ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್​ನಿಂದ ಬಂದವರು ಕಾರಣ; ಅವರ ಋಣ ತೀರಿಸಬೇಕು: ಕೆಎಸ್ ಈಶ್ವರಪ್ಪ

KS Eshwarappa: ಕಾಂಗ್ರೆಸ್​ನವರು ಪ್ರತಿಭಟನೆ ಮಾಡಲಿ ಬಿಡ್ರೀ ಬೇಡ ಅಂದವರು ಯಾರು. ಕೆಟ್ಟ ಕನಸು ಬೀಳ್ತಿರುವುದು ಸಿದ್ದರಾಮಯ್ಯಗೆ, ನನಗೆ ಕನಸು ಬೀಳ್ತಿಲ್ಲ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಈಶ್ವರಪ್ಪ ಹೇಳಿದ್ದಾರೆ.

ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್​ನಿಂದ ಬಂದವರು ಕಾರಣ; ಅವರ ಋಣ ತೀರಿಸಬೇಕು: ಕೆಎಸ್ ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ
Follow us
TV9 Web
| Updated By: ganapathi bhat

Updated on:Aug 11, 2021 | 3:05 PM

ಬೆಳಗಾವಿ: ಕರ್ನಾಟಕದ ಈ ಸರ್ಕಾರದ ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್​ನಿಂದ ಬಂದವರು ಕಾರಣ‌. ಅವರ ಋಣ ನಾವು ತೀರಿಸಬೇಕು. ಅವರು ಬರಲಿಲ್ಲ ಅಂದ್ರೆ ಈ ಸರ್ಕಾರ ಬರ್ತಿರಲಿಲ್ಲ. ಹಾಗಾಗಿ, ಅಷ್ಟು ಜನರಿಗೆ ಮಂತ್ರಿ ಸ್ಥಾನ ಕೊಟ್ಟು ಉಳಿದಿದ್ರಲ್ಲಿ ನಾವು ಹಂಚಿಕೊಳ್ಳಬೇಕು. ಈ ಸಂದರ್ಭದಲ್ಲಿ ಒಬ್ರದ್ದು ಇಬ್ರದ್ದು ಸಮಸ್ಯೆ ಇದೆ. ಅದನ್ನು ಮುಖ್ಯಮಂತ್ರಿ ಬಗೆಹರಿಸುತ್ತಾರೆ. ಇದ್ರಲ್ಲಿ ಆನಂದ್ ಸಿಂಗ್ ಅವರ ಸಮಸ್ಯೆ ಕೂಡ ಪರಿಹಾರ ಆಗುತ್ತೆ ಎಂದು ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ಕೊಡ್ತಾರೆ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ವಿಚಾರವಾಗಿಯೂ ಅವರು ಮಾತನಾಡಿದ್ದಾರೆ. ನಾಗ್ಪುರದಲ್ಲಿ ಟ್ರೈನಿಂಗ್ ಪಡೆದಿದ್ದಕ್ಕೆ ಆ ಪದ ನನ್ನ ಬಾಯಲ್ಲಿ ಬರಬಾರದಿತ್ತು ಅಂತಾ ಹೇಳಿದ್ದೇನೆ. ಆದ್ರೆ ಹರಿಪ್ರಸಾದ್ ನನಗೆ ಜೋಕರ್ ಅಂದ್ರು, ಪ್ರಧಾನಿ ಮೋದಿಗೆ ಸುಲಭ ಶೌಚಾಲಯಕ್ಕಿಡಬೇಕು ಅಂದ್ರು, ಇದನ್ನು ಕಾಂಗ್ರೆಸ್​ನವರು ಒಪ್ಪುವುದಾದರೆ ಸರಿ. ಇಲ್ಲ ಅಂದ್ರೆ ಇಟಲಿ ಯೂನಿವರ್ಸಿಟಿಯಲ್ಲಿ ಅವರಿಗೆ ಕೊಟ್ಟ ಟ್ರೈನಿಂಗ್​ನಿಂದ ಕ್ಷಮೆ ಕೇಳಲ್ಲಾ ಅಂದುಕೊಳ್ತೀನಿ ಎಂದು ಈಶ್ವರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ನವರು ಪ್ರತಿಭಟನೆ ಮಾಡಲಿ ಬಿಡ್ರೀ ಬೇಡ ಅಂದವರು ಯಾರು. ಕೆಟ್ಟ ಕನಸು ಬೀಳ್ತಿರುವುದು ಸಿದ್ದರಾಮಯ್ಯಗೆ, ನನಗೆ ಕನಸು ಬೀಳ್ತಿಲ್ಲ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಈಶ್ವರಪ್ಪ ಹೇಳಿದ್ದಾರೆ.

ಕೊರೊನಾ ಮೂರನೇ ಅಲೆ ಯಾವ ಲೆಕ್ಕ ಬಿಡಿ ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ. ಸಿಇಒ ಕಡೆಯಿಂದ ವರದಿ ತೆಗೆದುಕೊಳ್ಳುತ್ತಿದ್ದೇನೆ. ಜಲಪ್ರವಾಹದ ಕುರಿತು ರಿಪೋರ್ಟ್ ತರಸಿಕೊಳ್ಳುತ್ತಿದ್ದೇನೆ. ಆ ರಿಪೋರ್ಟ್ ಬಂದಕೂಡಲೇ ಪರಿಹಾರದ ಕುರಿತು ಸಿಎಂ ಜತೆಗೆ ಚರ್ಚೆ ಮಾಡುತ್ತೇನೆ ಎಂದು ಚಿಕ್ಕೋಡಿ ಪಟ್ಟಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಕೊರೊನಾ ನಿರ್ವಹಣೆ ಬಗ್ಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಕೊರೊನಾ 3ನೇ ಅಲೆ ಬಂದರೆ ಬರಲಿ ಬಿಡಿ. ಕೊರೊನಾ 2ನೇ ಅಲೆ ಯಶಸ್ವಿಯಾಗಿ ನಿಭಾಯಸಿದ್ದೇವೆ. ಇನ್ನು ಮೂರನೇ ಅಲೆ ಯಾವ ಲೆಕ್ಕಬಿಡಿ ಎಂದು ಈಶ್ವರಪ್ಪ ಹೇಳಿದ್ದಾರೆ.

ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಗಣೇಶ್ ಹುಕ್ಕೇರಿ ನಿನ್ನೆ ಮೂರು ಗಂಟೆಗಳ ಕಾಲ ನನ್ನ ಜತೆಗೆ ಚರ್ಚೆ ನಡೆಸಿದ್ದರು. ಈ ವೇಳೆ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಅನುದಾನ ಕೊಡುತ್ತೇನೆ ಅಂತಾ ನಾನು ಹೇಳಿದ್ದೇನೆ ಎಂದು ಗಣೇಶ್ ಹುಕ್ಕೇರಿ ಹೇಳಿದ್ರು. ಆದರೆ, ಗಣೇಶ್ ಹುಕ್ಕೇರಿ ಹೆಚ್ಚು ಅನುದಾನದ ಕುರಿತು ನನ್ನ ಬಳಿ ಕೇಳಿಯೇ ಇಲ್ಲ. ಗಣೇಶ್ ಹುಕ್ಕೇರಿ ಸುಳ್ಳು ಹೇಳುವುದರಲ್ಲಿ ಬಹಳ ಪರಿಣತ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ನಂತರ ಅವರ ಮಾತಿನಂತೆ ಬೆಳಗಾವಿಗೆ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡ್ತೀನಿ ಎಂದೇ ಹೇಳಿದ್ದಾರೆ.

ಪಕ್ಷಬೇಧ ಬೇಡ; ಎಲ್ಲರೂ ಒಟ್ಟಾಗಿ ಗ್ರಾಮ ಅಭಿವೃದ್ಧಿ ಮಾಡಿ ಗ್ರಾಮದಲ್ಲಿ ಇನ್ನು ಮುಂದೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತರಬೇಡಿ. ಎಲ್ಲರೂ ಸೇರಿ ಒಟ್ಟಿಗೆ ಗ್ರಾಮದಲ್ಲಿ ಅಭಿವೃದ್ಧಿ ಮಾಡಿ ಎಂದು ಈಶ್ವರಪ್ಪ ಕರೆ ನೀಡಿದ್ದಾರೆ. ಕೊರೊನಾ ನಿಯಂತ್ರಿಸುವಲ್ಲಿ ವಿಶ್ವದಲ್ಲೇ ಭಾರತ ಮೊದಲು ಇದೆ. ಕರ್ನಾಟಕಕ್ಕೆ ಕೊರೊನಾ 3ನೇ ಅಲೆ ಬಂದರೆ ಬರಲಿ ಬಿಡಿ. ಕೊರೊನಾ 2ನೇ ಅಲೆ ಯಶಸ್ವಿಯಾಗಿ ನಿಭಾಯಸಿದ್ದೇವೆ. ಇನ್ನು ಮೂರನೇ ಅಲೆ ಯಾವ ಲೆಕ್ಕಬಿಡಿ ಎಂದು ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ಈಶ್ವರಪ್ಪ ಹರಕುಬಾಯಿ ದಾಸ, ನಾಗಪುರ ವಿವಿ ದ್ವೇಷ, ಅಸೂಯೆ ತುಂಬಿ ರಸ್ತೆಗೆ ಬಿಡುತ್ತಾರೆ: ಬಿ.ಕೆ.ಹರಿಪ್ರಸಾದ್

ನನಗೆ ಬಿಪಿ ಶುಗರ್ ಇಲ್ಲ, ನನ್ನ ತಂಟೆಗೆ ಬಂದವರಿಗೆ ಬಿಪಿ ಶುಗರ್ ಬರುತ್ತೆ- ಸಚಿವ ಕೆ.ಎಸ್.ಈಶ್ವರಪ್ಪ

(KS Eshwarappa on BJP MLAs Corona Third Wave Rural Development at Belagavi)

Published On - 3:04 pm, Wed, 11 August 21

ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ