ಛೇ! ಪ್ರೇಮ ಕಾವ್ಯದ ದುರಂತ ಅಂತ್ಯ… ಮದುವೆಯಾದ 8 ತಿಂಗಳಿಗೆ ಸುಂದರಿಯೊಬ್ಬಳು ನೇಣಿಗೆ ಶರಣು: ಕಾರಣವೇನು ಗೊತ್ತಾ!?

| Updated By: ಸಾಧು ಶ್ರೀನಾಥ್​

Updated on: Jan 19, 2024 | 11:00 AM

ಶಮಿತಾ ಕೂಡಾ ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ಗ್ರಾಮದವಳು. ಈ ಇಬ್ಬರ ಪ್ರೀತಿಯು ಗಾಢವಾಗಿತ್ತು. ವಿದ್ಯಾರ್ಥ್ ತಾಯಿ ಮತ್ತು ಶಮಿತಾ ತಾಯಿ ಇಬ್ಬರು ಕೂಡಾ ಶಾಲೆಯಲ್ಲಿ ಕ್ಲಾಸಮೆಂಟ್ ಆಗಿದ್ದವರು. ಅವರು 22 ವರ್ಷದ ಬಳಿಕ ಮಕ್ಕಳ ಲವ್ ಸ್ಟೋರಿ ಮೂಲಕ ಮತ್ತೆ ಮುಖಾಮುಖಿಯಾಗಿದ್ದು ವಿಶೇಷವಾಗಿತ್ತು!

ಛೇ! ಪ್ರೇಮ ಕಾವ್ಯದ ದುರಂತ ಅಂತ್ಯ... ಮದುವೆಯಾದ 8 ತಿಂಗಳಿಗೆ ಸುಂದರಿಯೊಬ್ಬಳು ನೇಣಿಗೆ ಶರಣು: ಕಾರಣವೇನು ಗೊತ್ತಾ!?
ಪ್ರೇಮ ಕಾವ್ಯದ ದುರಂತ ಅಂತ್ಯ!
Follow us on

ಆ ಇಬ್ಬರು 10 ವರ್ಷಗಳಿಂದ ಪ್ರೀತಿಸಿ ಲವ್ ಮ್ಯಾರೇಜ್ ಆಗಿದ್ದರು. ಸುಂದರ ಯುವತಿಯ ಹಿಂದೆ ಬೆನ್ನುಬಿದ್ದು ಲವ್ ಮಾಡಿ ಪೋಷಕರ ಮನಸ್ಸು ಗೆದ್ದು ಅರೇಂಜ್ ಮ್ಯಾರೇಜ್ ಆಗಿದ್ದ ಪ್ರಿಯಕರ. ಪ್ರೀತಿಸಿದ ಯುವತಿಯನ್ನು ಮದುವೆಯಾಗಿದ್ದು ಆತನಿಗೆ ಸ್ವರ್ಗವೇ ಸಿಕ್ಕಂತಾಗಿತ್ತು. ಯಾವುದೇ ಚಿತ್ರನಟಿಗೆ ಕಮ್ಮಿಯಿಲ್ಲದಂತೆ ಇದ್ದ ಸುಂದರವಾಗಿರುವ ಪತ್ನಿ ಈಗ ಸಾವಿನ ಮನೆ ಸೇರಿದ್ದಾಳೆ.. ಪ್ರೀತಿ, ಪ್ರೇಮ, ಮದುವೆ.. ಯುವತಿಯ ಸಾವು ಕುರಿತು ಒಂದು ವರದಿ ಇಲ್ಲಿದೆ.

ಆಕೆಯ ರೀಲ್ಸ್ ನೋಡುತ್ತಿದ್ದರೇ ಈ ಯುವತಿಯು ಯಾವುದೇ ಚಿತ್ರನಟಿಗಿಂತ ಕಮ್ಮಿಇಲ್ಲ ಎನ್ನಿಸುತ್ತಿತ್ತು. ತೀರ್ಥಹಳ್ಳಿ ತಾಲ್ಲೂಕಿನ ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನವವಿವಾಹಿತೆಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 25 ವರ್ಷ ವಯಸ್ಸಿನ ಶಮಿತಾ ಎಂಬ ಹೆಣ್ಣುಮಗಳು ಮದುವೆಯಾಗಿ 8 ತಿಂಗಳಿಗೆ, ಯುವತಿಯು ಗಂಡನ ಮನೆಯಲ್ಲಿ ಡೆತ್ ನೋಟ್ ಬೆರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇವಳ ಸಾವಿನಿಂದ ಪತಿ, ಹೆತ್ತವರು ಮತ್ತು ಅತ್ತೆ ಮಾವ ಎಲ್ಲರಿಗೂ ಬಿಗ್ ಶಾಕ್ ಆಗಿದೆ. ಇಷ್ಟೊಂದು ಅನ್ಯೋನ್ಯವಾಗಿದ್ದ ದಂಪತಿ. ಈ ನಡುವೆ ಯುವತಿ ಯಾಕೆ ನೇಣಿಗೆ ಶರಣಾಗಿದ್ದು ಎನ್ನುವ ಬೇಸರ ನೋವು ಎಲ್ಲರನ್ನೂ ಕಾಡುತ್ತಿದೆ.

ತೀರ್ಥಹಳ್ಳಿಯ ಸಹ್ಯಾದ್ರಿ ಕಾಲೇಜ್ ನಲ್ಲಿ ಪಿಯುಸಿ ವ್ಯಾಸ್ಯಾಂಗ ಮಾಡಬೇಕಾದ್ರೆ ಶಮಿತಾ ಮತ್ತು ವಿದ್ಯಾರ್ಥ್ ನಡುವೆ ಪರಿಚಯವಿತ್ತು. ಆದರೆ ಆ ಸಂದರ್ಭದಲ್ಲಿ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಆಗಲಿಲ್ಲ. ಒನ್ ಸೈಡ್ ಲವ್ ಆಗಿ ಉಳಿದು ಬಿಟ್ಟಿತ್ತು. ಆದ್ರೆ ಈ ಲವ್ ಮತ್ತೆ ಶುರುವಾಗಿದ್ದು ಉಡುಪಿಯ ಎಂಜಿಎಂ ಕಾಲೇಜ್ ನಲ್ಲಿ ಶಮಿತಾ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ಮತ್ತೆ ಇಬ್ಬರಿಗೂ ರೀಕನೆಕ್ಟ್​​ ಆಗಿತ್ತು.

ಯುವತಿಗೆ ಪೋನ್ ಮೂಲಕವೇ ವಿದ್ಯಾರ್ಥ್ ಪ್ರಪೋಸ್ ಮಾಡಿದ್ದ. ಯುವತಿಯು ಒಂದೇ ಜಾತಿ. ಒಂದೇ ತಾಲೂಕು ಈ ಹಿನ್ನೆಲೆಯಲ್ಲಿ ಈತನ ಲವ್ ಪ್ರಪೋಸ್ ಒಪ್ಪಿಕೊಳ್ಳುತ್ತಾಳೆ. ನಂತರ ಇಬ್ಬರೂ ಪ್ರೀತಿ ಪ್ರೇಮ ಪ್ರಣಯ… ಒಂದೇ ಜೀವ ಎರಡು ದೇಹದಂತೆ ಪ್ರೇಮ ಪಕ್ಷಿಗಳು ಎಲ್ಲೆಡೆ ಹಾರಾಡಿದ್ದರು.

ಈ ನಡುವೆ ಪಿಯುಸಿ ಬಳಿಕ ಪ್ರೀಯಕರ ವಿದ್ಯಾರ್ಥ್ ಅರಣ್ಯ ಇಲಾಖೆಯಲ್ಲಿ ವಾಚರ್ ಕೆಲಸ ಸಿಕ್ಕಿತ್ತು. ಕಳೆದ 10 ವರ್ಷಗಳಿಂದ ವಾಚರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕಾಡು ಸುತ್ತಿ, ಹಚ್ಚು ಹಸಿರು ಪರಿಸರದೊಳಗೆ ತಾನು ಪ್ರೀತಿಸಿದ ಯುವತಿಯದ್ದೆ ಕನಸು ಕಾಣುತ್ತಿದ್ದನು. ಇಬ್ಬರದ್ದು ಒಟ್ಟಿಗೆ ರೀಲ್ಸ್ ನೋಡಿದ್ರೆ ಇಬ್ಬರೂ ಎಷ್ಟೊಂದು ಖುಷಿ ಖುಷಿ ಆಗಿದ್ದರು ಎನ್ನುವುದು ಗೊತ್ತಾಗುತ್ತದೆ. ಹೀಗೆ ಇಬ್ಬರು ಲವ್ ನಲ್ಲಿ ಜಗತ್ತನ್ನೇ ಮರೆತಿದ್ದರು.

ಶಮಿತಾ ಕೂಡಾ ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ಗ್ರಾಮದವಳು. ಈ ಇಬ್ಬರ ಪ್ರೀತಿಯು ಗಾಢವಾಗಿತ್ತು. ವಿದ್ಯಾರ್ಥ್ ತಾಯಿ ಮತ್ತು ಶಮಿತಾ ತಾಯಿ ಇಬ್ಬರು ಕೂಡಾ ಶಾಲೆಯಲ್ಲಿ ಕ್ಲಾಸಮೆಂಟ್ ಆಗಿದ್ದವರು. ಅವರು 22 ವರ್ಷದ ಬಳಿಕ ಮಕ್ಕಳ ಲವ್ ಸ್ಟೋರಿ ಮೂಲಕ ಮತ್ತೆ ಮುಖಾಮುಖಿಯಾಗಿದ್ದು ವಿಶೇಷವಾಗಿತ್ತು!

ತೀರ್ಥಹಳ್ಳಿಯ ಮ್ಯಾರೇಜ್ ಹಾಲ್ ನಲ್ಲಿ ಅದ್ದೂರಿಯಾಗಿ ಆಗಿ ಹಿರಿಯ ಸಮ್ಮುಖದಲ್ಲಿ ಪ್ರೇಮಿಗಳು ಹಸಿಮನೆ ಏರಿದ್ದರು. ನವಜೋಡಿಗೆ ಸಾವಿರಾರು ಜನರು ಬಂದು ಹರಿಸಿ ಹೋಗಿದ್ದರು.

ಪತ್ನಿಗೆ ಎಲ್ಲ ರೀರಿಯಿಂದ ಸಂತಸ ಕೊಟ್ಟಿದ್ದ ಪ್ರೀಯಕರ ಪತಿ. ಎಲ್ಲಡೆ ಸುತ್ತಾಡಿಸಿದ್ದನು. ಕೆಲವು ದಿನಗಳ ಹಿಂದೆಯಷ್ಟೆ ಚಿಕ್ಕಮಗಳೂರು, ಉಡುಪಿ ಸೇರಿದಂತೆ ಇಬ್ಬರು ಟ್ರಿಪ್ ಮಾಡಿದ್ದರು. ಈ ಮಧ್ಯೆ ಶಮಿತಾಳಲ್ಲಿ ಮಾನಸಿಕ ಖಿನ್ನತೆ ಮನೆ ಮಾಡಿತು. ಅದನ್ನು ಗಮನಿಸಿದ ಪತಿಯು ತಕ್ಷಣವೇ ವೈದ್ಯರಲ್ಲಿ ಪರೀಕ್ಷೆ ಕೂಡಾ ಮಾಡಿಸಿದ್ದ.

ಪ್ರೇಯಸಿ, ಮನದನ್ನೆ, ಮಡದಿ ಎಲ್ಲವೂ ಆಗಿದ್ದ ಶಮಿತಾಳನ್ನು ಸಂತಸದಿಂದ ಇಡುವುದಕ್ಕೆ ಸರ್ವ ಪ್ರಯತ್ನ ಮಾಡಿದ್ದ ಗಂಡ ವಿದ್ಯಾರ್ಥ್​​. ಆದ್ರೆ ವಿಧಿಯಾಟ ನೋಡಿ. ಕೊನೆಗೂ ಪ್ರೇಯಸಿಯು ತನ್ನ ಅಮರ ಪ್ರೀತಿ ಮತ್ತು ಅಮೂಲ್ಯ ಜೀವಕ್ಕೆ ಕೊನೆ ಹೇಳಿದ್ದಾಳೆ. ಅಲ್ಲಿಗೆ ಶಮಿತಾ ಮತ್ತು ವಿದ್ಯಾರ್ಥ್ ನಡುವಿನ ಲವ್ ಮ್ಯಾರೇಜ್ ತುಂಬಾ ದಿನ ಮುಂದೆ ಸಾಗಲಿಲ್ಲ. ಮದುವೆಯಾಗಿ ಕೇವಲ 8 ತಿಂಗಳಿಗೆ ನವವಿವಾಹಿತೆ ಸಾವಿನ ಮನೆ ಸೇರಿದ್ದಾಳೆ.

ಘಟನೆ ನಡೆದಿರುವುದು ಮಂಗಳವಾರ ಮಧ್ಯರಾತ್ರಿ. ಸುಮಾರು 12 ರಿಂದ ಒಂದು ಘಂಟೆ ನಡುವೆ. ಆ ದಿನ ಪತಿ ವಿದ್ಯಾರ್ಥ್ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳಿದ್ದನು. ಮಂಗಳವಾರ ರಾತ್ರಿ ಅತ್ತೆ ಮಾವನಿಗೆ ತಿಳಿಸಿ ಶಮಿತಾ ರಾತ್ರಿ ಊಟ ಮಾಡಿ ಮಲಗಲು ಉಪ್ಪರಿಗೆ ಮೇಲೆ ತೆರಳಿದ್ದರು. ಆದರೆ ಬುಧವಾರ ಬೆಳಿಗ್ಗೆ ಬಾಗಿಲು ತೆರೆಯದಿದ್ದ ಹಿನ್ನೆಲೆಯಲ್ಲಿ ಕುಟುಂಬದವರು, ಕೆಲಸದವರು ಕಿಟಕಿಯಿಂದ ನೋಡಿದಾಗ ಶಮಿತಾ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.

ಯುವತಿಯ ಪೋಷಕರು ಆಗಮಿಸಿದ ನಂತರ ಬಾಗಿಲು ಒಡಯಲಾಗಿದೆ. ಮೃತದೇಹದ ಬಳಿ ಡೆತ್ ನೋಟ್ ಲಭ್ಯವಾಗಿದ್ದು ಆರೋಗ್ಯ ಸಮಸ್ಯೆ ಮತ್ತು ಒಂಟಿತನ ಕಾಡುತ್ತಿರುವುದು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ. ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತಹಶೀಲ್ದಾರ್ ಜಕ್ಕನ್ ಗೌಡರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಬಳಿ ಮೃತಳ ದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಶಮಿತಾ ಸಾವಿನ ಕೇಸ್ ದಾಖಲು ಅಗಿದೆ.

ಆಕೆಗಿನ್ನೂ 25 ವರ್ಷ ಮಾತ್ರ. ಪದವೀಧರೆ. ತುಂಬಾ ಬೋಲ್ಡ್ ಆಗಿದ್ದವಳು. ಇಂತಹ ಯುವತಿಯ ಮುಂದೆ ದೊಡ್ಡ ಪ್ರಪಂಚವೇ ಇತ್ತು. ಆದ್ರೆ ಕೇವಲ ಥೈರಾಡ್ಡ್, ಒಂಟಿತನ ಮತ್ತು ಮಕ್ಕಳು ಆಗುವುದಿಲ್ಲ ಎನ್ನುವ ಭಯಕ್ಕೆ ನವ ಗೃಹಿಣಿ ಸಾವಿನ ಮನೆ ಸೇರಿದ್ದು ವಿಪರ್ಯಾಸ.

Published On - 10:49 am, Fri, 19 January 24