ಬೆಂಗಳೂರು: ಇಂದು ದೇಶದಾದ್ಯಂತ ಮುಸ್ಲಿಂ (Muslim) ಬಾಂಧವರು ಬಕ್ರೀದ್ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪ್ರಾರ್ಥನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಭಾಗಿಯಾಗಿದ್ದರು. ತಲೆಗೆ ಟೋಪಿ ಧರಿಸಿ ಸಿದ್ದರಾಮಯ್ಯ ಅಲ್ಲಾನನ್ನು ಸ್ಮರಿಸಿದರು. ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು. ಎಲ್ಲರೂ ಅಲ್ಲಾನಲ್ಲಿ ಪ್ರಾರ್ಥನೆ ಮಾಡಬೇಕು. ನಾನೂ ಕೂಡಾ ದೇಶದಲ್ಲಿ ಶಾಂತಿ ಕಾಪಾಡುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಿದ್ದರಾಮಯ್ಯ ದೇವಾಲಯಕ್ಕೆ ಭೇಟಿ ನೀಡಿದರು. ಚಾಮರಾಜಪೇಟೆ ಮಲೆಮಹದೇಶ್ವರ ದೇಗುಲಕ್ಕೆ ಭೇಟಿ ನೀಡಿ, ಮಲೆಮಹದೇಶ್ವರನಿಗೆ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯಗೆ ಶಾಸಕ ಜಮೀರ್ ಅಹ್ಮದ್ ಖಾನ್, ಪುತ್ರ ಸಾಥ್ ನೀಡಿದರು. ದೇವಾಲಯದಲ್ಲಿ ಪುರೋಹಿತರು ಸಿದ್ದು, ಜಮೀರ್ ಹಣೆಗೆ ಕೇಸರಿ ಬೊಟ್ಟು ಹಚ್ಚಿದರು.
ಇದನ್ನೂ ಓದಿ: ಬಾಗಲಕೋಟೆಯ ಕೆರೂರಿನಲ್ಲಿ ಗುಂಪು ಘರ್ಷಣೆ ಪ್ರಕರಣ: ಚಾಕು ಇರಿತಕ್ಕೆ ಒಳಗಾದ ಅರುಣ ಕಟ್ಟಿಮನಿ ಮೊದಲ ಪ್ರತಿಕ್ರಿಯೆ
ಬಕ್ರೀದ್ ಹಬ್ಬ ಹಿನ್ನೆಲೆ ಚಾಮರಾಜಪೇಟೆ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು. ಮುಂಜಾಗ್ರತಾ ಕ್ರಮವಾಗಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
ಸಿದ್ದರಾಮೋತ್ಸವದ ಬಗ್ಗೆ ಜೋಶಿ ಲೇವಡಿ:
ಸಿದ್ದರಾಮೋತ್ಸವದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಸಿದ್ದರಾಮೋತ್ಸವ ಮಾಡಲಿ. ನಾವು ಸಿದ್ದರಾಮಯ್ಯ ಅಂತ್ಯೋತ್ಸವ ಮಾಡುತ್ತೇವೆ ಅಂತಾ ಒಳಗೊಳಗೆ ಮಾತಾಡುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ಅನೇಕ ಸ್ಕೀಂಗಳಲ್ಲಿ ಕಾಂಗ್ರೆಸ್ನವರು ದುಡ್ಡು ಹೊಡೀತಿದ್ದರು.ಈಗ ಅದೆಲ್ಲಾ ನಿಂತು ಹೋಗಿದೆ ಎಂದು ಕಾಂಗ್ರೆಸ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ: Rajnath Singh Birthday Special: ಇಂದು ರಕ್ಷಣಾ ಸಚಿವ ರಾಜನಾಥ್ ಹುಟ್ಟುಹಬ್ಬ; 10 ಕುತೂಹಲಕರ ಮಾಹಿತಿ ಇಲ್ಲಿದೆ
Published On - 11:55 am, Sun, 10 July 22