AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೀಕರ್ ಭೇಟಿಗೆ ಸಮಯ ಕೇಳಿದ ಆನಂದ್ ಸಿಂಗ್, ಶ್ರಾವಣ ಶುಕ್ರವಾರ ರಾಜೀನಾಮೆ ಫಿಕ್ಸ್​? ಅದಕ್ಕೂ ಮುನ್ನ ಸಿಎಂ, ಮಾಜಿ ಸಿಎಂ ಭೇಟಿ

Anand singh: ದಿಢೀರ್​ ಬೆಳವಣಿಗೆಯಲ್ಲಿ ಸಚಿವ ಆನಂದ್ ಸಿಂಗ್ ಇಂದು ಬೆಳಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರವಾಣಿ ಕರೆ ಮಾಡಿ, ಚರ್ಚೆ ನಡೆಸಿದ್ದಾರೆ. ಸದ್ಯ ಶಿರಸಿಯಲ್ಲಿರುವುದಾಗಿ ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ. ಶುಕ್ರವಾರ ಬೆಂಗಳೂರಿಗೆ ಬರುವುದಾಗಿ ಸ್ಪೀಕರ್​​ ಕಾಗೇರಿ, ಆನಂದ್​ ಸಿಂಗ್​​ಗೆ ತಿಳಿಸಿದ್ದಾರೆ.

ಸ್ಪೀಕರ್ ಭೇಟಿಗೆ ಸಮಯ ಕೇಳಿದ ಆನಂದ್ ಸಿಂಗ್, ಶ್ರಾವಣ ಶುಕ್ರವಾರ ರಾಜೀನಾಮೆ ಫಿಕ್ಸ್​? ಅದಕ್ಕೂ ಮುನ್ನ ಸಿಎಂ, ಮಾಜಿ ಸಿಎಂ ಭೇಟಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
TV9 Web
| Updated By: ಸಾಧು ಶ್ರೀನಾಥ್​|

Updated on:Aug 11, 2021 | 12:23 PM

Share

ಬೆಂಗಳೂರು: ತಾವು ಈ ಹಿಂದೆ  ನಿಭಾಯಿಸಿದ್ದ ಅರಣ್ಯ ಖಾತೆಯಂತಹ ಪ್ರಭಾವಿ ಖಾತೆಗೆ ಪಟ್ಟು ಹಿಡಿದು ಕುಳಿತಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ರಾಜೀನಾಮೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಂತಿದೆ. ಇದೇ ಶ್ರಾವಣ ಶುಕ್ರವಾರ ಸಚಿವ ಆನಂದ್ ಸಿಂಗ್ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರುಗಳನ್ನು ಇಂದು ಭೇಟಿಯಾಗುವ ಪ್ರೋಗ್ರಾಂ ಹಾಕಿಕೊಂಡಿದ್ದಾರೆ. ಅವರು ಸಚಿವ ಸ್ಥಾನಕ್ಕಷ್ಟೇ ರಾಜೀನಾಮೆ ನೀಡುತ್ತಾರಾ ಅಥವಾ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಾರಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಈ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿರುವ ಸಚಿವ ಆನಂದ್ ಸಿಂಗ್ ಕೆಲವೇ ಕ್ಷಣಗಳಲ್ಲಿ ಮಹತ್ವದ ಸುದ್ದಿಗೋಷ್ಠಿಯೊಂದನ್ನು ನಡೆಸಲಿದ್ದಾರೆ.

ಸ್ಪೀಕರ್ ಕಾಗೇರಿ ಸಂಪರ್ಕ ಮಾಡಿದ ಆನಂದ್ ಸಿಂಗ್: ದಿಢೀರ್​ ಬೆಳವಣಿಗೆಯಲ್ಲಿ ಸಚಿವ ಆನಂದ್ ಸಿಂಗ್ ಇಂದು ಬೆಳಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರವಾಣಿ ಕರೆ ಮಾಡಿ, ಚರ್ಚೆ ನಡೆಸಿದ್ದಾರೆ. ಸದ್ಯ ಶಿರಸಿಯಲ್ಲಿರುವುದಾಗಿ ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ. ಶುಕ್ರವಾರ ಬೆಂಗಳೂರಿಗೆ ಬರುವುದಾಗಿ ಸ್ಪೀಕರ್​​ ಕಾಗೇರಿ, ಆನಂದ್​ ಸಿಂಗ್​​ಗೆ ತಿಳಿಸಿದ್ದಾರೆ.

ಈ ಮಧ್ಯೆ, ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿರುವ ಸಚಿವ ಆನಂದ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರುಗಳನ್ನು ಇಂದು ಭೇಟಿಯಾಗುವ ಪ್ರೋಗ್ರಾಂ ಹಾಕಿಕೊಂಡಿದ್ದಾರೆ. ಮೊದಲು ಸಿಎಂ ಬೊಮ್ಮಾಯಿಯ ಭೇಟಿ ಮಾಡಿ, ಬಳಿಕ ಬಿಎಸ್​​ವೈ ಭೇಟಿ ಮಾಡಲಿರುವುದಾಗಿ ಸಚಿವ ಆನಂದ್ ಸಿಂಗ್​ ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಆನಂದ್ ಸಿಂಗ್‌ ಅರಣ್ಯ ಖಾತೆಯಲ್ಲಿ ಏನು ಕನಸು ಕಂಡಿದ್ರೋ ಗೊತ್ತಿಲ್ಲ; ಯಾವ ಖಾತೆಯಾದ್ರೂ ಅದು ಸರ್ಕಾರದ ಕೆಲಸ: ಬಿ.ಸಿ.ಪಾಟೀಲ್

Anand Singh: ಬೊಮ್ಮಾಯಿ ಸಂಪುಟದ ಮೊದಲ ವಿಕೆಟ್ ಪತನಕ್ಕೆ ಕೌಂಟ್ಡೌನ್? ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್?

(minister Anand singh may resign on friday to meet speaker kageri on august 13)

Published On - 12:13 pm, Wed, 11 August 21