ಶಿವಮೊಗ್ಗ: ಸೊರಬದಲ್ಲಿ ಬಿಜೆಪಿಯಲ್ಲಿ (BJP) ಭಿನ್ನಮತ ಸ್ಪೋಟಗೊಂಡಿದೆ. ಮೂಲ ಬಿಜೆಪಿಗರ ಮತ್ತು ವಲಸೆ ಬಿಜೆಪಿಗರ ನಡುವೆ ಕಿತ್ತಾಟ ಶುರುವಾಗಿದೆ. ಸೊರಬದಲ್ಲಿ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ವಿರುದ್ಧ ಮೂಲ ಬಿಜೆಪಿಗರ ಬಂಡಾಯವೆದ್ದಿದ್ದಾರೆ. ಪ್ರಧಾನಿ ಮೋದಿ ಜನ್ಮದಿನದಂದು ಕುಮಾರ್ ಬಂಗಾರಪ್ಪ ವಿರುದ್ಧ ಮೂಲ ಬಿಜೆಪಿಗರಿಂದ ನಮೋ ವೇದಿಕೆ ಸೊರಬ ಘಟಕ ಆರಂಭವಾಗಿದೆ.
ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ vs ಬಿಜೆಪಿಯ ಹಿರಿಯ ಮುಖಂಡ ಪದ್ಮನಾಭ ಭಟ್
ಪ್ರಧಾನಿ ಮೋದಿ ಜನ್ಮದಿನದಂದು ನಮೋ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಕುಮಾರ ಬಂಗಾರಪ್ಪ ತಂದೆ ತಾಯಿಯನ್ನು ರಾತ್ರಿ ಮನೆ ಬಿಟ್ಟು ಹೊರಗೆ ಹಾಕಿದ್ದಾರೆಂದು ಮೂಲ ಬಿಜೆಪಿಯ ಹಿರಿಯ ಮುಖಂಡ ಪದ್ಮನಾಭ ಭಟ್, ಕುಮಾರ ಬಂಗಾರಪ್ಪ ವಿರುದ್ಧ ವಾಗ್ದಾಳಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಕುಮಾರ ಬಂಗಾರಪ್ಪ ಬೆಂಬಲಿಗರು ಪದ್ಮನಾಭ ಭಟ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಪದ್ಮನಾಭ ಭಟ್ ವಿರುದ್ಧ ಕುಮಾರ ಬಂಗಾರಪ್ಪ ಬೆಂಬಲಿಗ ಎಂಡಿ ಉಮೇಶ್ ಕನಕ ನಿಂದನೆ ಮಾಡಿದ್ದರು. ಹೀಗಾಗಿ ನಮೋ ವೇದಿಕೆ ಸೊರಬ ಪ್ರಮುಖರಿಂದ ಸೊರಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ನು ನಮೋ ವೇದಿಕೆ ಆರಂಭದ ಬಳಿಕ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿದ್ದು, ಪರಸ್ಪರ ಪ್ರಮುಖರ ಮಾತಿನ ಚಕಮಕಿ ನಡೆಯುತ್ತಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Mon, 19 September 22