ಆರು ತಿಂಗಳಿನಿಂದ ಸಂಭಾವನೆ ಇಲ್ಲದೆ ಪರದಾಟ, ಬೆಳಗಾವಿಯಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಧರಣಿ

|

Updated on: May 26, 2023 | 2:04 PM

ರಾಜ್ಯದಲ್ಲಿ ಒಂದೆಡೆ ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಜನರು ಹೇಳುತ್ತಿದ್ದರೆ, ಇತ್ತ ನಮ್ಮ ಬಾಕಿ ಸಂಭಾವನೆ ನೀಡುವಂತೆ ಆಗ್ರಹಿಸಿ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಆರು ತಿಂಗಳಿನಿಂದ ಸಂಭಾವನೆ ಇಲ್ಲದೆ ಪರದಾಟ, ಬೆಳಗಾವಿಯಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಧರಣಿ
ಗ್ರಾಮ ವಿದ್ಯುತ್ ಪ್ರತಿನಿಧಿಗಳೇ ಸಂಭಾವನೆಗೆ ಪರದಾಡುತ್ತಿರುವಾಗ ಕಾಂಗ್ರೆಸ್‌ನಿಂದ 200 ಯೂನಿಟ್ ವಿದ್ಯುತ್ ಗ್ಯಾರಂಟಿ
Follow us on

ಬೆಳಗಾವಿ: ಉಚಿತ ವಿದ್ಯುತ್ (Free Electricity) ಭರವಸೆ ಹಿನ್ನೆಲೆ ರಾಜ್ಯದಲ್ಲಿ ಒಂದೆಡೆ ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಜನರು ಹೇಳುತ್ತಿದ್ದರೆ, ಇತ್ತ ನಮ್ಮ ಬಾಕಿ ಸಂಭಾವನೆ ನೀಡುವಂತೆ ಆಗ್ರಹಿಸಿ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ಹೆಸ್ಕಾಂ (HESCOM) ಕಚೇರಿ ಎದುರು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಧರಣಿ ನಡೆಸುತ್ತಿದ್ದು, 6 ತಿಂಗಳಿಂದ ಸಂಭಾವನೆ ಬಾಕಿ ಇರಿಸಿದ್ದಕ್ಕೆ ಆಕ್ರೋಶ ಹೊರಹಾಕುತ್ತಿದ್ದಾರೆ.

2022ರ ಡಿಸೆಂಬರ್‌ನಿಂದ ಈವರೆಗೆ ಹೆಸ್ಕಾಂ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಸಂಭಾವನೆ ನೀಡಿಲ್ಲ. ಹೆಸ್ಕಾಂನಲ್ಲಿ 1200 ಗ್ರಾಮ ವಿದ್ಯುತ್ ಪ್ರತಿನಿಧಿಗಳಿದ್ದು, ಬೈಲಹೊಂಗಲ ವಿಭಾಗದಲ್ಲಿ ನೂರು ಗ್ರಾಮ ವಿದ್ಯುತ್ ಪ್ರತಿನಿಧಿಗಳಿದ್ದೇವೆ. ಡಿಸೆಂಬರ್‌ನಿಂದ ಈವರೆಗೂ ನಮಗೆ ಸಂಭಾವನೆ ನೀಡಿಲ್ಲ. ಪ್ರತಿನಿತ್ಯ 200 ರೂಪಾಯಿ ಪೆಟ್ರೋಲ್‌ಗೆ ಖರ್ಚಾಗುತ್ತದೆ. ನಮ್ಮ ಸಂಭಾವನೆ ನೀಡುವವರೆಗೂ ನಾವು ಪ್ರತಿಭಟನೆ ಕೈ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ನಮ್ಮ ಕೆಲಸ ಖಾಯಂ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಗ್ರಾಮ ವಿದ್ಯುತ್ ಪ್ರತಿನಿಧಿಗಳೇ ಸಂಭಾವನೆಗೆ ಪರದಾಡುತ್ತಿರುವಾಗ ಕಾಂಗ್ರೆಸ್‌ನಿಂದ 200 ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿ ಘೋಷಣೆ ಮಾಡಿದೆ. ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಸಂಭಾವನೆ ನೀಡಲು ಆಗದ ಸ್ಥಿತಿಯಲ್ಲಿ ಹೆಸ್ಕಾಂ ಇದೆಯಾ? ಇದ್ದರೆ ಕಾಂಗ್ರೆಸ್​ ನೀಡಿದ 200 ಯುನಿಟ್ ಉಚಿಯ ವಿದ್ಯುತ್ ಭರವಸೆ ಈಡೇರಲು ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಇದನ್ನೂ ಓದಿ: ಕಾಂಗ್ರೆಸ್​​ 200 ಯುನಿಟ್ ಉಚಿತ ವಿದ್ಯುತ್ ಪ್ರಣಾಳಿಕೆ; ಬೆಸ್ಕಾಂ ಸಿಬ್ಬಂದಿಗೆ ವೃದ್ಧೆ ಆವಾಜ್, ವಿಡಿಯೋ ನೋಡಿ

ಚುನಾವಣಾ ಪೂರ್ವದಲ್ಲಿ ನನಗೂ ಫ್ರೀ ನಿಮಗೂ ಫ್ರೀ ಎಂದು ಹೇಳಿ ಕಾಂಗ್ರೆಸ್ 200 ಯುನಿಟ್​ ಉಚಿತ ವಿದ್ಯುತ್ ಗ್ಯಾರಂಟಿ ಘೋಷಣೆ ಮಾಡಿತ್ತು. ಇದೇ ರೀತಿ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಎಂಬ ಮತ್ತೊಂದು ಗ್ಯಾರಂಟಿ ಕೊಟ್ಟಿತ್ತು. ಯಾವಾಗ ಫಲಿತಾಂಶ ಪ್ರಕಟಗೊಂಡು ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿತೋ ಅಂದಿನಿಂದ ಕಾಂಗ್ರೆಸ್ ನಾಯಕರು ಉಚಿತ ಭರವಸೆಗಳ ಮೇಲೆ ಷರತ್ತು ವಿಧಿಸುವ ಮಾತುಗಳನ್ನಾಡಲು ಆರಂಭಿಸಿದ್ದಾರೆ.

ಆದರೆ, ಚುನಾವಣೆಗೂ ಮನ್ನ ಒಂದು ಮಾತು, ನಂತರ ಒಂದು ಮಾತಿಗೆ ಕಾಂಗ್ರೆಸ್ ವಿರುದ್ಧ ಹಲವು ಜಿಲ್ಲೆಗಳಲ್ಲಿ ರೊಚ್ಚಿಗೆದ್ದಿರುವ ಜನರು, ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಧ್ವನಿಯಾಗಿ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್, ಯಾರು ಕೂಡ ವಿದ್ಯುತ್ ಬಿಲ್ ಕಟ್ಟಬೇಡಿ, ಮಹಿಳೆಯರು ಉಚಿತವಾಗಿಯೇ ಸಾರಿಗೆ ಬಸ್​ನಲ್ಲಿ ಪ್ರಯಾಣಿಸಿ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಯಾವುದೇ ಷರತ್ತು ಇಲ್ಲದೆ 5 ಗ್ಯಾರಂಟಿಗಳನ್ನು ಈಡೇರಿಸಬೇಕು, ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆಯನ್ನು ಕಾಂಗ್ರೆಸ್ ಸರ್ಕಾರಕ್ಕೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ