ಶಿವಮೊಗ್ಗ: ಪರೀಕ್ಷೆಗಳು ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಸರ್ವೇ ಸಾಮಾನ್ಯ. ಆದರೆ ಪರೀಕ್ಷೆ ಬರೆದು ಫಲಿತಾಂಶದ ಭಯದಲ್ಲಿದ್ದ ವಿದ್ಯಾರ್ಥಿಯೊಬ್ಬ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೊನ್ನೆಯಷ್ಟೇ ಸಿಇಟಿ ಪರೀಕ್ಷೆಯನ್ನು ಬರೆದಿದ್ದ ವಿದ್ಯಾರ್ಥಿಗೆ ಫಲಿತಾಂಶದ ಭಯ ಕಾಡುತ್ತಿತ್ತು. ಕಳೆದ ಸಿಇಟಿ ಪರೀಕ್ಷೆಯಲ್ಲಿ ಈತ ವಿಫಲನಾಗಿದ್ದನು. ಈ ಸಿಇಟಿ ಪರೀಕ್ಷೆಯಲ್ಲೂ ಕಳೆದ ವರ್ಷದ ಫಲಿತಾಂಶದಂತೆ ಬರಬಹುದು ಎನ್ನುವ ಭಯ, ಆತಂಕ ಆತನನ್ನು ಕಾಡುತ್ತಿತ್ತು. ಇದರಿಂದ ಆತ ಪೋಷಕರನ್ನು ಕಣ್ಣು ತಪ್ಪಿಸಿ ಮನೆಯ ಹಿಂಭಾಗದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆತನ ಪೋಷಕರು ತಿಳಿಸಿದ್ದಾರೆ.
ಪೋಷಕರು ಎಲ್ಲಿಯೂ ಮಗನ ಮೇಲೆ ಯಾವುದೆ ಒತ್ತಡ ಹಾಕಿರಲಿಲ್ಲ. ತಂದೆ ಕೃಷ್ಣರಾವ್ ಈ ಘಟನೆ ಕುರಿತು ಬೇಸರ ಹೊರಹಾಕಿದ್ದಾರೆ. ಇನ್ನೂ ಸಿಇಟಿಯ ಫಲಿತಾಂಶ ಬಂದಿರಲಿಲ್ಲ. ಈ ನಡುವೆ ಮಗನನು ಆತಂಕಕ್ಕೊಳಗಾಗಿ ಈ ರೀತಿ ಮಾಡಿಕೊಂಡಿದ್ದಾನೆ. ಇನ್ನೂ ವಿದ್ಯಾರ್ಥಿಗೆ ಕುಟುಂಬದಲ್ಲಿ ಯಾವುದೇ ಬೇರೆ ಸಮಸ್ಯೆಗಳು ಇರಲಿಲ್ಲ. ಇನ್ನೂ ಆತ ಮಾನಸಿಕವಾಗಿ ಗಟ್ಟಿಯಾಗಿದ್ದನು. ಯಾವುದೇ ಸಮಸ್ಯೆಗಳಿದ್ದರು ಕುಟುಂದ ಜೊತೆ ಹಂಚಿಕೊಳ್ಳುತ್ತಿದ್ದನು. ಸ್ನೇಹಿತರ ವಿಚಾರ ಸೇರಿ ಬೇರೆ ಯಾವುದೇ ಸಮಸ್ಯೆಗಳು ಇರಲಿಲ್ಲ ಎಂಬುದು ತಿಳಿದುಬಂದಿದೆ.
ಘಟನೆ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ಪಿಎಸ್ಐ ಪ್ರಶಾಂತ್ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪೊಲೀಸರು ಕೂಡಾ ಸಾವಿನ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಪರೀಕ್ಷೆಯ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಬೇರೆ ಕಾರಣದಿಂದ ಎನ್ನುವ ಕುರಿತು ಸೊರಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ
Yadagiri Gang Rape: ಯಾದಗಿರಿಯಲ್ಲಿ ದೇವಸ್ಥಾನದಿಂದ ಬರುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ನಟ ಪ್ರಕಾಶ್ ರೈಗೆ ಗಾಯ; ಹೈದರಾಬಾದ್ನಲ್ಲಿ ಶಸ್ತ್ರ ಚಿಕಿತ್ಸೆ: ಇಲ್ಲಿದೆ ಹೆಲ್ತ್ ಅಪ್ಡೇಟ್