ಶಿಕಾರಿಪುರ ಗಲಭೆ; ತಾಲೂಕು ಕಾಂಗ್ರೆಸ್ ನಾಯಕ ರಾಘವೇಂದ್ರ ನಾಯ್ಕ ಜೈಲಿನಿಂದ ಬಿಡುಗಡೆ

|

Updated on: Mar 29, 2023 | 7:02 PM

ಶಿಕಾರಿಪುರ ಪಟ್ಟಣದಲ್ಲಿ ಒಳಮೀಸಲಾತಿ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ ಉಂಟಾಗಿದ್ದ ಗಲಭೆಯಲ್ಲಿ (Shikaripur Violence) ಶಾಮೀಲಾದ ಆರೋಪದಲ್ಲಿ ಬಂಧಿತರಾಗಿದ್ದ ತಾಲೂಕು ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಶಿಕಾರಿಪುರ ಗಲಭೆ; ತಾಲೂಕು ಕಾಂಗ್ರೆಸ್ ನಾಯಕ ರಾಘವೇಂದ್ರ ನಾಯ್ಕ ಜೈಲಿನಿಂದ ಬಿಡುಗಡೆ
ಕಾಂಗ್ರೆಸ್​ ಪಕ್ಷದ ಧ್ವಜ (ಸಾಂದರ್ಭಿಕ ಚಿತ್ರ)
Follow us on

ಶಿವಮೊಗ್ಗ: ಶಿಕಾರಿಪುರ ಪಟ್ಟಣದಲ್ಲಿ ಒಳಮೀಸಲಾತಿ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ ಉಂಟಾಗಿದ್ದ ಗಲಭೆಯಲ್ಲಿ (Shikaripur Violence) ಶಾಮೀಲಾದ ಆರೋಪದಲ್ಲಿ ಬಂಧಿತರಾಗಿದ್ದ ತಾಲೂಕು ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬಳಿಕ ‘ಟಿವಿ9’ಗೆ ಹೇಳಿಕೆ ನೀಡಿರುವ ರಾಘವೇಂದ್ರ, ನಾನು ಶಿಕಾರಿಪುರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ. ಮೊನ್ನೆ ನಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ನಮ್ಮನ್ನು ಪ್ರಕರಣದಲ್ಲಿ ಗೂಂಡಾಗಳ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರನ್ನು ಶಾಸಕರನ್ನಾಗಿ, ಮುಖ್ಯಮಂತ್ರಿಯನ್ನಾಗಿ 45 ವರ್ಷ ಬಂಜಾರ, ಭೋವಿ, ಕೊರಮ ಸಮಾಜ ಬೆಳೆಸಿದೆ. ಆದರೆ, ಅವರ ಬೆನ್ನಿಗೆ ಚೂರಿ ಹಾಕಿ ಒಳಮೀಸಲಾತಿಗೆ ಬಿಜೆಪಿ ಸರ್ಕಾರ ಶಿಫಾರಸ್ಸು ಮಾಡಿದೆ. ಒಳ ಮೀಸಲಾತಿ ವಿರೋಧಿಸಿ ಮೊನ್ನೆ ಶಿಕಾರಿಪುರದಲ್ಲಿ ಬಂಜಾರ ಸಮಾಜದಿಂದ ಹೋರಾಟ ಮಾಡಲಾಗಿತ್ತು. ಪ್ರತಿಭಟನೆಯ ಶಾಂತಿರೀತಿಯಲ್ಲಿ ನಡೆಯುತ್ತಿತ್ತು. ಆ ವೇಳೆ, ಪೊಲೀಸರು ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಆ ನಂತರ ಹೋರಾಟ ವಿಕೋಪಕ್ಕೆ ತಿರುಗಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Shikaripura violence: ಶಿಕಾರಿಪುರ ಹಿಂಸಾಚಾರ; ಮೂವರ ಬಂಧನ, ಮುಂದುವರಿದ ಪ್ರತಿಭಟನೆ

ನಾವೂ ಗೂಂಡಾಗಳಾಗಲೀ ಕಿಡಿಗೇಡಿಗಳಾಗಲೀ ಅಲ್ಲ. ಕ್ಷೇತ್ರದಲ್ಲಿ ನಿರಂತರವಾಗಿ ಹೋರಾಟ ಮಾಡಿದ್ದೇವೆ. ಪೊಲೀಸರ ವೈಫಲ್ಯದಿಂದ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪೋಲಿಸರ ಅಮಾನತು ಆಗಿಲ್ಲ. ಪೊಲೀಸ್​​ ಇಲಾಖೆ 10 ರಿಂದ 15 ಕ್ಯಾಮರಾಗಳಲ್ಲಿ ವಿಡಿಯೋ ಮಾಡಿದೆ. ಅದರಲ್ಲಿ ಒಂದರಲ್ಲಾದರೂ ನಾನು ಕಲ್ಲು ಎಸೆದಿರುವ ದೃಶ್ಯ ಇದೆಯೇ ತೋರಿಸಿ ಎಂದು ಅವರು ಸವಾಲೆಸೆದಿದ್ದಾರೆ.

ನಾವು ಕಲ್ಲು ಎಸೆದಿರುವುದು ಸಾಬೀತು ಮಾಡಿದರೆ ಗಲ್ಲು ಶಿಕ್ಷೆಗೂ ಸಿದ್ಧ. ಸಮಾಜಕ್ಕೆ ಅನ್ಯಾಯ ಆದರೆ ಅದರ ವಿರುದ್ಧ ಹೋರಾಟ ಮಾಡಿ ಜೀವ ಕೊಡಲು ನಾವು ಸಿದ್ಧ. ಹಿಂಸಾಚಾರಕ್ಕೆ ಹೊಣೆ ಪೋಲಿಸರು ಆಗಿದ್ದಾರೆ. ವಿನಾಕಾರಣ ಅಮಾಯಕರಿಗೆ ಪೋಲಿಸರು ಟಾರ್ಚರ್ ನೀಡಿದ್ದಾರೆ. ರಾಜಕೀಯ ಪ್ರೇರಿತರಾಗಿ ನನ್ನ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ ಎಂದು ರಾಘವೇಂದ್ರ ನಾಯ್ಕ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ