ರಾಜ್ಯಸಭೆಯಲ್ಲಿ ಗಲಭೆಯೆಬ್ಬಿಸಿದವರ ವಿರುದ್ಧ ಕ್ರಮ, ನಿಮ್ಮ ವರ್ತನೆಯಿಂದ ರಾತ್ರಿ ನಿದ್ರೆಯೇ ಮಾಡಿಲ್ಲ; ಭಾವುಕರಾದ ವೆಂಕಯ್ಯ ನಾಯ್ಡು

Venkaiah Naidu | ರಾಜ್ಯಸಭಾ ಕಲಾಪದಲ್ಲಿ ನಿನ್ನೆ ವಿಪಕ್ಷ ನಾಯಕರು ಮೇಜಿನ ಮೇಲೆ ಹತ್ತಿ ಗಲಾಟೆ ಮಾಡಿದ್ದರಿಂದ ಸದನದ ಗೌರವ ಹಾಳಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭಾವುಕರಾದ ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಗಲಭೆಯೆಬ್ಬಿಸಿದವರ ವಿರುದ್ಧ ಕ್ರಮ, ನಿಮ್ಮ ವರ್ತನೆಯಿಂದ ರಾತ್ರಿ ನಿದ್ರೆಯೇ ಮಾಡಿಲ್ಲ; ಭಾವುಕರಾದ ವೆಂಕಯ್ಯ ನಾಯ್ಡು
ಭಾವುಕರಾದ ವೆಂಕಯ್ಯ ನಾಯ್ಡು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 11, 2021 | 1:15 PM

ನವದೆಹಲಿ: ಮುಂಗಾರು ಅಧಿವೇಶನದಲ್ಲಿ ಈ ಬಾರಿ ಪೆಗಾಸಸ್ ಗೂಢಚಾರಿಕೆ, ಕೃಷಿ ಕಾಯ್ದೆಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಗಲಾಟೆಯೆಬ್ಬಿಸುತ್ತಿವೆ. ನಿನ್ನೆ ಕೂಡ ರಾಜ್ಯಸಭೆ ಕಲಾಪದ ವೇಳೆ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಮೇಜಿನ ಮೇಲೆ ಹತ್ತಿ ನಿಂತು, ಕಡತವನ್ನು ರಾಜ್ಯಸಭಾ ಸಭಾಪತಿ ಪೀಠದ ಕಡೆಗೆ ಎಸೆದು ಗಲಭೆಯೆಬ್ಬಿಸಿದ್ದರು. ವಿರೋಧ ಪಕ್ಷಗಳ ಹೈಡ್ರಾಮಾದಿಂದ ನಿನ್ನೆಯ ರಾಜ್ಯಸಭಾ ಕಲಾಪವನ್ನು ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ರಾಜ್ಯಸಭಾ ಅಧಿವೇಶನದಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಸಭಾಪತಿ ವೆಂಕಯ್ಯ ನಾಯ್ಡು ರಾಜ್ಯಸಭೆಯಲ್ಲಿ ಅಸಭ್ಯ ವರ್ತನೆ ತೋರಿರುವ ವಿಪಕ್ಷ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ವೇಳೆ ಭಾವುಕರಾದ ವೆಂಕಯ್ಯ ನಾಯ್ಡು ಸಭಾಪತಿಯಾದ ನನ್ನಿಂದ ಈ ಸದನದ ಗೌರವವನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಬಹಳ ನೋವಾಗುತ್ತಿದೆ ಎಂದು ಕಣ್ತುಂಬಿಕೊಂಡರು.

ಮಂಗಳವಾರದ ಕಲಾಪದ ವೇಳೆ ವಿರೋಧ ಪಕ್ಷದ ಕೆಲ ಸದಸ್ಯರು ಸದನದ ಬಾವಿಗಿಳಿದು ಟೇಬಲ್ ಹತ್ತಿ ಗಲಾಟೆ ಮಾಡಿದರು. ಅವರಿಂದ ಈ ಸದನದ ಎಲ್ಲಾ ಪಾವಿತ್ರ್ಯತೆ ಹಾಳಾಗಿದೆ. ಸದನದ ಗೌರವವನ್ನು ಹಾಳು ಮಾಡಿ ಅಸಭ್ಯ ವರ್ತನೆ ತೋರಿ ಕಲಾಪಕ್ಕೆ ಅಡ್ಡಿ ಪಡಿಸಿದರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ.

ಕೃಷಿ ಕಾಯ್ದೆ ಹಾಗೂ ಪೆಗಾಸಸ್ ಹಗರಣವನ್ನು ಮುಂದಿಟ್ಟುಕೊಂಡು ಚರ್ಚೆ ಮಾಡುವ ಬದಲು ಮೇಜಿನ ಮೇಲೆ ಹತ್ತಿ ಗಲಾಟೆ ಮಾಡಿದ್ದನ್ನು ಇಡೀ ರಾಜ್ಯದ ಜನರು ನೋಡಿದ್ದಾರೆ. ಈ ಹಿಂದೆ ಕೂಡ ಕೇಂದ್ರ ಸಚಿವರು ಪೆಗಾಸಸ್ ಕುರಿತು ಹೇಳಿಕೆ ನೀಡುವಾಗ ಅವರ ಹೇಳಿಕೆಯನ್ನು ಕಸಿದುಕೊಂಡು ಹರಿದುಹಾಕಿದ ವಿಪಕ್ಷ ನಾಯಕರ ವರ್ತನೆಯಿಂದ ಸದನದ ಗೌರವ ಹಾಳಾಗಿತ್ತು. ವಿಪಕ್ಷಗಳ ನಾಯಕರ ವರ್ತನೆ ಮಿತಿ ಮೀರಿದೆ. ನಿನ್ನೆಯ ಘಟನೆಯ ಬಳಿಕ ನನ್ನ ನೆಮ್ಮದಿ ಹಾಳಾಗಿದೆ. ಕಡತವನ್ನು ನನ್ನ ಪೀಠದತ್ತ ಎಸೆಯುವಂತಹ ವರ್ತನೆ ತೋರಿದ ಸದಸ್ಯರ ಬಗ್ಗೆ ನನಗೆ ಬೇಸರವಾಗಿದೆ ಎಂದು ವೆಂಕಯ್ಯ ನಾಯ್ಡು ಅಸಮಾಧಾನ ಹೊರಹಾಕಿದ್ದಾರೆ.

ನಿನ್ನೆಯ ಘಟನೆಯಿಂದ ಬೇಸರವಾಗಿ ನಾನು ರಾತ್ರಿಯಿಡೀ ನಿದ್ರೆ ಮಾಡಿಲ್ಲ. ನಿಮ್ಮ ಈ ದುರ್ವರ್ತನೆಗೆ ಕಾರಣವೇನೆಂದು ಯೋಚಿಸಿ ನನಗೆ ಸಾಕಾಗಿದೆ. ಯಾಕೆ ಈ ರೀತಿ ವರ್ತನೆ ಮಾಡುತ್ತಿದ್ದೀರೆಂದು ನೀವೇ ಹೇಳಿಬಿಡಿ. ಸದನದ ಬಾವಿಗಿಳಿದು ನಿನ್ನೆ ನೀವು ವರ್ತಿಸಿದ ರೀತಿಯಿಂದ ಸದನದ ಗೌರವ ಕುಸಿದುಹೋಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಇದನ್ನೂ ಓದಿ: Monsoon Session 2021: ಕೇಂದ್ರ ಸಚಿವರ ಭಾಷಣದ ಪ್ರತಿಯನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ರಾಜ್ಯಸಭೆಯಿಂದ ಅಮಾನತು

ರಾಜ್ಯಸಭೆ ಸದನ ನಾಯಕರಾಗಿ ಪಿಯೂಶ್ ಗೋಯಲ್ ನೇಮಕ; ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗ್ತಾರಾ ರಾಹುಲ್ ಗಾಂಧಿ?

(Rajya Sabha Chairman Venkaiah Naidu Breaks down and says opposition leaders who created ruckus will face action)

Published On - 1:06 pm, Wed, 11 August 21