ಶಿವಮೊಗ್ಗ, ಫೆ.22: ಟಿಪ್ಪರ್ ಮತ್ತು ಓಮ್ನಿ ನಡುವೆ ಡಿಕ್ಕಿಯಾಗಿ ಹೊಸನಗರ ತಾಲೂಕಿನ ಬುಲ್ಡೋಜರ್ ಗುಡ್ಡ ಗ್ರಾಮದ 6 ಜನರಿಗೆ ಗಂಭೀರ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ(Hosanagara) ತಾಲೂಕಿನ ಎಂ.ಗುಡ್ಡೆಕೊಪ್ಪ ಬಳಿ ನಡೆದಿದೆ. ಗಾಯಾಳುಗಳಿಗೆ ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾರಿನಲ್ಲಿ 4 ಜನ ಮಹಿಳೆಯರು, 2 ಮಂದಿ ಪುರುಷರು, 4 ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಪ್ರಯಾಣ ಮಾಡುತ್ತಿದ್ದರು ಈ ವೇಳೆ ಅವಘಡ ಸಂಭವಿಸಿದೆ. ಸ್ಥಳಕ್ಕೆ ಹೊಸನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿ: ಕಾರ್ಕಳ ತಾಲೂಕಿನ ಅತ್ತೂರು ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಆಕಾಶ್ ಕಾಂಚನ್(18) ಮೃತ ವ್ಯಕ್ತಿ. ಮತ್ತೋರ್ವ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆಕಾಶ್ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ. ಕಾಲೇಜಿಗೆ ಹೋಗುವಾಗ ಪರ್ಪಲೆ ಗುಡ್ಡದ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅತೀವೇಗವಾಗಿ ಬೈಕ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪ್ರತ್ಯೇಕ ಅಪಘಾತ; ತಂದೆಗೆ ಚಿಕಿತ್ಸೆ ಕೊಡಿಸಬೇಕಿದ್ದವ, ಹೆತ್ತ ಮಗು ನೋಡಲು ಹೋಗ್ತಿದವರು ಸೇರಿ ನಾಲ್ವರು ಸಾವು
ರಾಯಚೂರು: ಮದ್ಯಪಾನ ಮಾಡದಂತೆ ಪೋಷಕರು ಬುದ್ದಿ ಹೇಳಿದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಆದರ್ಶ(24) ಮನನೊಂದು ಆತ್ಮಹತ್ಯೆಗೆ ಶರಣಾದ ಯುವಕ. ನಿತ್ಯ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ ಮೃತ ಆದರ್ಶ, ಇದೇ ವಿಚಾರಕ್ಕೆ ಫೋಷಕರು ಬೈದು ಬುದ್ದಿ ಹೇಳಿದ್ದರು. ಬುದ್ದಿವಾದವನ್ನೇ ಅವಮಾನ ಎಂದು ತಿಳಿದು ಮನೆ ಬಾತ್ ರೂಂನಲ್ಲಿನ ಪೈಪ್ಗೆ ಹಗ್ಗ ಕಟ್ಟಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 pm, Thu, 22 February 24