ಸಿಎಂ ಭೇಟಿ ಆಗಲಿರುವ ಸಚಿವ ಆನಂದ್ ಸಿಂಗ್; ಅಸಮಾಧಾನ ಬಗೆಹರಿಸುವ ವಿಶ್ವಾಸದಲ್ಲಿ ಬಸವರಾಜ ಬೊಮ್ಮಾಯಿ

Basavaraj Bommai on Anand Singh: ಪಕ್ಷದ ಹಿರಿಯರು, ವರಿಷ್ಠರು ಆನಂದ್ ಜತೆ ಮಾ‍ತನಾಡ್ತಾರೆ. ಇಂದು ಸಂಜೆಯೇ ನನ್ನನ್ನು ಭೇಟಿಯಾಗುವುದಾಗಿ ಆನಂದ್ ಸಿಂಗ್ ಹೇಳಿದ್ದಾರೆ. ಅವರ ಜೊತೆ ಮಾತನಾಡುವೆ, ಎಲ್ಲವೂ ಸರಿಹೋಗಲಿದೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಭೇಟಿ ಆಗಲಿರುವ ಸಚಿವ ಆನಂದ್ ಸಿಂಗ್; ಅಸಮಾಧಾನ ಬಗೆಹರಿಸುವ ವಿಶ್ವಾಸದಲ್ಲಿ ಬಸವರಾಜ ಬೊಮ್ಮಾಯಿ
ಆನಂದ್ ಸಿಂಗ್
Follow us
| Updated By: ganapathi bhat

Updated on:Aug 11, 2021 | 5:21 PM

ಬೆಂಗಳೂರು: ಸಂಜೆಯೇ ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಆಗಲಿರುವ ಬಗ್ಗೆ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 11) ಹೇಳಿಕೆ ನೀಡಿದ್ದಾರೆ. ಆನಂದ್ ಸಿಂಗ್ ಬಂಡಾಯ, ಅಸಾಮಾಧಾನ ಅಥವಾ ಭಿನ್ನಾಭಿಪ್ರಾಯ ಬಗೆಹರಿಸುವ ವಿಶ್ವಾಸದಲ್ಲಿ ಸಿಎಂ ಬೊಮ್ಮಾಯಿ ಇದ್ದಾರೆ. ಆನಂದ್ ಸಿಂಗ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಸಚಿವ ಆನಂದ್ ಸಿಂಗ್ ಭಾವನಾತ್ಮಕವಾಗಿ ಮಾತನಾಡ್ತಿದ್ದಾರೆ. ನಾನು ಅವರ ಜೊತೆ ಮಾತನಾಡುತ್ತೇನೆ. ಸಚಿವ ಆನಂದ್‌ ಸಿಂಗ್‌ಗೆ ಬರಲು ಹೇಳಿದ್ದೇನೆ, ಮಾತಾಡುವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪಕ್ಷದ ಹಿರಿಯರು, ವರಿಷ್ಠರು ಆನಂದ್ ಜತೆ ಮಾ‍ತನಾಡ್ತಾರೆ. ಇಂದು ಸಂಜೆಯೇ ನನ್ನನ್ನು ಭೇಟಿಯಾಗುವುದಾಗಿ ಆನಂದ್ ಸಿಂಗ್ ಹೇಳಿದ್ದಾರೆ. ಅವರ ಜೊತೆ ಮಾತನಾಡುವೆ, ಎಲ್ಲವೂ ಸರಿಹೋಗಲಿದೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಆನಂದ್ ಸಿಂಗ್ ನಾಳೆ ಬರುವುದು ಇತ್ತು. ನಾಳೆ ನಾನಿರಲ್ಲ ಅಂದಿದ್ದೆ. ಹೀಗಾಗಿ ಇವತ್ತು ಸಂಜೆಯೇ ಭೇಟಿಯಾಗ್ತಿನಿ ಅಂದಿದ್ದಾರೆ. ಅವರ ಜೊತೆ ಮಾತನಾಡುತ್ತೇನೆ ಎಲ್ಲವೂ ಸರಿಹೋಗಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆನಂದ್ ಸಿಂಗ್ ಶಾಂತವಾಗಿ ಕೂತು ವಿಚಾರ ಮಾಡಲಿ. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲವೂ ಒಳ್ಳೆಯದಾಗುತ್ತೆ ಎಂಬ ಭಾವನೆ ಇದೆ ಎಂದು ತಿಳಿಸಿದ್ದಾರೆ.

ಸದ್ಯ ಸಚಿವ ಆನಂದ್ ಸಿಂಗ್ ಶಾಂತವಾಗಿದ್ದಾರೆ: ಆರ್. ಅಶೋಕ್ ಸಚಿವ ಆನಂದ್ ಸಿಂಗ್ ಜತೆ ಸಿಎಂ, ರಾಜುಗೌಡ ಚರ್ಚಿಸಿದ್ದಾರೆ. ಸದ್ಯ ಸಚಿವ ಆನಂದ್ ಸಿಂಗ್ ಶಾಂತವಾಗಿದ್ದಾರೆ. ಆನಂದ್ ಸಿಂಗ್ ಸಮಸ್ಯೆಯನ್ನು ಸಿಎಂ ಬಗೆಹರಿಸುತ್ತಾರೆ. ಅವರಿಂದ ಈ ಹಿಂದೆಯೂ ಬೇಸರದ ಹೇಳಿಕೆ ಕೇಳಿಬಂದಿದೆ. ನಾವೆಲ್ಲರೂ ಸಚಿವ ಆನಂದ್ ಸಿಂಗ್ ಜೊತೆ ಇದ್ದೇವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

2 ದಿನದ ಹಿಂದೆ ಪೂರ್ಣಿಮಾ ಶ್ರೀನಿವಾಸ್ ಜತೆ ಚರ್ಚಿಸಿದ್ದೇನೆ. ಪೂರ್ಣಿಮಾ ಶ್ರೀನಿವಾಸ್ ಕೂಡ ಬೇಸರ ಇಲ್ಲ ಅಂತ ಹೇಳಿದ್ದಾರೆ. ಹಾಸನ ಶಾಸಕ ಪ್ರೀತಂ ಗೌಡರದ್ದೂ ಯಾವುದೇ ಸಮಸ್ಯೆ ಇಲ್ಲ. ಸಚಿವ ಎಂಟಿಬಿ ನಾಗರಾಜ್ ಕೂಡ ಸಮಾಧಾನಗೊಂಡಿದ್ದಾರೆ. ಎಂಟಿಬಿ ಸೋತರೂ ಎಂಎಲ್‌ಸಿ ಮಾಡಿ ಮಂತ್ರಿ ಮಾಡಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗಲ್ಲ. ಏನೇ ಸಮಸ್ಯೆ ಆದರೂ ಅದನ್ನು ಸರಿಯಾಗಿ ನಿಭಾಯಿಸ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ಸರ್ಕಾರ ಹೆಚ್ಚು ದಿನ ಇರಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಆರ್. ಅಶೋಕ್ ಟಾಂಗ್ ಕೊಟ್ಟಿದ್ದಾರೆ. ನಾವು ಕೂಡ ಈ ಹಿಂದೆ ಗಿಣಿಶಾಸ್ತ್ರವನ್ನು ಹೇಳಿದ್ದೆವು. ಸಿದ್ದರಾಮಯ್ಯ ಸರ್ಕಾರ ಇರಲ್ಲವೆಂದು ಗಿಣಿಶಾಸ್ತ್ರ ಹೇಳಿದ್ದೆವು. ಈಗ ಅವರು ವಿರೋಧ ಪಕ್ಷದಲ್ಲಿದ್ದಾರೆ ಅದಕ್ಕೆ ಹೇಳುತ್ತಾರೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಬ್ಲಾಕ್‌ಮೇಲ್‌ ತಂತ್ರ ಮಾಡುವುದಿಲ್ಲ, ನೇರವಾಗಿ ಕೇಳುತ್ತೇನೆ: ಸಚಿವ ಆನಂದ್ ಸಿಂಗ್

ಸ್ಪೀಕರ್ ಭೇಟಿಗೆ ಸಮಯ ಕೇಳಿದ ಆನಂದ್ ಸಿಂಗ್, ಶ್ರಾವಣ ಶುಕ್ರವಾರ ರಾಜೀನಾಮೆ ಫಿಕ್ಸ್​? ಅದಕ್ಕೂ ಮುನ್ನ ಸಿಎಂ, ಮಾಜಿ ಸಿಎಂ ಭೇಟಿ

(Minister Anand Singh to meet CM Basavaraj Bommai at Bengaluru Karnataka Politics)

Published On - 5:16 pm, Wed, 11 August 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!