Shivamogga News: ಸ್ಪಾಗಳಲ್ಲಿ ಹೈಟೆಕ್ ವೇಶ್ಯಾವಟಿಕೆ, 6 ಯುವತಿಯರ ರಕ್ಷಣೆ: ದಂಪತಿ ಅರೆಸ್ಟ್​

ಶಿವಮೊಗ್ಗ ನಗರದಲ್ಲಿ ಸಲೂನ್ ಮತ್ತು ಸ್ಪಾಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಆರು ಯುವತಿಯರನ್ನು ರಕ್ಷಿಸಿರುವಂತಹ ಘಟನೆ ನಡೆದಿದೆ.

Shivamogga News: ಸ್ಪಾಗಳಲ್ಲಿ ಹೈಟೆಕ್ ವೇಶ್ಯಾವಟಿಕೆ, 6 ಯುವತಿಯರ ರಕ್ಷಣೆ: ದಂಪತಿ ಅರೆಸ್ಟ್​
ರಾಯಲ್ ಆರ್ಚ್ ಸ್ಪಾ

Updated on: May 25, 2023 | 9:39 PM

ಶಿವಮೊಗ್ಗ: ನಗರದಲ್ಲಿ ಸಲೂನ್ ಮತ್ತು ಸ್ಪಾಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ (prostitution) ನಡೆಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಆರು ಯುವತಿಯರನ್ನು ರಕ್ಷಿಸಿರುವಂತಹ ಘಟನೆ ನಡೆದಿದೆ. ನಗರದ ಕುವೆಂಪು ರಸ್ತೆಯಲ್ಲಿರುವ ಫ್ಯಾಮಿಲಿ ಸಲೂನ್ ಮತ್ತು ಸ್ಪಾದಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದು ಪೊಲೀಸರು ದಾಳಿ ಮಾಡಿದ್ದಾರೆ. ಗೋಪಾಲ ವೈ (34), ಪತ್ನಿ ವಿದ್ಯಾಶ್ರೀ ಬಂಧಿತರು. ಯುವತಿಯರಿಗೆ ಹಣದ ಆಮಿಷ ತೋರಿಸಿ ವೇಶ್ಯಾ ವೃತ್ತಿಯಲ್ಲಿ ತೊಡಗಿಸಿದ್ದಾರಂತೆ. ರಕ್ಷಣೆ ಮಾಡಿದ ಆರು ಯುವತಿಯರ ವೈದ್ಯಕೀಯ ಪರೀಕ್ಷೆಯನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ನಡೆಸಲಾಗಿದೆ. ಬಳಿಕ ಆರು ಜನರನ್ನು ನಗರದ ಸುರಭಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.

ಗೋಪಾಲ ವೈ, ಪತ್ನಿ ವಿದ್ಯಾಶ್ರೀ ಇಬ್ಬರು ಸುಮಾರು ಎರಡು ವರ್ಷದಿಂದ ಕುವೆಂಪು ರಸ್ತೆಯಲ್ಲಿರುವ ರಾಯಲ್ ಆರ್ಚ್ ಎಂಬ ಸ್ಪಾ‌ ಮತ್ತು ಮಸಾಜ್ ಪಾರ್ಲರ್ ನಡೆಸುತ್ತಿದ್ದರು. ಮಹಿಳಾ ಠಾಣೆಯ ಪೊಲೀಸರು ವೇಶ್ಯಾವಾಟಿಕೆ ಆರೋಪದ ಮೇಲೆ ದಾಳಿ ನಡೆಸಲಾಗಿದ್ದು 6 ಅಬಲೆಯರನ್ನ ರಕ್ಷಿಸಲಾಗಿದೆ. 6 ಜನ ಮಹಿಳೆಯರನ್ನ ಪೂಸಲಾಯಿಸಿ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಲಾಗಿದೆ ಎಂಬ ಆರೋಪದಡಿ ಮಾಲೀಕ ಗೋಪಾಲ್ ವೈ ದಂಪತಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮೂವರ ಬಲಿ ಪಡೆದ ಭದ್ರಾ ಚಾನಲ್! ಒಂದೇ ಕುಟುಂಬದ ಮೂವರು ಸಾವು, ಯುವತಿಯ ಶವ ಪತ್ತೆ, ಮತ್ತಿಬ್ಬರಿಗಾಗಿ ಮುಂದುವರೆದ ಶೋಧ ಕಾರ್ಯ

ಈ ಪ್ರಕರಣದಲ್ಲಿ ಸ್ಪಾದಲ್ಲಿ ಮಸಾಜ್​ಗೆ ಹೋಗಿದ್ದ ಹೊಳಲ್ಕೆರೆಯ ಜಗದೀಶ್ ಮತ್ತು ತಿಮ್ಮೇಶ್ ಎಂಬುವರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಅನೇಕ ಸ್ಪಾಗಳು ಓಪನ್ ಆಗಿವೆ. ಈ ಸ್ಪಾಗಳಲ್ಲಿ ಮಸಾಜ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಟಿಕೆ ದಂಧೆಗಳು ನಡೆಯುತ್ತವೆ. ದೊಡ್ಡ ದೊಡ್ಡ ಸ್ಪಾಗಳಳಲ್ಲಿ ನಡೆಯುತ್ತಿರುವ ಇಂತಹ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕೂಡ ಇಂತಹ ಸ್ಪಾಗಳಲ್ಲಿ ನಡೆಯುತ್ತಿರುವ ಯುವತಿಯರ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಗಮನ ಹರಿಸಬೇಕಿದೆ. ಮಲೆನಾಡಿನಲ್ಲಿ ಸ್ಪಾಗಳಲ್ಲಿ ಮಸಾಜ್ ಹೆಸರಿನಲ್ಲಿ ಯುವತಿಯರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಸಾಜ್ ನೆಪದಲ್ಲಿ ಯುವತಿಯನ್ನು ಹೈಟೆಕ್ ವೇಶ್ಯಾವಟಿಕೆ ದಂಧೆಯಲ್ಲಿ ತೊಡಗಿಸಲಾಗುತ್ತಿದೆ.

ಇದನ್ನೂ ಓದಿ: ಕ್ರಿಕೆಟ್ ವಿಚಾರಕ್ಕೆ ಗಲಾಟೆ! ಆಟಕ್ಕೆ ಸೇರಿಸಿಕೊಳ್ಳದೆ ಬ್ಯಾಟ್​​ನಿಂದ ಲಾರಿ ಚಾಲಕನ ಮೇಲೆ ಹಲ್ಲೆ, ಆರೋಪಿಗಳ ಮೇಲೆ ಯಾವುದೇ ಕ್ರಮವಿಲ್ಲ

ಈ ಮೂಲಕ ಸ್ಪಾಗಳ ಮಾಲೀಕರು ಲಕ್ಷ ಲಕ್ಷ ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ. ಇಂತವರ ವಿರುದ್ದ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗುವ ಮೂಲಕ ಈ ಸ್ಪಾಗಳ ದಂಧೆಗೆ ಕಡಿವಾಣ ಹಾಕಬೇಕಿದೆ. ಶಿವಮೊಗ್ಗದಲ್ಲಿ ಸದ್ಯ ಒಂದು ಸ್ಪಾದ ಮೇಲೆ ಪೊಲೀಸರ ದಾಳಿಯಲ್ಲಿ ಆರು ಯುವತಿಯರ ರಕ್ಷಣೆಯಾಗಿದೆ. ಸ್ಪಾಗಳ ಹೆಸರಿನಲ್ಲಿ ನಗರದಲ್ಲಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಟಿಕೆ ನಡೆಯುತ್ತಿದೆ. ಈ ಸ್ಪಾಗಳ ವಿರುದ್ದ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾದ್ರೆ ಮಾತ್ರ ಈ ಮಸಾಜ್ ಹೆಸರಿನಲ್ಲಿ ನಡೆಯುವ ಅಕ್ರಮ ದಂಧೆ ನಿಲ್ಲಿಸಲು ಸಾಧ್ಯ.

ವರದಿ: ಬಸವರಾಜ್ ಯರಗಣವಿ, ಟವಿ9 ಶಿವಮೊಗ್ಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:38 pm, Thu, 25 May 23