ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಕಾಲೇಜು ಓಪನ್; ವಿದ್ಯಾರ್ಥಿಗಳು ತೆರಳುತ್ತಿರುವ ದೃಶ್ಯ ಟಿವಿ9ಗೆ ಲಭ್ಯ

| Updated By: preethi shettigar

Updated on: Jan 08, 2022 | 12:33 PM

ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಕಾಲೇಜು ತೆರೆಯಲಾಗಿದೆ. ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಒಡೆತನದ ಅಕ್ಷರ ಕಾಲೇಜು ತೆರೆಯಲಾಗಿದ್ದು, ಕಾಲೇಜು ಬಸ್​ನಲ್ಲಿ ವಿದ್ಯಾರ್ಥಿಗಳು ತೆರಳುತ್ತಿರುವ ದೃಶ್ಯ ಟಿವಿ9 ಡಿಜಿಟಲ್​ಗೆ ಲಭ್ಯವಾಗಿದೆ.

ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಕಾಲೇಜು ಓಪನ್; ವಿದ್ಯಾರ್ಥಿಗಳು ತೆರಳುತ್ತಿರುವ ದೃಶ್ಯ ಟಿವಿ9ಗೆ ಲಭ್ಯ
ವಿದ್ಯಾರ್ಥಿಗಳು
Follow us on

ಶಿವಮೊಗ್ಗ: ಕೊರೊನಾ ಹಿನ್ನೆಲೆ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ (Weekend Curfew) ಜಾರಿ ಮಾಡಲಾಗಿದೆ. ನಿನ್ನೆ (ಶುಕ್ರವಾರ) ಸಂಜೆ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಹೀಗಾಗಿ ಶಾಲೆ-ಕಾಲೇಜುಗಳು ತೆರೆಯದಂತೆ ಸರ್ಕಾರ ಆದೇಶ ಮಾಡಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಕಾಲೇಜು ತೆರೆಯಲಾಗಿದೆ. ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಒಡೆತನದ ಅಕ್ಷರ ಕಾಲೇಜು ತೆರೆಯಲಾಗಿದ್ದು, ಕಾಲೇಜು ಬಸ್​ನಲ್ಲಿ ವಿದ್ಯಾರ್ಥಿಗಳು ತೆರಳುತ್ತಿರುವ ದೃಶ್ಯ ಟಿವಿ9 ಡಿಜಿಟಲ್​ಗೆ ಲಭ್ಯವಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ್ದಾಗ ವಿದ್ಯಾರ್ಥಿಗಳಿಗೆ ಇಂದು ಲಸಿಕೆ ನೀಡುವ ಉದ್ದೇಶದಿಂದ ಕಾಲೇಜ್​ ತೆರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೊನಾ ಲಸಿಕೆ ಪಡೆದ ವಿದ್ಯಾರ್ಥಿನಿ ಆರೋಗ್ಯದಲ್ಲಿ ಏರುಪೇರು
ಶಿವಮೊಗ್ಗದ ಶಾಸಕರ ಒಡೆತನದ ಅಕ್ಷರ ಕಾಲೇಜಿನಲ್ಲಿ ಲಸಿಕೆ ಪಡೆದ ನಂತರ ವಿದ್ಯಾರ್ಥಿನಿ ಹರ್ಷಿತಾ ತಲೆ ಸುತ್ತಿಬಿದ್ದಿದ್ದಾಳೆ. ವೈದ್ಯ ಡಾ.ರಾಜೇಂದ್ರ, ನರ್ಸ್​ಗಳಿಂದ ಆರೋಗ್ಯ ತಪಾಸಣೆ ನಡೆಸಿದ್ದು, ಬೆಳಿಗ್ಗೆ ವಿದ್ಯಾರ್ಥಿನಿ ಸರಿಯಾಗಿ ತಿಂಡಿ ತಿನ್ನದೇ ಇದ್ದಿದ್ದರಿಂದ ತಲೆ ಸುತ್ತು ಬಂದಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

ಬೆಳಿಗ್ಗೆ ಶಾಲೆಯಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಿದ್ದರು. ಈ ಹಿನ್ನಲೆಯಲ್ಲಿ ವೀಕೆಂಡ್ ಕರ್ಫ್ಯೂ ನಡುವೆ ಶಾಲೆಗೆ  ತಂದೆ ಬಿಟ್ಟು ಹೋದರು. ವ್ಯಾಕ್ಸಿನ್ ಪಡೆದ ಬಳಿಕ ತಲೆ ಸುತ್ತು ಬಂದು ಅಸ್ವಸ್ಥಗೊಂಡೆ. ಕೂಡಲೇ ನರ್ಸ್  ಮತ್ತು ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಿಪಿ ಸೇರಿದಂತೆ ಆರೋಗ್ಯ ತಪಾಸಣೆ ಮಾಡಿದರು. 15 ರಿಂದ 20 ನಿಮಿಷಗಳ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ತುಮಕೂರು: ಅಕ್ಕಿರಾಂಪುರದಲ್ಲಿ ಕುರಿ ಸಂತೆಯಲ್ಲಿ ಜನಸಾಗರ: ಮಾಸ್ಕ್ ಧರಿಸದೆ ನಿರ್ಲಕ್ಷ್ಯ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗ್ರಾಮ ಅಕ್ಕಿರಾಂಪುರದಲ್ಲಿ ಕುರಿ, ಮೇಕೆ ಸಂತೆ ನಡೆದಿದ್ದು, ಜನಸಾಗರವೇ ಇಲ್ಲಿ ಕಂಡುಬಂದಿದೆ. ಪ್ರತಿ ಶನಿವಾರ ನಡೆಯುವ ಈ ಸಂತೆಯಲ್ಲಿ ಕೊವಿಡ್ ನಿಯಮಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೇ ದೈಹಿಕ ಅಂತರವಿಲ್ಲದೇ, ಮಾಸ್ಕ್ ಕೂಡ ಧರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರದ ನಿಯಮಗಳನ್ನು ರೈತರು ಗಾಳಿ ತೂರಿದ್ದಾರೆ. ಸಂತೆ ನಡೆದರೂ ತಾಲ್ಲೂಕು ಆಡಳಿತ, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.

ವೀಕೆಂಡ್ ಕರ್ಪ್ಯೂ ನಡುವೆ ಘಾಟಿ ಸುಬ್ರಮಣ್ಯ ಬ್ರಹ್ಮ ರಥೋತ್ಸವ
ವೀಕೆಂಡ್ ಕರ್ಪ್ಯೂ ನಡುವೆ ಘಾಟಿ ಸುಬ್ರಮಣ್ಯ ಬ್ರಹ್ಮ ರಥೋತ್ಸವ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಸಾಂಕೇತಿಕವಾಗಿ ರಥೋತ್ಸವ ನಡೆದಿದ್ದು, ಇಂದು ಶುದ್ಧ ಪುಷ್ಪ ಷಷ್ಟಿ ಹಿನ್ನೆಲೆ ಬ್ರಹ್ಮ ರಥೋತ್ಸವ ನಡೆಸಲಾಗಿದೆ. ಬ್ರಹ್ಮ ರಥೋತ್ಸವಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿದೆ. ದೇವಸ್ಥಾನದಿಂದ ಮೂರು ಕಿಲೋ ಮೀಟರ್ ದೂರದಲ್ಲೆ ಬ್ಯಾರಿಕೇಡ್​ಗಳನ್ನು ಹಾಕಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಭಕ್ತರು ದೇವಸ್ಥಾನದತ್ತ ಬಾರದಂತೆ ಪೊಲೀಸರು ಎಚ್ಚರ ವಹಿಸಿದ್ದು, ದೇವಸ್ಥಾನದ ಆವರಣದಲ್ಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ 12 ಗಂಟೆಗೆ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯಿಂದ ರಥೋತ್ಸವ ನಡೆಯಲಿದ್ದು, ದೇವಾಲಯದ ಆವರಣದಲ್ಲಿ ಚಿಕ್ಕ ರಥದಲ್ಲಿ ರಥೋತ್ಸವ ನಡೆಯಲಿದೆ.

ಆನೇಕಲ್: ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಮಾಡಿ ಮದ್ಯ ಮಾರಾಟ
ಕರ್ನಾಟಕ, ತಮಿಳುನಾಡು ಗಡಿಯಲ್ಲಿ ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಮಾಡಿ ಮದ್ಯ ಮಾರಾಟ ಮಾಡಿದ್ದಾರೆ. ಗ್ರಾಹಕರನ್ನು ಕರೆದು ಸಿಬ್ಬಂದಿಗಳು ಮದ್ಯ ಮಾರಾಟ ಮಾಡಿದ್ದು, ಪ್ರಶ್ನೆ ಕೇಳಿದರೆ ಇದರಲ್ಲಿ ಪೊಲೀಸರಿಗೂ ಪಾಲಿದೆ ಎಂದು ಸಿಬ್ಬಂದಿ ಉತ್ತರಿಸಿದ್ದಾರೆ.

ಇದನ್ನೂ ಓದಿ:
ವೀಕೆಂಡ್ ಕರ್ಫ್ಯೂಗೆ ಅಪಸ್ವರ ಎತ್ತಿದ ಈಶ್ವರಪ್ಪ, ಮಾರ್ಗಸೂಚಿ ಉಲ್ಲಂಘನೆಗೆ ಜೈ ಜೈ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ!

ವೀಕೆಂಡ್​ ಕರ್ಫ್ಯೂನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡದಿದ್ದರೆ ದಿನಕ್ಕೆ 75 ಕೋಟಿ ನಷ್ಟ; ಸಚಿವ ಗೋಪಾಲಯ್ಯ ಪ್ರಸ್ತಾಪ

Published On - 11:57 am, Sat, 8 January 22