ಈಗ ಕೊಟ್ಟ ಖಾತೆಯಲ್ಲೇ ಮುಂದುವರಿಯುತ್ತೇನೆ; ಅಧಿಕಾರ, ಅಂತಸ್ತಿಗೆ ಆಸೆ ಪಟ್ಟು ಬಿಜೆಪಿಗೆ ಬಂದಿಲ್ಲ: ಎಂಟಿಬಿ ನಾಗರಾಜ್
MTB Nagaraj: ನಾನು ಅಧಿಕಾರ, ಹಣದ ಆಮಿಷಕ್ಕೆ ಬರಲಿಲ್ಲ. ನನ್ನ ಬಳಿ ಎಲ್ಲವೂ ಇದೆ. ನಾನು ಯಾವುದೇ ಅಪೇಕ್ಷೆ ಇಲ್ಲದೆ ಬಿಜೆಪಿಗೆ ಬಂದವನು. ರಾಜಕೀಯ ಹರಿಯೋ ನೀರು. ಜನರಿಗೆ ಕೆಲಸ ಮಾಡಬೇಕು, ಪಕ್ಷಕ್ಕೆ ಒಳ್ಳೆಯದು ಮಾಡಬೇಕು ಎಂದು ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ನನಗೆ ಈಗ ಕೊಟ್ಟ ಖಾತೆಯಲ್ಲೇ ಮುಂದುವರಿಯುತ್ತೇನೆ. ನಾನು ಅಧಿಕಾರ, ಅಂತಸ್ತಿಗೆ ಆಸೆ ಪಟ್ಟು ಬಿಜೆಪಿಗೆ ಬಂದಿಲ್ಲ. ನಾನು ಎಲ್ಲೇ ಇದ್ದರೂ ಜನಸೇವೆಯೇ ನನ್ನ ಉದ್ದೇಶ ಎಂದು ಬೆಂಗಳೂರಿನಲ್ಲಿ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ನಿಲುವು ಇದೇ ಖಾತೆಯಲ್ಲಿ ಇದೇ ಪಕ್ಷದಲ್ಲಿ ಮುಂದುವರಿಯೋದು. ಇದೇ ಪಕ್ಷದಲ್ಲಿ ಮುಂದಿವರಿಯುತ್ತೇನೆ. ಯಾವುದೇ ಅಧಿಕಾರ ಅಂತಸ್ತಿಗೆ ಆಸೆ ಪಟ್ಟು ಪಕ್ಷಕ್ಕೆ ಬಂದವನಲ್ಲ. ಎಲ್ಲ ಅಧಿಕಾರ ಅಂತಸ್ತು ನನ್ನ ಬಳಿ ಇದೆ ಎಂದು ಅವರು ಹೇಳಿದ್ದಾರೆ.
ಸನ್ಯಾಸತ್ವ ತಗೊಂಡಿಲ್ಲ ನಾನು, ರಾಜಕೀಯ ಅನ್ನೋದು ಹರಿಯುವ ನೀರು. ಎಲ್ಲೇ ಇದ್ರೂ ಪ್ರಾಮಾಣಿಕವಾಗಿ ಜನ ಸೇವೆ ಮಾಡುವುದಷ್ಟೇ ನನ್ನ ಉದ್ದೇಶ. ಆನಂದ್ ಸಿಂಗ್ ನಿರ್ಧಾರ ಅವಯ ವೈಯಕ್ತಿಕ ನಿರ್ಧಾರ. ಅದರಲ್ಲಿ ನಾನು ಯಾವುದೇ ಸಲಹೆ ಕೊಡೋದಿಲ್ಲ. ಆನಂದ್ ಸಿಂಗ್ ಬೆಂಬಲಕ್ಕೆ ನಾನಿಲ್ಲ ಎಂದೂ ನಾಗರಾಜ್ ತಿಳಿಸಿದ್ದಾರೆ.
ನಾನು ಇದೇ ಖಾತೆಯಲ್ಲೇ ಕೆಲಸ ನಿರ್ವಹಣೆ ಮಾಡಿಕೊಂಡು ಹೋಗುತ್ತೇನೆ. ಈ ಮೊದಲು ನಾನು ಹೇಳಿದ್ದು ನಿಜ. ಸಿಎಂ ಜೊತೆ ಮಾತುಕತೆ ಮಾಡಿದ್ದೇನೆ. ವರಿಷ್ಠರ ಜೊತೆ ಚರ್ಚೆ ಮಾಡೋಣ ಅಂತ ಹೇಳಿದ್ದೇನೆ. ಆದರೆ, ಹಿಂದೆ ಎಂದೂ ದೆಹಲಿಗೂ ಹೋಗಿಲ್ಲ, ಮುಂದೆಯೂ ಹೋಗಲ್ಲ. ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ. ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡಿದ್ದಾರೆ. ಕರೆತಂದ ಅಶೋಕ್ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಮುಖ್ಯಮಂತ್ರಿಗಳು ಯಾವ ನಿರ್ಧಾರ ಬೇಕಾದ್ರೂ ತೆಗೆದುಕೊಳ್ಳಲಿ. 2023ರ ವರೆಗೂ ಇರ್ತೇನೆ. ಪಕ್ಷಕ್ಕೆ ಬಂದಿದ್ದೇನೆ, ಇಲ್ಲಿಯೇ ಇರ್ತೇನೆ. ಮುಂದೆಯೂ ಇಲ್ಲೆ ಟಿಕೆಟ್ ಸಿಗಲಿದೆ ಎಂದು ನಾಗರಾಜ್ ತಿಳಿಸಿದ್ದಾರೆ.
ನಾನು ಅಧಿಕಾರ, ಹಣದ ಆಮಿಷಕ್ಕೆ ಬರಲಿಲ್ಲ. ನನ್ನ ಬಳಿ ಎಲ್ಲವೂ ಇದೆ. ನಾನು ಯಾವುದೇ ಅಪೇಕ್ಷೆ ಇಲ್ಲದೆ ಬಿಜೆಪಿಗೆ ಬಂದವನು. ರಾಜಕೀಯ ಹರಿಯೋ ನೀರು. ಜನರಿಗೆ ಕೆಲಸ ಮಾಡಬೇಕು, ಪಕ್ಷಕ್ಕೆ ಒಳ್ಳೆಯದು ಮಾಡಬೇಕು ಎಂದು ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.
ರಾಜಕೀಯ ಎಂಬುದು ಒಂದು ಅಂಟು ರೋಗ ಇದ್ದಂತೆ. ನಾವು ಬಿಟ್ಟರೂ ಜನ ಬಿಡಲ್ಲ, ಜನ ಬಿಟ್ಟರೂ ನಾವು ಬಿಡಲ್ಲ. 2023ರವರೆಗೆ ನಾನು ಇದೇ ಖಾತೆಯನ್ನ ನಿಭಾಯಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿ ಗೊಂದಲಗಳಿಗೆ ಉತ್ತರ ನೀಡಿದ್ದಾರೆ. ಖಾತೆ ಬದಲಾವಣೆ, ಖಾತೆ ಕೇಳುವುದು ನಮ್ಮ ಧರ್ಮ. ಆದರೆ, ಖಾತೆ ಬದಲಾವಣೆ, ಖಾತೆ ನೀಡುವುದು ಅವರಿಗೆ ಬಿಟ್ಟದ್ದು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಖಾತೆ ಬದಲಾವಣೆ ತಕ್ಷಣಕ್ಕೆ ಸಾಧ್ಯವಿಲ್ಲ ಎಂದಿರುವ ಸಿಎಂ ಬೊಮ್ಮಾಯಿ; ಅರೆ ಮನಸ್ಸಿನಿಂದ ಹೊರಟ ಎಂಟಿಬಿ ನಾಗರಾಜ್
ನನಗೆ ಬೇಕಾದ ಖಾತೆ ಸಿಕ್ಕಿಲ್ಲ, 2-3 ದಿನಗಳಲ್ಲಿ ಮುಂದಿನ ನಿರ್ಧಾರ ತಿಳಿಸುವೆ: ನೂತನ ಸಚಿವ ಎಂಟಿಬಿ ನಾಗರಾಜ್
(BJP Minister MTB Nagaraj on Karnataka Minister Karnataka Politics)