ಟಿಪ್ಪು ಪ್ರತಿಮೆ ನಿರ್ಮಾಣ; ಶಾಸಕ ತನ್ವೀರ್ ಸೇಠ್​ ದೇಶದ್ರೋಹಿ ಚಟುವಟಿಕೆಯ ಒಂದು ಭಾಗ ಆಗುತ್ತಾರೆ: ಕೆ.ಎಸ್.ಈಶ್ವರಪ್ಪ

ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿದರೆ ತನ್ವೀರ್ ದೇಶದ್ರೋಹಿ ಚಟುವಟಿಕೆಯ ಒಂದು ಭಾಗ ಆಗುತ್ತಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಟಿಪ್ಪು ಪ್ರತಿಮೆ ನಿರ್ಮಾಣ; ಶಾಸಕ ತನ್ವೀರ್ ಸೇಠ್​ ದೇಶದ್ರೋಹಿ ಚಟುವಟಿಕೆಯ ಒಂದು ಭಾಗ ಆಗುತ್ತಾರೆ: ಕೆ.ಎಸ್.ಈಶ್ವರಪ್ಪ
ಕೆ ಎಸ್ ಈಶ್ವರಪ್ಪ, ಶಾಸಕ
Edited By:

Updated on: Nov 14, 2022 | 4:00 PM

ಶಿವಮೊಗ್ಗ: ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್ (Tanveer Seth)​ ಟಿಪ್ಪು (Tippu) ಪ್ರತಿಮೆ ನಿರ್ಮಾಣ ಮಾಡಿದರೆ ತನ್ವೀರ್ ದೇಶದ್ರೋಹಿ ಚಟುವಟಿಕೆಯ ಒಂದು ಭಾಗ ಆಗುತ್ತಾರೆ ಎಂದು ಶಿವಮೊಗ್ಗದಲ್ಲಿ (Shivamogga) ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ. ತನ್ವೀರ್ ಸೇಠ್ ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ ಎಸ್​ ಈಶ್ವರಪ್ಪ ತನ್ವೀರ್ ಸೇಠ್​ ಈ ರೀತಿ ಹೇಳಿಕೆ ಕೊಟ್ಟಿದ್ದು ತಪ್ಪು. ಶಾಸಕ ತನ್ವೀರ್​ ಸೇಠ್​​ ದೇಶದ ಜನರ ಕ್ಷಮೆಯಾಚಿಸಬೇಕು ಎಂದಿದ್ದಾರೆ.

ಶಾಸಕ ತನ್ವೀರ್​ ಸೇಠ್​​ಗೆ ಕಾಂಗ್ರೆಸ್​ ನಾಯಕರು ಬುದ್ಧಿ ಹೇಳಲಿ. ಬೇಕಾದರೆ ಅಬ್ದುಲ್​ ಕಲಾಂ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಲಿ. ಅದುಬಿಟ್ಟು ದೇಶದ್ರೋಹಿ ಟಿಪ್ಪು ಪ್ರತಿಮೆ ಮಾಡುವುದು ಎಷ್ಟು ಸರಿ ? ಇಸ್ಲಾಂ ಧರ್ಮದಲ್ಲಿ ಮೂರ್ತಿಗೆ ಅವಕಾಶ ಇಲ್ಲ. ತನ್ವೀರ್ ಸೇಠ್​ ಎಲ್​ಕೆಜಿ ವಿದ್ಯಾರ್ಥಿಯಂತೆ ಪಾಠ ಕಲಿಯಲಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸುಳಿವು ನೀಡಿದ ವಿಚಾರವಾಗಿ ಮಾತನಾಡಿದ ಅವರು ಜನ ಅಭಿಮಾನದಿಂದ ಸಿದ್ದರಾಮಯ್ಯರನ್ನು ಕರೆಯಬಹುದು. ಯಾವ ಕ್ಷೇತ್ರದಲ್ಲಿ ಗೆಲುವು, ಸೋಲು ಕಂಡಿದ್ದಾರೆ, ಅದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಬೇಕು. ಅದು ನಿಜವಾದ ಪ್ರಜಾಪ್ರಭುತ್ವದ ವ್ಯವಸ್ಥೆ ಆಗಿದೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ ನಿಜವಾದ ನಾಯಕನಾಗುತ್ತಾನೆ. ಸೋಲುವ ಭಯದಿಂದ ಕ್ಷೇತ್ರ ಬದಲಾವಣೆ ಮಾಡಬೇಡಿ. ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಡಿ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ. ಅದು ಬಿಟ್ಟು ಈ ಸಾರಿ ಒಂದು ಕ್ಷೇತ್ರ. ಮುಂದಿನ ಬಾರಿ ಮತ್ತೊಂದು ಕ್ಷೇತ್ರ, ಈ ರೀತಿ ಹೋದರೆ, ಆ ಕ್ಷೇತ್ರದ ಅಭಿವೃದ್ಧಿಯಾಗಲ್ಲಾ. ಜನರ ಪ್ರೀತಿ ವಿಶ್ವಾಸ ಗಳಿಸಲಿಲ್ಲ ಎನ್ನುವ ಅಭಿಪ್ರಾಯ ಬರುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:55 pm, Mon, 14 November 22

Follow Us