ಶಿವಮೊಗ್ಗ: ನಗರದ ಖಾಸಗಿ ಲಾಡ್ಜ್ನಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಶಿವಮೊಗ್ಗದ ಸರ್ಕಾರಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ನಲ್ಲಿ ನಡೆದಿದೆ. ತುಮಕೂರು ಮೂಲದ ಮಂಜುನಾಥ್(26) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಂಜುನಾಥ್ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಸೂರಗೊಂಡನಹಳ್ಳಿ ಗ್ರಾಮದ ನಿವಾಸಿ. ಸೆಪ್ಟೆಂಬರ್ 13 ರಂದು ಖಾಸಗಿ ಲಾಡ್ಜ್ನಲ್ಲಿ ಬಂದು ವಾಸ್ತವ್ಯ ಹೂಡಿದ್ದು, ನಿನ್ನೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್‌ನೋಟ್ ಬರೆದಿಟ್ಟು ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದು, ಅಕ್ಕ ಸುಧಾಳನ್ನು ಕೊಲೆಗೈದಿದ್ದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಸ್ನೇಹಿತನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದ ಅಕ್ಕ ಸುಧಾ, ಕೋಪದಿಂದ ಅಕ್ಕನನ್ನು ಕೊಂದು ಆತ್ಮಹತ್ಯೆಯೆಂದು ಉಲ್ಲೇಖಿಸಲಾಗಿದೆ. ಕೊಠಡಿಯಿಂದ ವಾಸನೆ ಬಂದ ಹಿನ್ನೆಲೆ ಲಾಡ್ಜ್ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಡಹಗಲು ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಬೆಂಗಳೂರು: ಹಾಡಹಗಲು ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದು, 7.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮನೆಗಳ್ಳತನ ಮಾಡ್ತಿದ್ದ ಆರೋಪಿ ಜಯಂತಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಹಗಲು ಹೊತ್ತಿನಲ್ಲಿಯೇ ಮನೆ ಲಾಕ್ ಮುರಿಯುತಿದ್ದ ಈ ಜಯಂತಿ, ನಂತರ ಇಡೀ ಮನೆಯನ್ನು ಜಾಲಾಡಿ ಚಿನ್ನಾಭರಣ, ಹಣ ಕದ್ದು ಪರಾರಿಯಾಗುತ್ತಿದ್ದಳು. ಬೆಂಗಳೂರಿನ ವಿವಿಧ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.
ನವವಿವಾಹಿತೆಯ ಬರ್ಬರ ಹತ್ಯೆ
ಬೆಂಗಳೂರು ಗ್ರಾಮಾಂತರ: ಚಾಕುವಿನಿಂದ ಇರಿದು ನವವಿವಾಹಿತೆಯ ಬರ್ಬರ ಹತ್ಯೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ. ಪ್ರೀತಿ ನಿರಾಕರಿಸಿ ಬೇರೊಬ್ಬನ ಜೊತೆ ವಿವಾಹವಾಗಿದ್ದಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಗೈಯಲಾಗಿದೆ. ಪಾಗಲ್ ಪ್ರೇಮಿ ಸುಬ್ರಹ್ಮಣ್ಯ ಎಂಬುವನಿಂದ ಸೌಮ್ಯಾ(23) ಕೊಲೆಯಾದ ದುರ್ದೈವಿ.
ಬೆಂಗಳೂರಿನ ನಾಗವಾರದ ಕಾಫಿ ಡೆನಲ್ಲಿ ಕೆಲಸ ಮಾಡಿಕೊಂಡಿದ್ದ ಸೌಮ್ಯ ಹಾಗೂ ಅಲ್ಲೆ ಕೆಲಸ ಮಾಡಿಕೊಂಡಿದ್ದ ಸುಬ್ರಮಣ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಸೌಮ್ಯ ಕೆಲಸ ಬಿಟ್ಟಿದ್ದು, ಹದಿನೈದು ದಿನಗಳ ಹಿಂದೆ ಬೆರೊಬ್ಬನ ಜೊತೆ ಮದುವೆಯಾಗಿದ್ದಳು. ಮದುವೆ ವಿಚಾರ ತಿಳಿದ ಸುಬ್ರಮಣ್ಯ ಕೊಲೆ ಮಾಡಲು ನಿರ್ಧರಿಸಿದ್ದಾನೆ. ಅದರಂತೆ ರಾತ್ರಿ ಮನೆಯವರು ಗಣೇಶನ ಪೂಜೆಗೆ ಹೋಗಿದ್ದ ಹಿನ್ನೆಲೆ ಸೌಮ್ಯ ಮನೆಯಲ್ಲಿ ಒಂಟಿಯಾಗಿದ್ದಳು. ಈ ವೇಳೆ ಮನೆಗೆ ನುಗ್ಗಿದ ಸುಬ್ರಮಣ್ಯ ಎರಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಮನೆಗಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ
ಬೆಂಗಳೂರು: ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಜು ಸೆಲ್ವರಾಜ್ (36) ಬಂಧಿತ ಆರೋಪಿ. ಗೋವಾ, ಖಾನಾಪುರ, ಯಲ್ಲಾಪುರ ಸೇರಿದಂತೆ ವಿವಿಧೆಡೆ ಆರೋಪಿ ವಿರುದ್ಧ ಪ್ರಕರಣಗಳಿವೆ. ಬಂಧಿತನಿಂದ 3.50 ಲಕ್ಷ ಮೌಲ್ಯದ 74 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಾಣಸವಾಡಿ ಠಾಣಾ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೋಲೀಸರ ದಾಳಿ:
ಕೋಲಾರ: ರೆಹಮತ್ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಯಾಸ್ ಎಂಬಾತನ ಅಂಗಡಿ ಮೇಲೆ ಆಹಾರ ಇಲಾಖೆ ಉಪ ನಿರ್ದೇಶಕಿ ಶೃತಿ ಹಾಗೂ ಗಲ್ಪೇಟೆ ಪೊಲೀಸರಿಂದ ದಾಳಿ ಮಾಡಲಾಗಿದೆ. 30ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ಗಳು ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:37 pm, Fri, 16 September 22