ತೀರ್ಥಹಳ್ಳಿ: ಸಂಪೂರ್ಣ ಸುಟ್ಟುಹೋದ ಕಾರು, ವ್ಯಕ್ತಿಯ ಕಳೇಬರ ಪತ್ತೆ

ಕಾರಿನ ಬಣ್ಣ ಅಥವಾ ನೋಂದಣಿ ಸಂಖ್ಯೆಯ ಗುರುತೂ ಸಿಗದಷ್ಟು ಬೆಂಕಿಗಾಹುತಿಯಾದ ಕಾರು ಕಂಡುಬಂದಿದೆ. ಅಲ್ಲದೇ ಕಾರಿನೊಳಗೆ ಸುಟ್ಟುಹೋದ ಕಳೇಬರವೂ ಬೆಚ್ಚಿಬೀಳಿಸಿದೆ.

ತೀರ್ಥಹಳ್ಳಿ: ಸಂಪೂರ್ಣ ಸುಟ್ಟುಹೋದ ಕಾರು, ವ್ಯಕ್ತಿಯ ಕಳೇಬರ ಪತ್ತೆ
ಸುಟ್ಟು ಕರಕಲಾದ ಕಾರು
Updated By: guruganesh bhat

Updated on: Sep 28, 2021 | 5:20 PM

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಅರಗ ಹುಣಸೇಕೊಪ್ಪದ ಮಿಟ್ಲುಗೋಡು ಸಮೀಪ ಸ್ವಿಫ್ಟ್ KA-15,M-3934 ನಂಬರಿನ ಕಾರೊಂದು ಸುಟ್ಟು ಕರಕಲಾಗಿದು ಕಾರಿನೊಳಗೆ ವ್ಯಕ್ತಿಯೋರ್ವರ ಮೃತದೇಹ ಸಂಪೂರ್ಣ ಸುಟ್ಟುಹೋಗಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದುರ್ಘಟನೆ ಜರುಗಿದೆ.

ಮಿಟ್ಲುಗೋಡು ಎಂಬ ಹಳ್ಳಿಯ ಸನಿಹವಿರುವ ದಟ್ಟ ಅರಣ್ಯ ಪ್ರದೇಶದಲ್ಲಿ, ಕೆಲವೇ ದಿನಗಳ ಹಿಂದೆ ಸುಟ್ಟು ಕರಕಲಾಗಿರಬಹುದಾದ ಮಾರುತಿ ಕಂಪನಿಯ ಶಿಪ್ಟ್ ಕಾರೊಂದು ಪತ್ತೆಯಾಗಿದ್ದು, ಅದರೊಳಗೆ ಒಬ್ಬ ವ್ಯಕ್ತಿಯ ಕಳೇಬರ ಸಹ ಪೂರ್ಣ ಪ್ರಮಾಣದಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಕಂಡು ಬಂದಿದೆ. ಇಂದು ಬೆಳಗ್ಗೆ ಉರುವಲಿಗಾಗಿ ಸ್ಥಳೀಯರು ಈ ಪ್ರದೇಶಕ್ಕೆ ಹೋದಾಗ ಕಾರಿನ ಬಣ್ಣ ಅಥವಾ ನೋಂದಣಿ ಸಂಖ್ಯೆಯ ಗುರುತೂ ಸಿಗದಷ್ಟು ಬೆಂಕಿಗಾಹುತಿಯಾದ ಕಾರು ಕಂಡುಬಂದಿದೆ. ಅಲ್ಲದೇ ಕಾರಿನೊಳಗೆ ಸುಟ್ಟುಹೋದ ಕಳೇಬರವೂ ಬೆಚ್ಚಿಬೀಳಿಸಿದೆ.

(Thirthahalli A fully burnt car and man found)