ಶಂಕಿತ ಉಗ್ರ ಮಾಜ್​​​ ತಂದೆ ಹೃದಯಾಘಾತದಿಂದ ಸಾವು: ತಂದೆಯ ಅಂತಿಮ ದರ್ಶನಕ್ಕೆ ನಾಳೆ ಮಾಜ್​ ಮಂಗಳೂರಿಗೆ?

| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2022 | 7:31 PM

ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮನೀರ್ ಅಹಮದ್, ಚಿಕಿತ್ಸೆ ಫಲಿಸದೇ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.

ಶಂಕಿತ ಉಗ್ರ ಮಾಜ್​​​ ತಂದೆ ಹೃದಯಾಘಾತದಿಂದ ಸಾವು: ತಂದೆಯ ಅಂತಿಮ ದರ್ಶನಕ್ಕೆ ನಾಳೆ ಮಾಜ್​ ಮಂಗಳೂರಿಗೆ?
ಶಂಕಿತ ಉಗ್ರ ಮಾಜ್​ ತಂದೆ ಮನೀರ್ ಅಹಮದ್
Follow us on

ಶಿವಮೊಗ್ಗ: ಶಂಕಿತ ಉಗ್ರ (suspected terrorists) ಮಾಜ್​​​ ತಂದೆ ಮನೀರ್ ಅಹಮದ್​(57) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮನೀರ್ ಅಹಮದ್, ಚಿಕಿತ್ಸೆ ಫಲಿಸದೇ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿ ಮೂಲದವರಾದ ಮುನೀರ್ ಅಹಮದ್ ತಮ್ಮ ಮಕ್ಕಳ ಶಿಕ್ಷಣದ ಕಾರಣದಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದರು‌. ಆದರೆ ತಮ್ಮ ಮಗ ಮಾಜ್ ಉಗ್ರರೊಂದಿಗೆ ನಂಟು ಹೊಂದಿದ ವಿಷಯ ಕೇಳಿ ಮುನೀರ್ ಅಹಮದ್ ನೊಂದಿದ್ದರು. ಇದೇ ಕಾರಣದಿಂದಾಗಿ ಹೃದಯಾಘಾತ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಮುನೀರ್ ಅಹಮದ್ ತೀರ್ಥಹಳ್ಳಿಯ ಪ್ರತಿಷ್ಟಿತ ಕುಟುಂಬದವರಾಗಿದ್ದು, ಮುನೀರ್ ಅಹಮದ್ ತಂದೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು. ತೀರ್ಥಹಳ್ಳಿಯಲ್ಲಿ ಹೋಲ್ ಸೇಲ್ ಮೀನು ವ್ಯಾಪಾರಿಯಾಗಿದ್ದ ಮಾಜ್ ಮಂಗಳೂರಿನಲ್ಲಿಯೂ ತಮ್ಮ ಉದ್ಯಮ ಮುಂದುವರಿಸಿದ್ದರು. ನಾಳೆ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಶಂಕಿತ ಉಗ್ರ ಮಾಜ್​ನನ್ನು ತಂದೆಯ ಅಂತಿಮ ದರ್ಶನಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.

ಸೋಷಿಯಲ್ ಮೀಡಿಯಾ ಮೂಲಕ ಸತತ ಸಂಪರ್ಕದಲ್ಲಿದ್ದ ಬಂಧಿತ ಶಂಕಿತ ಉಗ್ರರು:

ಶಂಕಿತ ಉಗ್ರರ ಮಧ್ಯೆ ಇನ್ಸ್ಟಾ ಗ್ರಾಮ್, ವೈರ್, ಎಲಿಮೆಂಟ್, ಏಕ್ಕರ್ ಇತ್ಯಾದಿ ಮೆಸೆಂಜರ್ ಅಪ್‌ಗಳ ಮುಖಾಂತರ ಲಿಂಕ್ ಗಳು, ವಿಡಿಯೋ-ಆಡಿಯೋ ಕ್ಲಿಪ್ ಗಳ ರವಾನೆಗೊಂಡಿವೆ. ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್ (ISIS) ನ ಭಯೋತ್ಪಾದಕ ಕೃತ್ಯಗಳನ್ನು ಮುಂದುವರಿಸಲು ಆರೋಪಿಗಳು ಪ್ಲಾನ್ ಮಾಡಿದ್ದು, ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಕೇವಲ ಬ್ರಿಟಿಷರ ಆಡಳಿತದಿಂದ ಮಾತ್ರ ಆದರೆ ನಮಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕಾದರೆ ಈಗ ಇರುವ ಭಾರತದ ವ್ಯವಸ್ಥೆಯ ವಿರುದ್ಧ ಯುದ್ಧ ಸಾರಿ, ಖಿಲಾಫತ್‌, ಸ್ಥಾಪಿಸಬೇಕಾಗಿರುತ್ತದೆ ಮತ್ತು ಷರಿಯಾ ಕಾನೂನು ಜಾರಿಗೊಳಿಸಬೇಕಾಗಿರುತ್ತದೆ ಎಂಬ ವಿಚಾರಧಾರೆಯನ್ನು ಹೊಂದಿದ್ದರು.

ಈ ವಿಚಾರಧಾರೆಗೆ ಅನುಗುಣವಾಗಿ ISIS ಕಾರ್ಯನಿರ್ವಹಿಸುತ್ತಿರುತ್ತದೆ. ಹಾಗೂ ಇಸ್ಲಾಂ ಧರ್ಮವನ್ನು ಉನ್ನತಿಗೇರಿಸುವ ಸಲುವಾಗಿ ಜಿಹಾದ್‌ ಮೂಲಕ ಕಾಫಿರ್‌ಗಳ ವಿರುದ್ಧ ಯುದ್ಧ ಸಾರುತ್ತಿರುತ್ತಾರೆ. ಇದೇ ರೀತಿಯಾಗಿ ಆರೋಪಿಗಳು ಕೂಡಾ ಅವರು ನಂಬಿದಂತೆ ಕಾಫಿರ್‌ಗಳ ವಿರುದ್ಧ, ಜಿಹಾದ್ ಕೆಲಸವನ್ನು ಮಾಡಲು ಅದಕ್ಕೋಸ್ಕರ ಸ್ಫೋಟಕಗಳನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳನ್ನು ಸಂಗ್ರಸಿ ಇಟ್ಟುಕೊಂಡಿರುತ್ತಾರೆಂಬ ಅಘಾತಕಾರಿ ಮಾಹಿತಿ ಹೊರಬಿದ್ದಿದೆ. ಆರೋಪಿತರು ತಮ್ಮ ಮೊಬೈಲ್‌ಗಳಲ್ಲಿ ಟೆಲಿಗ್ರಾಂ ಆಪ್ ನ್ನು ಹೊಂದಿದ್ದರು, ಇದರ ಅಧಿಕೃತ ಮಾಧ್ಯಮವಾದ ISIS ನ ಅಲ್-ಹಕ್ ನ ಟೆಲಿಗ್ರಾಂ ಜನರು ಸದಸ್ಯರಾಗಿದ್ದರು. ಆಮೆ-ಹಯತ್ ನಿಂದ ಐಸಿಎಸ್‌ ಪ್ರಚಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ಆರೋಪಿತರು ಸ್ವೀಕರಿಸುತ್ತಿದ್ದರು ಎನ್ನಲಾಗ್ತಿದೆ.

ಹಿನ್ನೆಲೆ: 

ಮೂವರು ಶಂಕಿತ ಉಗ್ರರನ್ನು  ಶಿವಮೊಗ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಶಾರಿಕ್, ಯಾಸೀನ್ ಮತ್ತು ಮಾಜ್ ಬಂಧಿತರು. ಇವರುಗಳು 2020ರಲ್ಲಿ ಗೋಡೆ ಬರಹ ಕೇಸ್ ನಲ್ಲಿ ಐಸಿಎಸ್ ಆರೋಪಿಗಳಾಗಿದ್ದಾರೆ. ಶಿವಮೊಗ್ಗ ಸಿದ್ದೇಶ್ವರ ನಗರದ ಯಾಸೀನ್, ತೀರ್ಥಹಳ್ಳಿಯ ಶಾರಿಕ್ ಮತ್ತು ಮಂಗಳೂರಿನ ಮಾಜ್ ನನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಗೆ ಐಸಿಸ್ ಉಗ್ರರ ಜೊತೆ ಸಂಪರ್ಕ ಇರುವ ಮಾಹಿತಿ ಲಭ್ಯವಾಗಿದೆ. ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ನಡೆಯಲು ಭಾರಿ ಸಂಚು ನಡೆದಿತ್ತು ಎಂಬ ಭಯಾನಕ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಸಂಬಂಧ ಶಿವಮೊಗ್ಗ ಎಸ್ಪಿ ಬಿ ಎಂ ಲಕ್ಷ್ಮಿ ಪ್ರಸಾದ್ ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದು, ಐಸಿಸ್‌ ನಂಟು ಆರೋಪದಲ್ಲಿ ಇಬ್ಬರ ಬಂಧನವಾಗಿದೆ. 7 ದಿನಗಳ ಕಾಲ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ, ಒಬ್ಬನಿಗೆ ಶೋಧ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:19 pm, Fri, 23 September 22