ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಭದ್ರತೆಗೆ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಈಶ್ವರಪ್ಪ ಬೆಂಗಾವಲು ವಾಹನದ ಜತೆ ಮತ್ತೊಂದು ವಾಹನ ನಿಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಈಶ್ವರಪ್ಪಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. 7-8 ಸಿಬ್ಬಂದಿ ಹೊಂದಿರುವ ಮತ್ತೊಂದು ವಾಹನದ ವ್ಯವಸ್ಥೆ ಮಾಡಿಕೊಡಲಾಗಿದೆ. ಕೆಲವು ದಿನಗಳಿಂದ ಈಶ್ವರಪ್ಪ ಹೇಳಿಕೆ ಸಾಕಷ್ಟು ಚರ್ಚೆಯಲ್ಲಿದೆ. ಈಶ್ವರಪ್ಪ ಕೆಲವು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರಿಗೆ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ.
ಅಂತಹ ಕಾಂಗ್ರೆಸ್ ನಾಯಕರಿಗೆ ನನ್ನ ಸಾಷ್ಟಾಂಗ ನಮಸ್ಕಾರ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ನಾಯಕರು ಈಗ ಇಲ್ಲ. ಅಂತಹ ಕಾಂಗ್ರೆಸ್ ನಾಯಕರಿಗೆ ನನ್ನ ಸಾಷ್ಟಾಂಗ ನಮಸ್ಕಾರವಿದೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು (ಆಗಸ್ಟ್ 13) ಹೇಳಿಕೆ ನೀಡಿದ್ದಾರೆ. ನನ್ನ ಪದ ಬಳಕೆ ಬಗ್ಗೆ ಕ್ಷಮೆ ಕೇಳುವೆ. ಆದರೆ, ಬಿ.ಕೆ. ಹರಿಪ್ರಸಾದ್ಗೆ ಕಾಂಗ್ರೆಸ್ ನಾಯಕರು ಬುದ್ಧಿ ಹೇಳಬೇಕು. ಇದರ ಬಗ್ಗೆ ಕಾಂಗ್ರೆಸ್ ನಾಯಕರ ಉತ್ತರ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಏನು ಕ್ರಮ ಕೈಗೊಳ್ತಾರೆ. ಬಿ.ಕೆ. ಹರಿಪ್ರಸಾದ್ ಪದ ಬಳಕೆ ಬಗ್ಗೆ ಏನು ಕ್ರಮಕೈಗೊಳ್ತಾರೆ? ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಈಶ್ವರಪ್ಪ ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ
ಇತ್ತ ಕಾಂಗ್ರೆಸ್ ಬಗ್ಗೆ ಸಚಿವ ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿಚಾರವಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಮಾತನಾಡಿದ್ದಾರೆ. ಈಶ್ವರಪ್ಪ ಬಿಜೆಪಿ ಮೇಲಿರುವ ಕೋಪವನ್ನು ಕಾಂಗ್ರೆಸ್ ಮೇಲೆ ತೋರಿಸುತ್ತಿದ್ದಾರೆ. ಇವರಿಗೇನಾದ್ರೂ ಸಂಸ್ಕೃತಿ, ಕಾಮನ್ಸೆಸ್ಸ್ ಇದೆಯಾ? ಈಶ್ವರಪ್ಪನವರಿಗೆ ಮಾನ ಮರ್ಯಾದೆ ಇದೆಯಾ ಎಂಬುದನ್ನು ಮೊದಲು ತಿಳಿಸಿ. ನಿಮ್ಮ ಮಗ ಕಾಂತೇಶ್ ಬೆಂಗಳೂರಿನ ಪೀಣ್ಯದಲ್ಲಿ ಸೈಟ್ ಖರೀದಿಸಿದ್ದಾರೆ. 4 ಇಂಡಸ್ಟ್ರಿಯಲ್ ಸೈಟು ಖರೀದಿಸಿದ್ದೀರಿ, ಅದರಲ್ಲಿ ಏನು ಮಾಡ್ತಿದ್ದೀರಿ? ಒಬ್ಬರಿಗೆ ನಾಲ್ಕು ಸೈಟ್ ಹೇಗೆ ನೀಡ್ತಾರೆ? ಇದರ ಒಟ್ಟು ಬೆಲೆ ಎಷ್ಟು? ಇಡಿ, ಐಟಿ ಯಾಕೆ ಇವರ ಬಗ್ಗೆ ಏಕೆ ತನಿಖೆ ಮಾಡುತ್ತಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರಾ ರೈಡ್ ಮಾಡೋದಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ನನ್ನ ಬಳಿ ಸಂಪೂರ್ಣ ದಾಖಲಾತಿ ಇದೆ. ಈಶ್ವರಪ್ಪ ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಿಮ್ಮ ಮಗ ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಇಡಿ ಹಾಗೂ ಐಟಿಗೆ ದೂರು ನೀಡುತ್ತಿದ್ದೇವೆ. ಯಾವ ರೀತಿ ತನಿಖೆ ಮಾಡುತ್ತಾರೋ ನೋಡುತ್ತೇವೆ. ಈಶ್ವರಪ್ಪ ಮೊದಲು ಹುಚ್ಚರ ರೀತಿ ಮಾತನಾಡುವುದನ್ನು ಬಿಡಲಿ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಇದನ್ನೂ ಓದಿ: ಕೆಎಸ್ ಈಶ್ವರಪ್ಪ ಅವಾಚ್ಯ ಪದ ಬಳಕೆ; ಸಿಡಿ, ದಿನಪತ್ರಿಕೆ ಸಹಿತ ಶಿವಮೊಗ್ಗ ಎಸ್ಪಿಗೆ ದೂರು
ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್ನಿಂದ ಬಂದವರು ಕಾರಣ; ಅವರ ಋಣ ತೀರಿಸಬೇಕು: ಕೆಎಸ್ ಈಶ್ವರಪ್ಪ
(Additional Security provided to KS Eshwarappa by Shivamogga amid his controversial Statements)
Published On - 3:55 pm, Fri, 13 August 21