ಕೆಎಸ್ ಈಶ್ವರಪ್ಪ ಅವಾಚ್ಯ ಪದ ಬಳಕೆ; ಸಿಡಿ, ದಿನಪತ್ರಿಕೆ ಸಹಿತ ಶಿವಮೊಗ್ಗ ಎಸ್​ಪಿಗೆ ದೂರು

KS Eshwarappa: ಈಶ್ವರಪ್ಪ ನವರು ಇಂತಹ ಮಾತು ಬಳಸಬಾರದು. ಅಧಿಕಾರದಲ್ಲಿ ಇರುವಾಗ ಮಾದರಿ ಆಗಬೇಕು. ಈಶ್ವರಪ್ಪ ತಮ್ಮ ನಡತೆ ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸುತ್ತಾರೆ ಎಂದು ಕಾಗೋಡು ತಿಮ್ಮಪ್ಪ ಈಶ್ವರಪ್ಪಗೆ ಎಚ್ಚರಿಕೆ ನೀಡಿದ್ದಾರೆ.

ಕೆಎಸ್ ಈಶ್ವರಪ್ಪ ಅವಾಚ್ಯ ಪದ ಬಳಕೆ; ಸಿಡಿ, ದಿನಪತ್ರಿಕೆ ಸಹಿತ ಶಿವಮೊಗ್ಗ ಎಸ್​ಪಿಗೆ ದೂರು
ಸಚಿವ ಈಶ್ವರಪ್ಪ
Follow us
TV9 Web
| Updated By: ganapathi bhat

Updated on: Aug 11, 2021 | 3:21 PM

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಲ ಪ್ರಸನ್ನ ಕುಮಾರ್, ಶಿವಮೊಗ್ಗ ಎಸ್‌ಪಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ಹಿನ್ನೆಲೆಯಲ್ಲಿ, ಸಿಡಿ, ದೂರಿನ ಪ್ರತಿ, ದಿನಪತ್ರಿಕೆ ಸಹಿತ ಎಸ್‌ಪಿಗೆ ಕಾಂಗ್ರೆಸ್ ಶಾಸಕ ಪ್ರಸನ್ನ ಕುಮಾರ್ ದೂರು ನೀಡಿದ್ದಾರೆ. ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಅವರು ದೂರು ನೀಡಿದ್ದಾರೆ.

ಸಚಿವ ಕೆ.ಎಸ್. ಈಶ್ವರಪ್ಪ ಪ್ರಚೋದನಾಕಾರಿ, ಅಶ್ಲೀಲ ಪದ ಬಳಕೆ ಹಿನ್ನೆಲೆಯಲ್ಲಿ, ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಚೇರಿ ಬಳಿ ಕಾಂಗ್ರೆಸ್ ಧರಣಿ ನಡೆಸಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ.

ಈಶ್ವರಪ್ಪ ನವರು ಇಂತಹ ಮಾತು ಬಳಸಬಾರದು. ಅಧಿಕಾರದಲ್ಲಿ ಇರುವಾಗ ಮಾದರಿ ಆಗಬೇಕು. ಈಶ್ವರಪ್ಪ ತಮ್ಮ ನಡತೆ ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸುತ್ತಾರೆ ಎಂದು ಕಾಗೋಡು ತಿಮ್ಮಪ್ಪ ಈಶ್ವರಪ್ಪಗೆ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ಮಾಡಲಿ ಬಿಡ್ರೀ ಬೇಡ ಅಂದವರು ಯಾರು ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ವಿಚಾರವಾಗಿ ಇಂದು (ಆಗಸ್ಟ್ 11) ಕೆಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾಗ್ಪುರದಲ್ಲಿ ಟ್ರೈನಿಂಗ್ ಪಡೆದಿದ್ದಕ್ಕೆ ಆ ಪದ ನನ್ನ ಬಾಯಲ್ಲಿ ಬರಬಾರದಿತ್ತು ಅಂತಾ ಹೇಳಿದ್ದೇನೆ. ಆದ್ರೆ ಹರಿಪ್ರಸಾದ್ ನನಗೆ ಜೋಕರ್ ಅಂದ್ರು, ಪ್ರಧಾನಿ ಮೋದಿಗೆ ಸುಲಭ ಶೌಚಾಲಯಕ್ಕಿಡಬೇಕು ಅಂದ್ರು, ಇದನ್ನು ಕಾಂಗ್ರೆಸ್​ನವರು ಒಪ್ಪುವುದಾದರೆ ಸರಿ. ಇಲ್ಲ ಅಂದ್ರೆ ಇಟಲಿ ಯೂನಿವರ್ಸಿಟಿಯಲ್ಲಿ ಅವರಿಗೆ ಕೊಟ್ಟ ಟ್ರೈನಿಂಗ್​ನಿಂದ ಕ್ಷಮೆ ಕೇಳಲ್ಲಾ ಅಂದುಕೊಳ್ತೀನಿ ಎಂದು ಈಶ್ವರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ನವರು ಪ್ರತಿಭಟನೆ ಮಾಡಲಿ ಬಿಡ್ರೀ ಬೇಡ ಅಂದವರು ಯಾರು. ಕೆಟ್ಟ ಕನಸು ಬೀಳ್ತಿರುವುದು ಸಿದ್ದರಾಮಯ್ಯಗೆ, ನನಗೆ ಕನಸು ಬೀಳ್ತಿಲ್ಲ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್​ನಿಂದ ಬಂದವರು ಕಾರಣ; ಅವರ ಋಣ ತೀರಿಸಬೇಕು: ಕೆಎಸ್ ಈಶ್ವರಪ್ಪ

ಸಚಿವ ಈಶ್ವರಪ್ಪ ಹರಕುಬಾಯಿ ದಾಸ, ನಾಗಪುರ ವಿವಿ ದ್ವೇಷ, ಅಸೂಯೆ ತುಂಬಿ ರಸ್ತೆಗೆ ಬಿಡುತ್ತಾರೆ: ಬಿ.ಕೆ.ಹರಿಪ್ರಸಾದ್

(Case Filed against KS Eshwarappa on Bad Word used on Congress Party Members)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ