‘ಉಪಚುನಾವಣೆಯಲ್ಲಿ ಗಿಮಿಕ್‌ಗಳು ವರ್ಕೌಟ್ ಆಗಲ್ಲ’

|

Updated on: Nov 17, 2019 | 4:11 PM

ಮೈಸೂರು: ಸಿದ್ದರಾಮಯ್ಯ ಬಂಡವಾಳ ಬಿಚ್ಚಿಡುತ್ತೇನೆಂಬ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರ ಸಂಬಂಧಿಸಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 30 ವರ್ಷಗಳಿಂದ ಬಿಚ್ಚದ ಬಂಡವಾಳ ಈಗ ಬಿಚ್ಚುತ್ತಾರಾ? ಆಗ ಆಗದೇ ಇರುವ ಕೆಲಸ ಈಗ ಆಗುತ್ತಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಂಟಿಬಿ ನಾಗರಾಜ್​ಗೆ ಪ್ರಶ್ನೆ ಹಾಕಿದ್ದಾರೆ. ಅನರ್ಹರು ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಮಂತ್ರಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡ್ತೇವೆ ಅಂತಿದ್ದಾರಲ್ಲ, ಮಾನ ಮರ್ಯಾದೆ ಇದ್ದಿದ್ರೆ ಆ ಮಾತು ಹೇಳುತ್ತಿದ್ದರಾ? ಈಗಾಗಲೇ ಕೋರ್ಟ್‌ನಲ್ಲಿ ಅನರ್ಹರೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ, ಈಗ ಗೆದ್ದು ಮಂತ್ರಿ […]

‘ಉಪಚುನಾವಣೆಯಲ್ಲಿ ಗಿಮಿಕ್‌ಗಳು ವರ್ಕೌಟ್ ಆಗಲ್ಲ
Follow us on

ಮೈಸೂರು: ಸಿದ್ದರಾಮಯ್ಯ ಬಂಡವಾಳ ಬಿಚ್ಚಿಡುತ್ತೇನೆಂಬ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರ ಸಂಬಂಧಿಸಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

30 ವರ್ಷಗಳಿಂದ ಬಿಚ್ಚದ ಬಂಡವಾಳ ಈಗ ಬಿಚ್ಚುತ್ತಾರಾ? ಆಗ ಆಗದೇ ಇರುವ ಕೆಲಸ ಈಗ ಆಗುತ್ತಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಂಟಿಬಿ ನಾಗರಾಜ್​ಗೆ ಪ್ರಶ್ನೆ ಹಾಕಿದ್ದಾರೆ. ಅನರ್ಹರು ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಮಂತ್ರಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡ್ತೇವೆ ಅಂತಿದ್ದಾರಲ್ಲ, ಮಾನ ಮರ್ಯಾದೆ ಇದ್ದಿದ್ರೆ ಆ ಮಾತು ಹೇಳುತ್ತಿದ್ದರಾ?

ಈಗಾಗಲೇ ಕೋರ್ಟ್‌ನಲ್ಲಿ ಅನರ್ಹರೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ, ಈಗ ಗೆದ್ದು ಮಂತ್ರಿ ಆಗಿ ಕ್ಷೇತ್ರ ಅಭಿವೃದ್ಧಿ ಮಾಡ್ತಾರಾ? ಇದೆಲ್ಲಾ ಚುನಾವಣೆಗೆ ಮಾತ್ರ ಮಾತನಾಡುವ ಮಾತುಗಳು. ಎಚ್.ವಿಶ್ವನಾಥ್ ಸಹ ಚುನಾವಣೆಗಾಗಿ ಹುಣಸೂರು ಜಿಲ್ಲೆ ಬಗ್ಗೆ ಮಾತನಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಗಿಮಿಕ್‌ಗಳು ವರ್ಕೌಟ್ ಆಗಲ್ಲ ಎಂದು ಹೆಚ್.ವಿಶ್ವನಾಥ್ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Published On - 4:11 pm, Sun, 17 November 19