲಿ ಸಿಲುಕಿರುವ ನಿವಾಸಿಗಳ ಬದುಕು ನರಕವಾಗಿದೆ. ಪ್ರವಾಹ ಬಂದಾಗೊಮ್ಮೆ ತಮ್ಮನ್ನ ಸ್ಥಳಾಂತರಿಸಿ ಕೈ ತೊಳದೆಕೊಳ್ತಿರುವುದಕ್ಕೆ ನಡುಗಡ್ಡೆ ನಿವಾಸಿಗಳು ಅಧಿಕಾರಿಗಳ ನಡೆಯನ್ನು ಖಂಡಿಸಿದ್ದಾರೆ. ಕಳೆದ ಬಾರಿ ಬಲವಂತವಾಗಿ ಹೆಲಿಕ್ಯಾಪ್ಟರ್ ಮೂಲಕ ಜನರನ್ನು ಸ್ಥಳಾಂತರಿಸಿ ಬಳಿಕ ಪರಿಹಾರ ನೀಡದೆ ಕೈ ಬಿಡಲಾಗಿತ್ತು. ಯಾವುದೇ ಶಾಶ್ವತ ಪರಿಹಾರ ನೀಡಲಿಲ್ಲ. ಮನೆ ಜಮೀನು ನೀಡದೇ ಅಧಿಕಾರಿಗಳು ಮೋಸ ಮಾಡಿದ್ದಾರೆ. ನೂರಾರು ಕುರಿಗಳು ಕೃಷ್ಣ ನದಿ ಪಾಲಾಗಿದ್ದವು ಇಂದಿಗೂ ಬಿಡಿಗಾಸು ಪರಿಹಾರ ನೀಡಿಲ್ಲ. ಗಂಜಿ ಕೇಂದ್ರದಲ್ಲಿ ಬಿಟ್ಟು ಹೋದವರತ್ತ ತಿರುಗಿಯೂ ನೋಡಲಿಲ್ಲ. ಒಂದ ವಾರ ಅನ್ನ ಸಾರು ಕೊಟ್ರು ಶಾಶ್ವತ ಸೂರು ಒದಗಿಸುವ ಜಮೀನು ನೀಡುವ ಬಗ್ಗೆ ಇಂದಿಗೂ ಕ್ರಮ ಕೈಗೊಂಡಿಲ್ಲ ಎಂದು ನಡುಗಡ್ಡೆಯಲ್ಲಿ ಸಿಲುಕಿರುವ ಮಹಿಳೆ ಆಕ್ರೋಶ ಹೊರ ಹಾಕಿದ್ದಾರೆ. ಈ ಬಾರಿ ನಡಿಗಡ್ಡೆಯಿಂದ ತಮ್ಮನ್ನ ಕರೆದೊಯ್ಯಲು ಬಂದ್ರೆ ಸತ್ತರೂ ಹೋಗುವುದಿಲ್ಲ. ಇಲ್ಲೆ ಕೃಷ್ಣ ನದಿಯಲ್ಲೆ ಕೊಚ್ಚಕೊಂಡು ಹೋಗುತ್ತೇವೆ ಹೊರತು ಎಲ್ಲೂ ಬರಲ್ಲ ಎಂದರು.

ಇದನ್ನೂ ಓದಿ: ತ್ಯಾಜ್ಯ ವಿಲೇವಾರಿ ಮಾಡದಿದ್ದಕ್ಕೆ ಆಕ್ರೋಶ; ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮಹಾನಗರ ಪಾಲಿಕೆ ಆಯುಕ್ತರ ಮನೆ ಮುಂದೆ ಸುರಿದ ಬಿಜೆಪಿ ಶಾಸಕ ಅಭಯ್ ಪಾಟೀಲ್

Click on your DTH Provider to Add TV9 Kannada