ಹರ್ಷನ ಕೊಲೆ ನಂತರವೂ ಪರಿಸ್ಥಿತಿ ಬದ್ಲಾಗಿಲ್ಲ: ಎರಡೂ ಕಡೆ ಬಿಜೆಪಿ ಇದ್ದರೂ ಕಠಿಣ ಕ್ರಮಕ್ಕೆ ಮುಂದಾಗ್ತಿಲ್ಲ -ಮೃತ ಹರ್ಷ ತಾಯಿ ಆಕ್ರೋಶ

| Updated By: ಆಯೇಷಾ ಬಾನು

Updated on: Jul 27, 2022 | 6:17 PM

ಮಗನನ್ನು ಕಳೆದುಕೊಂಡು ಐದು ತಿಂಗಳು ಆಗಿದೆ. ಈ ನಡುವೆ ಮತ್ತೊಬ್ಬ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಆಗಿದೆ. ಇದೇ ರೀತಿ ಕೊಲೆಗಳು ನಡೆಯುತ್ತಿದ್ದರೆ ಯಾರು ಜವಾಬ್ದಾರಿ? ಪ್ರವೀಣ್ ತಂದೆ ತಾಯಿ ಎಷ್ಟೊಂದು ನೋವು ಅನುಭವಿಸುತ್ತಿದ್ದಾರೆ.

ಹರ್ಷನ ಕೊಲೆ ನಂತರವೂ ಪರಿಸ್ಥಿತಿ ಬದ್ಲಾಗಿಲ್ಲ: ಎರಡೂ ಕಡೆ ಬಿಜೆಪಿ ಇದ್ದರೂ ಕಠಿಣ ಕ್ರಮಕ್ಕೆ ಮುಂದಾಗ್ತಿಲ್ಲ -ಮೃತ ಹರ್ಷ ತಾಯಿ ಆಕ್ರೋಶ
ಮೃತ ಹರ್ಷ ತಾಯಿ ಪದ್ಮಾ
Follow us on

ಶಿವಮೊಗ್ಗ: ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರುರನ್ನ(Praveen Nettar) ನಿನ್ನೆ ರಾತ್ರಿ(ಜುಲೈ 26) ಮೂವರು ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆಗೆ ಇಡೀ ರಾಜ್ಯದ ಜನ ಖಂಡನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೃತ ಹರ್ಷ ತಾಯಿ ಪದ್ಮಾ(Bajrang Dal activist Harsha Murder) ಕೋಡ ಆಕ್ರೋಶ ಹೊರ ಹಾಕಿದ್ದಾರೆ.‘

ಮಗನನ್ನು ಕಳೆದುಕೊಂಡು ಐದು ತಿಂಗಳು ಆಗಿದೆ. ಈ ನಡುವೆ ಮತ್ತೊಬ್ಬ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಆಗಿದೆ. ಇದೇ ರೀತಿ ಕೊಲೆಗಳು ನಡೆಯುತ್ತಿದ್ದರೆ ಯಾರು ಜವಾಬ್ದಾರಿ? ಪ್ರವೀಣ್ ತಂದೆ ತಾಯಿ ಎಷ್ಟೊಂದು ನೋವು ಅನುಭವಿಸುತ್ತಿದ್ದಾರೆ. ಹರ್ಷ ಕೊಲೆ ಪ್ರಕರಣದ ನಂತರ ಪರಿಸ್ಥಿತಿ ಬದಲಾಗಿಲ್ಲ. ಅಂತ್ಯಕ್ರಿಯೆ ಹೋದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಅನೇಕರಿಗೆ ಗಾಯವಾಗಿದೆ. ಹಾಗಾದ್ರೆ ಸಾವಿಗೆ ನ್ಯಾಯ ಕೇಳುವುದು ತಪ್ಪಾ?

ಹರ್ಷ ಕುಟುಂಬಕ್ಕೆ ಸಹಾಯ ಮಾಡಿದಂತೆ ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಬೇಕು. ಕೂಡಲೇ ತನಿಖೆ ಮಾಡಿ ಆರೋಪಿಗಳ ಬಂಧನವಾಗಿ ಶಿಕ್ಷೆ ಆಗಬೇಕು. ಘಟನೆ ನಡೆದು ವಿಳಂಬ ಆದ್ರೆ ಕೊಲೆ ಮಾಡಿದ ಆರೋಪಿಗಳಿಗೆ ಮತ್ತು ಕೃತ್ಯ ಮಾಡುವವರಿಗೆ ಭಯ ಇಲ್ಲದಂತಾಗುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಆದ್ರೂ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಹರ್ಷ ತಾಯಿ ಪ್ರವೀಣ್ ಕೊಲೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಯದಲ್ಲಿ ಒಂದು‌ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಮೃತ ಪ್ರವೀಣ್ ಪತ್ನಿ ಮನವಿ

ಇನ್ನು ಮತ್ತೊಂದೆಡೆ ಮೃತ ಪ್ರವೀಣ್ ಪತ್ನಿ ನೂತನ ಪತಿ ಸಾವಿಗೆ ಕಣ್ಣೀರು ಹಾಕಿದ್ದಾರೆ. ನಾವು ಒಟ್ಟಿಗೆ ಅನ್ಯೋನ್ಯವಾಗಿ ಇರ್ತಿದ್ವಿ. ಎಷ್ಟೋ ಜನ ನಮ್ಮನ್ನ ಒಟ್ಟಿಗೆ ನೋಡಿ ಗಂಡ ಹೆಂಡತಿ ನಿಮ್ಮ ಹಾಗೆ ಇರಬೇಕು ಎಂದಿದ್ರು. ಯಾರೆ ಕಷ್ಟದಲ್ಲಿದ್ದಾರೆ ಎಂದ್ರೆ ಸಾಕು ಓಡಿ ಹೋಗ್ತಿದ್ರು. ಯಾವುದೇ ಸಮಯ ನೋಡದೇ ಹೋಗಿ ಬಿಡ್ತಿದ್ರು. ಯಾರಿಗೂ ಕೇಡು ಬಯಸುವ ಮನಷ್ಯ ಅಲ್ಲಾ ಪ್ರವೀಣ್. ಯಾಕೆ ಕೊಂದರು ಅನ್ನೋದೆ ಗೊತ್ತಿಲ್ಲ. ಯಾರಿಗೂ ಕೇಡು ಮಾಡುವ ಮನುಷ್ಯ ಅಲ್ಲ. ನಾವು ನಮ್ಮ ಅಂಗಡಿ ಕೆಲಸ ಅಷ್ಟೇ ನೋಡಿಕೊಂಡು ಬರ್ತಿದ್ವಿ. ಹಂತಕರನ್ನು ಅವರ ಕಾರ್ಯ ಮುಗಿಯುವ ಮುಂಚೆ ಶಿಕ್ಷೆ ನೀಡಿದ್ರೆ ಸಾಕು. ನಮ್ಮ ಅಂಗಡಿ ಪಕ್ಕದ ಮುಸ್ಲೀಮರು ನಮ್ಮ ಜೊತೆ ಚನ್ನಾಗೇ ಇದ್ದರು. ಮುಸ್ಲೀಮರನ್ನು ದ್ವೇಷ ಮಾಡುವಂತಹ ವ್ಯಕ್ತಿ ಕೂಡ ಅಲ್ಲ ಎಂದು ಪ್ರವೀಣ್ ಪತ್ನಿ ಕಣ್ಣೀರು ಹಾಕಿದ್ದಾರೆ.

ಸುಳ್ಯದಲ್ಲಿ ಒಂದು‌ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು. ಈ ರೀತಿ ಆದಾಗ ಪುತ್ತೂರಿಗೆ ಹೋಗುವಂತಾಯ್ತು. ಇಲ್ಲೇ ಆಸ್ಪತ್ರೆ ಇದ್ದಿದ್ದರೆ ಬದುಕುತ್ತಿದ್ದರೋ ಏನೊ. ಬೇರೆಯವರಿಗರ ಈ ರೀತಿ ತೊಂದರೆ ಆಗಬಾರದು ಎಂದು ನೂತನ ಮನವಿ ಮಾಡಿದ್ದಾರೆ.

Published On - 6:04 pm, Wed, 27 July 22