ಬ್ಲಾಕ್‌ಮೇಲ್ ತಂತ್ರ ಮಾಡುವುದಿಲ್ಲ, ನೇರವಾಗಿ ಕೇಳುತ್ತೇನೆ: ಸಚಿವ ಆನಂದ್ ಸಿಂಗ್
ನನ್ನ ರಾಜಕೀಯ ಜೀವನ ದೊಡ್ಡದಲ್ಲ, ಸಣ್ಣ ಪ್ರಯಾಣವಷ್ಟೆ. ರಾಜಕೀಯ ಜೀವನ ಕೇವಲ 15 ವರ್ಷ. ಸಮಾಜ ಸೇವೆ ಕೇವಲ 5 ವರ್ಷದ್ದು. ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನಾಲ್ಕು ಬಾರಿ ಆಯ್ಕೆಯಾಗಿರುವ ಒಬ್ಬ ಶಾಸಕ ನಾನು.
ಬಳ್ಳಾರಿ: ಅರಣ್ಯ ಖಾತೆ ನೀಡುವಂತೆ ಪಟ್ಟು ಹಿಡಿದಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಈ ರಾಜ್ಯದ ಅತಿ ದೊಡ್ಡ ರಾಜಕಾರಣಿ ನಾನಲ್ಲ. ಮಾಧ್ಯಮಗಳ ನಿರೀಕ್ಷೆಯಂತೆ ಹೇಳಿಕೆ ನೀಡಲ್ಲ ಎಂದು 7ನೇ ತಾರೀಖಿನಂದೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ್ದೇನೆ. ನಾನು ಬ್ಲಾಕ್‌ಮೇಲ್ ತಂತ್ರ ಮಾಡುವುದಿಲ್ಲ. ನೇರವಾಗಿ ಕೇಳುತ್ತೇನೆ, ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ. ಪಕ್ಷಕ್ಕೆ, ನಾಯಕರಿಗೆ ಮುಜುಗರವಾಗುವಂತೆ ನಡೆದುಕೊಂಡಿಲ್ಲ. ಒಂದು ವೇಳೆ ನಡೆದುಕೊಂಡಿದ್ದರೆ ಎಲ್ಲರಲ್ಲೂ ಕ್ಷಮೆಯಾಚಿಸುವೆ. ಪಕ್ಷ, ಕಾರ್ಯಕರ್ತರ ರಕ್ಷಣೆ ನನಗೆ ಮುಖ್ಯವಾಗಿರುತ್ತೆ ಎಂದು ಹೇಳಿಕೆ ನೀಡಿದ್ದಾರೆ.
ನನ್ನ ರಾಜಕೀಯ ಜೀವನ ದೊಡ್ಡದಲ್ಲ, ಸಣ್ಣ ಪ್ರಯಾಣವಷ್ಟೆ. ರಾಜಕೀಯ ಜೀವನ ಕೇವಲ 15 ವರ್ಷ. ಸಮಾಜ ಸೇವೆ ಕೇವಲ 5 ವರ್ಷದ್ದು. ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನಾಲ್ಕು ಬಾರಿ ಆಯ್ಕೆಯಾಗಿರುವ ಒಬ್ಬ ಶಾಸಕ ನಾನು. ವಿಶ್ವಪ್ರಸಿದ್ಧ ಕ್ಷೇತ್ರದಲ್ಲಿ ಆರಿಸಿ ಬಂದಿರುವ ಶಾಸಕ ನಾನು. ಕ್ಷೇತ್ರದ ಜನರ ಆಸೆಯಿಂದ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ರಾಜಕೀಯವಾಗಿ ನಾನು ಹೇಳಬೇಕಾದದ್ದನ್ನು ಹೇಳಿದ್ದೀನಿ. ಬೇರೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ನಿರ್ಧಾರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಎಂದಿಗೂ ನಾನು ನಿರ್ಧಾರಗಳನ್ನು ಬದಲಿಸಿಕೊಳ್ಳುವುದಿಲ್ಲ. ನಾನು ನನ್ನ ಜಿಲ್ಲೆಯ ಒಬ್ಬ ಮಾಮೂಲಿ ಶಾಸಕನಷ್ಟೆ. ಯಾವುದೇ ರೀತಿಯ ಗೊಂದಲಗಳೂ ನನ್ನಲ್ಲಿ ಇಲ್ಲ. ನನಗೆ ನಾಯಕರು, ಪಕ್ಷದ ಮೇಲೆ ವಿಶ್ವಾಸವಿದೆ. ಆದರೆ ಅವರಿಗೆ ನನ್ನ ಮೇಲೆ ವಿಶ್ವಾಸವಿದೆಯೋ, ಇಲ್ಲವೋ ಎಂಬ ಅನುಮಾನ ಬರ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಕುಟುಂಬದ ಇತಿಹಾಸದಿಂದಲೂ ಪೂಜೆ-ಪುನಸ್ಕಾರ ಮಾಡುತ್ತೇವೆ. ಯಾವುದೇ ಕೆಲಸ ಮಾಡುವ ಮುನ್ನ ಪೂಜೆ ಸಲ್ಲಿಸುತ್ತೇವೆ. 60 ವರ್ಷದ ಹಿಂದೆ ನಮ್ಮ ಹಿರಿಯರು ಈ ದೇಗುಲ ಕಟ್ಟಿಸಿದರು. ವೇಣುಗೋಪಾಲ ಕೃಷ್ಣನ ದೇವಾಲಯವನ್ನು ಕಟ್ಟಿಸಿದ್ದಾರೆ. ನನ್ನ ಅಜ್ಜಿಯ ನೆನಪಿಗಾಗಿ ನನ್ನ ಅಜ್ಜ ಕಟ್ಟಿಸಿರುವ ದೇವಾಲಯ. ಶಿಥಿಲಗೊಂಡಿದ್ದ ಹಲವು ದೇಗುಲಗಳ ಪುನರ್ ಜೀವನಗೊಳಿಸಿದ್ದಾರೆ. ನನ್ನ ತಂದೆಯವರೂ ಕೂಡ ದೇಗುಲಗಳ ಜೀರ್ಣೋದ್ಧಾರ ಮಾಡಿದ್ದಾರೆ. ನಾನೂ ಕೂಡ ದೇವಾಲಯಗಳ ಜೀರ್ಣೋದ್ಧಾರದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ತಂದೆಯ ಆಶಯದಂತೆ ದೇಗುಲಗಳ ಜೀರ್ಣೋದ್ಧಾರ ಮಾಡುವ ಸಂಕಲ್ಪವಿದೆ ಎಂದು ಹೇಳಿದರು.
ಇದನ್ನೂ ಓದಿ
Published On - 1:08 pm, Wed, 11 August 21